Iphone 14: ಇನ್ಮುಂದೆ ಚಿನ್ನದ ಬಣ್ಣದಲ್ಲಿ ಲಭ್ಯವಾಗಲಿದೆ ಐಫೋನ್ 14 ; ಇದಕ್ಕೆ ಕಾರಣವಿದೆ! ಏನು ಗೊತ್ತಾ?
Iphone 14: ಸ್ಮಾರ್ಟ್ ಫೋನ್(smartphone) ಗಳಲ್ಲಿ ಅತಿ ಎತ್ತರದ ಸ್ಥಾನಗಳಿಸಿರುವ ಫೋನ್ ಎಂದರೆ ಐಫೋನ್ ಎಂದೇ ಹೇಳಬಹುದು. ಮಾರುಕಟ್ಟೆಯಲ್ಲಿ ಐಫೋನ್ ಗಿರುವಷ್ಟು ಬೇಡಿಕೆ ಯಾವ ಸ್ಮಾರ್ಟ್ ಫೋನ್ ಗೂ ಇಲ್ಲ. ಸಾಕಷ್ಟು ಜನ ಈ ಫೋನ್ ಕೊಳ್ಳಲು ಮುಗಿಬೀಳುತ್ತಾರೆ. ಅಂತಹ ಐಫೋನ್ ಖರೀದಿದಾರರಿಗೆ ಸಿಹಿಸುದ್ದಿ ಇಲ್ಲಿದೆ. ಇನ್ನು ಮುಂದೆ ಐಫೋನ್ 14 ಚಿನ್ನದ ಬಣ್ಣ(gold color)ದಲ್ಲೂ ಲಭ್ಯವಾಗಲಿದೆ.
ಕೆಲವು ದಿನಗಳ ಹಿಂದೆ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ(Lionel Messi) ಅವರು ತಮ್ಮ ಗೆಲುವನ್ನು ಸಂಭ್ರಮಿಸಲು 35 ಚಿನ್ನದ ಲೇಪಿತ ಐಫೋನ್ 14 ಗಳನ್ನು ಖರೀದಿಸಿದ್ದರು. ಮೆಸ್ಸಿ ಅವರ ಚಿನ್ನದ ಫೋನ್‌ಗಳು ಭಾರೀ ಸುದ್ದಿಯಾಗಿದ್ದವು. ಈ ಹಿನ್ನೆಲೆ ಇದೀಗ ಐಫೋನ್ 14 ಗೆ ಬೇಡಿಕೆ ಹೆಚ್ಚಿದ್ದು, ಕಂಪನಿಯು ಸಾಮಾನ್ಯ ಐಫೋನ್ 14 ಗಳನ್ನು ಶೀಘ್ರದಲ್ಲೇ ಹಳದಿ ಬಣ್ಣದಲ್ಲಿ ಅಂದ್ರೆ ಗೋಲ್ಡ್ ಕಲರ್ ನಲ್ಲಿ ಪರಿಚಯಿಸಲಿದೆ ಎನ್ನಲಾಗಿದೆ.
ಆಪಲ್ ಸಂಸ್ಥೆ ಪ್ರತಿಬಾರಿ ಸ್ಮಾರ್ಟ್ ಫೋನ್ ಗಳ ಬಣ್ಣದಲ್ಲಿ ಬದಲಾವಣೆ ತರುತ್ತಿದೆ. ಈ ಹಿಂದೆ ಐಫೋನ್ 12(iphone 12) ಸರಣಿಯಲ್ಲಿ ಆಪಲ್ ನೇರಳೆ ಬಣ್ಣವನ್ನು ಪರಿಚಯಿಸಿತ್ತು. ಇದೀಗ ಹಳದಿ ಬಣ್ಣದ ಐಫೋನ್ 14 ಅನ್ನು ಪರಿಚಯಿಸಲು ಯೋಜನೆ ರೂಪಿಸುತ್ತಿದೆ. ಆದರೆ ಫೋನ್‌ನ ಫೀಚರ್ಸ್ ಹಾಗೂ ಇನ್ನಿತರೆ ಶೈಲಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಐಫೋನ್ 14 ಮತ್ತು ಐಫೋನ್ 14 ಪ್ಲಸ್(iphone 14 plus) ಮಿಡ್‌ನೈಟ್ ಬ್ಲಾಕ್, ಸ್ಟಾರ್‌ಲೈಟ್ ವೈಟ್, ಕೆಂಪು, ಬ್ಲೂ ಮತ್ತು ನೇರಳೆ ಬಣ್ಣದಲ್ಲಿ ಕಾಣಿಸಿಕೊಂಡಿದೆ. ಇನ್ನು ಹಳದಿ ಬಣ್ಣದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಕಂಪನಿ ಸಜ್ಜಾಗುತ್ತಿದೆ. ಈ ಹಳದಿ ಬಣ್ಣದ ಸ್ಮಾರ್ಟ್ ಫೋನ್ ಬಿಡುಗಡೆಯಾದರೆ ಜನರನ್ನು ಆಕರ್ಷಣೆ ಗೊಳಿಸೋದು ಖಂಡಿತ!!. ಐಫೋನ್ 14 ನೋಡಲು ಚಿನ್ನವೇ ಎಂದೆನಿಸುವ ಬಣ್ಣವನ್ನು ಹೊದ್ದುಕೊಂಡು ಶೀಘ್ರದಲ್ಲೇ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ.