Honeymoon Package : ಹನಿಮೂನ್‌ಗೆಂದು ಕರೆದುಕೊಂಡು ಹೋದ ಟ್ರಾವೆಲ್‌ ಕಂಪನಿ, ದಂಪತಿಯನ್ನು ಸಮುದ್ರದ ಮಧ್ಯದಲ್ಲೇ ಬಿಟ್ಟು ಬಂದಿದ್ಯಾಕೆ?

Honeymoon Package: ಪ್ರವಾಸ ಕೈಗೊಳ್ಳಲು ಹಲವಾರು ಟೂರ್ ಪ್ಯಾಕೇಜ್ (Tour Package)​ ಇರುತ್ತವೆ. ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ಕರೆದುಕೊಂಡು ಹೋಗಿ, ಮರಳಿ ಊರಿಗೆ ಬಿಟ್ಟುಬಿಡುತ್ತಾರೆ. ಹಾಗೆಯೇ ಹನಿಮೂನ್​ (Honeymoon) ಹೋಗೋದಿಕ್ಕೂ ಪ್ಯಾಕೇಜ್ ಗಳಿವೆ. ಯುವ ಉತ್ಸಾಹಿ ನವದಂಪತಿಗಳನ್ನು ಎಲ್ಲಾ ಮನಮೋಹಕ ಸ್ಥಳಗಳಿಗೆ ಭೇಟಿ ಮಾಡಿಸಿ, ನಂತರ ಸುರಕ್ಷಿತವಾಗಿ ಮರಳಿ ಊರಿಗೆ ಕರೆತರುತ್ತಾರೆ. ಮದುವೆಯಾದ ಹೊಸತರಲ್ಲಿರುವ ಜೋಡಿಗಳಿಗೆ ಯಾವುದೇ ತೊಂದರೆ ಆಗದೆ, ಸಮಯ ವ್ಯರ್ಥ ಆಗದಂತೆ ಎಲ್ಲಾ ವ್ಯವಸ್ಥೆ ಕಲ್ಪಿಸಿ, ಹೋಟೆಲಿನಿಂದ ಹಿಡಿದು ಹಲವು ಸ್ಥಳಗಳಿಗೆ ನೇರ ಭೇಟಿಯ ಅವಕಾಶ ಕಲ್ಪಿಸುವುದು ಹನಿಮೂನ್ ಪ್ಯಾಕೇಜಿನ ಉದ್ದೇಶ. ಆದರೆ ಇಲ್ಲೊಂದು ಹನಿಮೂನ್ ಪ್ಯಾಕೇಜ್ ನ (Honeymoon Package) ಎಡವಟ್ಟಿನಿಂದ ಏನಾಗಿದೆ ಗೊತ್ತಾ? ಹನಿಮೂನ್‌ಗೆಂದು ದಂಪತಿಯನ್ನು ಕರೆದುಕೊಂಡು ಹೋದ ಟ್ರಾವೆಲ್‌ ಏಜೆನ್ಸಿ, ಅವರನ್ನು ಸಮುದ್ರದ ಮಧ್ಯದಲ್ಲೇ ಬಿಟ್ಟು ಬಂದಿದ್ದಾರೆ. ಈ ಸ್ಟೋರಿ ಓದಿದರೆ ನೀವೂ ಶಾಕ್ ಆಗ್ತೀರಾ!!.

ಸೆಪ್ಟೆಂಬರ್ 2021ರಲ್ಲಿ ಎಲಿಜಬೆತ್ ವೆಬ್‌ಸ್ಟರ್ ಮತ್ತು ಅಲೆಕ್ಸಾಂಡರ್ ಬರ್ಕಲ್ ಎಂಬ ದಂಪತಿ ಹವಾಯಿಯಲ್ಲಿ ಹನಿಮೂನ್ ಹೋಗುವುದೆಂದು ಪ್ಲಾನ್ ಮಾಡಿದರು. ಆಗ ಅವರು ಸೈಲ್ ಮಾಯಿ ಎಂಬವರೊಂದಿಗೆ ಸ್ನಾರ್ಕ್ಲಿಂಗ್ ಟೂರ್ ಪ್ಯಾಕೇಜ್ ಬುಕ್ ಮಾಡಿದರು. ಈ ದಂಪತಿಗಳು ಮಾಯಿ ಬಳಿಯ ಸಣ್ಣ ದ್ವೀಪವಾದ ಲಾನೈಗೆ ಸ್ನಾರ್ಕ್ಲಿಂಗ್ ಪ್ರವಾಸಕ್ಕಾಗಿ ಟಿಕೆಟ್‌ ಖರೀದಿಸಿದರು. ಹಾಗೇ ನಿರ್ಧರಿಸಿದಂತೆ ಹನಿಮೂನಿಗೆ ಅಲ್ಲಿಗೆ ತೆರಳಿದರು.

