Flipkart sale 2023 : 10,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಮನೆಗೆ ತನ್ನಿ ಎಲ್‌ಇಡಿ ಟಿವಿ

Flipkart sale 2023 :ಹೋಳಿ ಹಬ್ಬಕ್ಕೆ ನಾವೆಲ್ಲ ಕಾಯುತ್ತಿದ್ದೇವೆ. ದಿನವಿಡೀ ಬಣ್ಣಗಳಲ್ಲೇ ಕಳೆಯುವ ಹಬ್ಬದ ಜೊತೆಗೆ ಹಬ್ಬಗಳ ಪ್ರಯುಕ್ತ ಜನಪ್ರಿಯ ಇ-ಕಾಮರ್ಸ್ ವೆಬ್‌ಸೈಟ್‌ (website ) ಫ್ಲಿಪ್‌ಕಾರ್ಟ್ (flipkart ) ವತಿಯಿಂದ (Flipkart sale 2023) ಸಿಹಿ ಸುದ್ದಿ ನೀಡಲಾಗಿದೆ. ಹೌದು ಇ-ಕಾಮರ್ಸ್ ವೆಬ್‌ಸೈಟ್‌ ಫ್ಲಿಪ್‌ಕಾರ್ಟ್ ವತಿಯಿಂದ ಎಲ್‌ಇಡಿ (LED) ಟಿವಿ ಖರೀದಿಯಲ್ಲಿ ಭರ್ಜರಿ ಡಿಸ್ಕೌಂಟ್ (discount ) ನ್ನು ನೀಡಲಾಗುತ್ತಿದೆ.

Mi 5a 32-ಇಂಚಿನ ಎಲ್‌ಇಡಿ ಟಿವಿ:
ಫ್ಲಿಪ್‌ಕಾರ್ಟ್ Mi 5a 32-ಇಂಚಿನ ಎಲ್‌ಇಡಿ ಟಿವಿಯಲ್ಲಿ 52% ಡಿಸ್ಕೌಂಟ್ ನೀಡುತ್ತಿದೆ. ಇದರಿಂದಾಗಿ ₹24,999 ಮೌಲ್ಯದ ಎಲ್‌ಇಡಿ ಟಿವಿ ₹11,999 ಗಳಿಗೆ ಲಭ್ಯವಾಗಲಿದೆ. ಜೊತೆಗೆ ನೀವು ಈ ಟಿವಿ ಖರೀದಿ ಮೇಲೆ ₹ 11000 ಎಕ್ಸ್‌ಚೇಂಜ್ ಬೋನಸ್ ಪ್ರಯೋಜನವನ್ನು ಪಡೆಯಬಹುದಾಗಿದೆ. ಎಲ್ಲಾ ರಿಯಾಯಿತಿಗಳನ್ನು ಪಡೆದರೆ ಕೇವಲ ₹999ಗೆ ಈ ಟಿವಿಯನ್ನು ಖರೀದಿಸಬಹುದು.

Sansui ನ 32 ಇಂಚಿನ HD ರೆಡಿ ಎಲ್‌ಇಡಿ ಸ್ಮಾರ್ಟ್ ಟಿವಿ:
ಈ ಟಿವಿ ಬೆಲೆ ₹ 20990 ಆಗಿದೆ. ಸದ್ಯ ಫ್ಲಿಪ್‌ಕಾರ್ಟ್ ನಲ್ಲಿ ಈ ಟಿವಿ ಖರೀದಿಯಲ್ಲಿ ಬರೋಬ್ಬರಿ ಸಂಪೂರ್ಣ 47% ರಿಯಾಯಿತಿಯನ್ನು ನೀಡಲಾಗುತ್ತಿದೆ. ಅದರ ನಂತರ ಇದರ ಬೆಲೆ 10999 ರೂ ಆಗುತ್ತದೆ. ಅದಲ್ಲದೆ ಈ ಎಲ್‌ಇಡಿ ಟಿವಿಯ ಮೇಲೆ ಎಕ್ಸ್‌ಚೇಂಜ್ ಆಫರ್ ಕೂಡ ಲಭ್ಯವಿದ್ದು ನೀವು ಉತ್ತಮ ಸ್ಥಿತಿಯಲ್ಲಿರುವ ಟಿವಿಯನ್ನು ವಿನಿಮಯ ಮಾಡಿಕೊಂಡರೆ ₹ 9000ಗಳ ಅಗ್ಗದ ದರದಲ್ಲಿ ಈ ಟಿವಿಯನ್ನು ಖರೀದಿಸಬಹುದು.

