BEL Recruitment 2023: ಬಿಇಎಲ್ ನಲ್ಲಿ ಉದ್ಯೋಗಾವಕಾಶ ; ತಿಂಗಳಿಗೆ 55 ಸಾವಿರ ಸಂಬಳ! ಈ ಕೂಡಲೇ ಅರ್ಜಿ ಸಲ್ಲಿಸಿ!

BEL Recruitment 2023: ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್(Bharat Electronics Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕ್ರಿಯೆ ಆರಂಭಿಸಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳಿಗೆ ಆನ್​ಲೈನ್ (Online) ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದ್ದು, ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಹುದ್ದೆ(BEL Recruitment 2023)ಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಹುದ್ದೆಯ ವಿವರ:
ಹುದ್ದೆಯ ಹೆಸರು :ಪ್ರಾಜೆಕ್ಟ್​ ಎಂಜಿನಿಯರ್ (Project Engineer)
ಒಟ್ಟು ಹುದ್ದೆ : 110

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ- 03/03/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 17/3/ 2023

ವಿದ್ಯಾರ್ಹತೆ : ಬಿಎಸ್ಸಿ, ಬಿಇ/ಬಿ.ಟೆಕ್
ಮಾಸಿಕ ವೇತನ : ₹ 40,000-55,000
ಉದ್ಯೋಗದ ಸ್ಥಳ : ಬೆಂಗಳೂರು (Bengaluru), ಘಾಜಿಯಾಬಾದ್, ನವದೆಹಲಿ, ವಿಶಾಖಪಟ್ಟಣಂ

ವಯೋಮಿತಿ: ಗರಿಷ್ಠ 32 ವರ್ಷ
ವಯೋಮಿತಿ ಸಡಿಲಿಕೆ:
ಒಬಿಸಿ (NCL) ಅಭ್ಯರ್ಥಿಗಳು- 3 ವರ್ಷ
SC/ST – 5 ವರ್ಷ
PWD – 10 ವರ್ಷ

ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ(interview) ಮೂಲಕ ಆಯ್ಕೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 080-22197160 ಗೆ ಕರೆ ಮಾಡಿ ಅಥವಾ ಇ-ಮೇಲ್ ಐಡಿ hrsoftware@bel.co.in ಸಂಪರ್ಕಿಸಿ.

BEL- NOTIFICATION

Leave A Reply

Your email address will not be published.