ಅಲ್ಲಿಗೆ ಹೊರಟ ನೌಕೆಯು ಸ್ನಾರ್ಕ್ಲಿಂಗ್ ಸೈಟ್‌ಗೆ ಬಂದ ನಂತರ ಕ್ಯಾಪ್ಟನ್ ಮತ್ತೊಂದು ಸ್ಥಳಕ್ಕೆ ಹೋಗುವ ಮೊದಲು, ‘ ಸ್ವಲ್ಪ ಸುತ್ತಾಡಿರಿ, ಇಲ್ಲಿನ ಸ್ಥಳವನ್ನು ಆನಂದಿಸಲು ಒಂದು ಗಂಟೆಯ ಸಮಯವಿದೆ. ನಂತರ ಹೊರಡುವುದು ‘ ಎಂದು ಹೇಳಿದ್ದರು. ಈ ವೇಳೆ ದಂಪತಿಗಳು ದ್ವೀಪದಲ್ಲಿ ಮೈಮರೆತು, ಸ್ವಿಮ್​ ಮಾಡ್ತಾ, ಹಾಯಾಗಿದ್ದರು. ಅಷ್ಟೊತ್ತಿಗೆ ಪ್ಯಾಕೇಜ್​ (package) ತಂಡದವರು ಈ ಜೋಡಿಯನ್ನು ಬಿಟ್ಟು ಬಿಟ್ಟೇ ಹೋಗಿದ್ದಾರೆ. ಸಮುದ್ರದಲ್ಲೇ ಈಜುತ್ತಾ ಮಜಾ ಮಾಡುತ್ತಿದ್ದ ದಂಪತಿಗಳನ್ನು ಬಿಟ್ಟು ಪ್ಯಾಕೇಜ್ ಗಾಡಿ ಮುಂದೆ ಸಾಗಿದೆ. ಈ ವೇಳೆ ಏನು ಕೂಡ ಮಾಡಲು ತೋಚದೆ ದಂಪತಿ ಪಜೀತಿಗಿಡಾಗಿದ್ದಾರೆ. ಅದು ಬೇರೆ ಸಮುದ್ರ ಕಿನಾರೆಯ ಕಡಿಮೆ ಜನಸಂದಣಿಯ ಪ್ರದೇಶ. ಹಾಗಾಗಿ ಅಲ್ಲಿಂದ ಮರಳಿ ಹೋಗಲು ತಿಳಿಯದೆ, ಪ್ಯಾಕೇಜ್ ನವರಿಗಾಗಿ ಕಾದಿದ್ದಾರೆ. ಆದರೆ ಅವರು ಬಾರದೇ ಇದ್ದಾಗ, ದಂಪತಿ ಅಲ್ಲಿಂದ ಹೇಗೋ ವಾಪಾಸ್ಸಾಗಿದ್ದಾರೆ. ನಂತರ ಅವರು ಹನಿಮೂನ್ ಪ್ಯಾಕೇಜ್ ವಿರುದ್ಧ ದೂರು ನೀಡಿದ್ದಾರೆ.

ದಂಪತಿಗಳು ವಕೀಲರಾದ ಜೇರೆಡ್ ಎ. ವಾಶ್ಕೋವಿಟ್ಜ್ ಅವರಲ್ಲಿ, ಟ್ರಾವೆಲ್ಲಿಂಗ್​ ಪ್ಯಾಕೇಜ್​ ಕಂಪನಿಯು “ಹೊರಡಲು ಸರಿಯಾದ ಸಮಯ ನೀಡಡೇ ತಮ್ಮನ್ನು ಬಿಟ್ಟು ಹೋಗಿದ್ದಾರೆ ” ಎಂದು ದೂರು ನೀಡಿದ್ದಾರೆ. ಇದರಿಂದ ತಾವು ಅಲ್ಲೇ ಸಿಲುಕಿಕೊಳ್ಳುವಂತಾಯಿತು. ನಮ್ಮ ಸುಂದರ ಹನಿಮೂನ್ ಕನಸು ಹಾಳಾಯಿತು ಎಂದಿದ್ದಾರೆ. ಅಲ್ಲದೆ, ನಾವು ಹಲವು ಗಂಟೆಗಳ ಕಾಲ ಪ್ಯಾಕೇಜ್​ರವರಿಗಾಗಿ ಕಾಯುತ್ತಲೇ ಇದ್ದೆವು, ಆದರೆ ಪ್ಯಾಕೇಜ್ ನವರು ಹಿಂದಿರುಗಿ ಬರಲೇ ಇಲ್ಲ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.

ತಮ್ಮನ್ನು ಸಮುದ್ರದಲ್ಲೆ ಬಿಟ್ಟು ಹೋದ ಕಾರಣಕ್ಕಾಗಿ ದಂಪತಿಗಳು ಟೂರ್ ಪ್ಯಾಕೇಜ್ ನ ಮೇಲೆ ದಾವೆ ಹೂಡಿದ್ದಾರೆ. ಪ್ಯಾಕೇಜ್ ನ ಈ ಬೇಜವಾಬ್ದಾರಿಗೆ ದಂಪತಿ ಸುಮ್ಮನೆ ಕೂರಲಿಲ್ಲ, ಬದಲಿಗೆ ಈ ಜೋಡಿಗಳು ಹವಾಯಿ ಸ್ನಾರ್ಕ್ಲಿಂಗ್ ಕಂಪನಿಗೆ $5 ಮಿಲಿಯನ್‌ ದಂಡ ತೆರುವಂತೆ ಮಾಡಿದ್ದಾರೆ. ಅಲ್ಲದೆ, ಟ್ರಾವೆಲ್ ಏಜೆನ್ಸಿಗೆ ತಮ್ಮನ್ನು ಜವಾಬ್ದಾರಿ ಇಲ್ಲದೆ ಬಿಟ್ಟು ಬಂದಿರುವುದಕ್ಕೆ ಕೋರ್ಟು ಮೂಲಕ ಎಚ್ಚರಿಕೆ ನೀಡಿದ್ದಾರೆ.

Leave A Reply

Your email address will not be published.