LG ಯ 32 ಇಂಚಿನ HD ರೆಡಿ ಎಲ್‌ಇಡಿ ಟಿವಿ:
ಇದರ ಮೂಲ ಬೆಲೆ ₹ 21990. ಆದರೆ, ಫ್ಲಿಪ್‌ಕಾರ್ಟ್ನಲ್ಲಿ ಈ ಟಿವಿ ಖರೀದಿಯ ಮೇಲೆ ಭರ್ಜರಿ 36% ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದಲ್ಲದೆ, ಫ್ಲಿಪ್‌ಕಾರ್ಟ್ ಈ ಎಲ್‌ಇಡಿ ಟಿವಿ ಖರೀದಿಯಲ್ಲಿ ₹ 11000 ಎಕ್ಸ್‌ಚೇಂಜ್ ಬೋನಸ್ ಕೂಡ ನೀಡಲಾಗುತ್ತದೆ.

ಥಾಮ್ಸನ್‌ನ 32 ಇಂಚಿನ HD ರೆಡಿ ಎಲ್‌ಇಡಿ ಟಿವಿ:
ನೀವು ಥಾಮ್ಸನ್‌ನ 32 ಇಂಚಿನ HD ರೆಡಿ ಎಲ್‌ಇಡಿ ಟಿವಿಯನ್ನು ಖರೀದಿಸಲು ಬಯಸಿದರೆ ಫ್ಲಿಪ್‌ಕಾರ್ಟ್ ನಲ್ಲಿ ಲಭ್ಯವಿರುವ ₹ 7600 ಎಕ್ಸ್‌ಚೇಂಜ್ ಬೋನಸ್ ಮೂಲಕ 10ಸಾವಿರ ರೂ.ಗಳಿಗಿಂತ ಕಡಿಮೆ ಬೆಲೆಯಲ್ಲಿ ಈ ಟಿವಿಯನ್ನು ಖರೀದಿಸಬಹುದು.

ಸ್ಯಾಮ್‌ಸಂಗ್‌ನ 32-ಇಂಚಿನ HD ರೆಡಿ ಎಲ್‌ಇಡಿ ಟಿವಿ:
ಫ್ಲಿಪ್‌ಕಾರ್ಟ್ ಹೋಳಿ ಸೇಲ್ನಲ್ಲಿ ಈ ಟಿವಿಯನ್ನು ₹13499 ಪಟ್ಟಿ ಮಾಡಲಾಗಿದೆ. ಗ್ರಾಹಕರಿಗೆ ಇದರಲ್ಲಿ ಪೂರ್ಣ ₹11000 ವಿನಿಮಯ ಬೋನಸ್ ಕೂಡ ಲಭ್ಯವಿದ್ದು ಎಲ್ಲಾ ಪ್ರಯೋಜನಗಳನ್ನು ಪಡೆಯುವ ಮೂಲಕ ನೀವು ಕಡಿಮೆ ಬೆಲೆಯಲ್ಲಿ ಈ ಎಲ್‌ಇಡಿ ಟಿವಿ ಯನ್ನು ನಿಮ್ಮದಾಗಿಸಬಹುದು.

ಈ ಮೇಲಿನ ಎಲ್‌ಇಡಿ ಟಿವಿ ಯನ್ನು ಫ್ಲಿಪ್‌ಕಾರ್ಟ್ ಮೂಲಕ ಭರ್ಜರಿ ಡಿಸ್ಕೌಂಟ್ ಪಡೆದು ಕೊಂಡುಕೊಳ್ಳಬಹುದು.

Leave A Reply

Your email address will not be published.