Indian Railways : ನಮ್ಮ ದೇಶದಲ್ಲಿ ಈ ರೈಲು ಚಲಿಸೋ ವೇಗ ತುಂಬಾ ನಿಧಾನ! ಇದರ ವೇಗ ತಿಳಿದರೆ ನಿಮಗಂತೂ ಖಂಡಿತ ನಗು ಬರುತ್ತೆ!

Amazing Railway : ನಮ್ಮ ದೇಶವು ಕಾಶ್ಮೀರದಿಂದ (Kashmir ) ಕನ್ಯಾಕುಮಾರಿಯವರೆಗೆ (kanyakumari) ವಿಸ್ತಾರವಾದ ರೈಲ್ವೆ (Railway) ಜಾಲ ಮತ್ತು ಸಂಪರ್ಕವನ್ನು ಹೊಂದಿದೆ. ಅದಲ್ಲದೆ ರೈಲ್ವೆಯಲ್ಲಿ ಅತೀ ಶೀಘ್ರವಾಗಿ ಪ್ರತಿದಿನ ಸಾವಿರಾರು ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುತ್ತಾರೆ. ಆದರೆ ನೀವು ಎಂದಾದರೂ ಭಾರತದಲ್ಲಿ ಅತ್ಯಂತ ನಿಧಾನವಾದ ರೈಲನ್ನು ಹತ್ತಿದ್ದೀರಾ? ಹಾಗಿದ್ದರೆ ಭಾರತದ ಅತ್ಯಂತ ನಿಧಾನವಾದ ರೈಲು ಎಂದು ಕರೆಯಲ್ಪಡುವ ರೈಲಿನ ( Amazing Railway) ಬಗ್ಗೆ ತಿಳಿಯೋಣ ಬನ್ನಿ.

ಈಗಾಗಲೇ 2019 ರಲ್ಲಿ, ಭಾರತವು (india )ತನ್ನ ಮೊದಲ ಸೆಮಿ-ಹೈ ಸ್ಪೀಡ್ ರೈಲನ್ನು ಚಾಲನೆ ಗೊಳಿಸಿದೆ. ಈ ರೈಲಿನ ಗರಿಷ್ಠ ವೇಗ ಗಂಟೆಗೆ 180 ಕಿ.ಮೀ. ಇದರೊಂದಿಗೆ ವಂದೇ ಭಾರತ್ ರೈಲು, ಗತಿಮಾನ್ ಎಕ್ಸ್‌ಪ್ರೆಸ್, ರಾಜಧಾನಿ ಎಕ್ಸ್‌ಪ್ರೆಸ್, ಶತಾಬ್ದಿ ಎಕ್ಸ್‌ಪ್ರೆಸ್, ತೇಜಸ್ ಎಕ್ಸ್‌ಪ್ರೆಸ್ ಈ ಎಲ್ಲಾ ರೈಲುಗಳು ವೇಗವಾಗಿ ಓಡುವ ರೈಲಿನ ಪಟ್ಟಿಯಲ್ಲಿ ಸೇರಿಕೊಂಡಿದೆ.

ಆದರೆ ನಿಧಾನವಾಗಿ ಚಲಿಸುವ ರೈಲಿನ ವೇಗವನ್ನು ತಿಳಿದರೆ ನೀವು ಖಂಡಿತವಾಗಿಯೂ ಬೆರಗಾಗ್ತೀರಾ. ಹೌದು, ಈ ರೈಲು ಗಂಟೆಗೆ ಕೇವಲ 10 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಭಾರತದ ಅತ್ಯಂತ ನಿಧಾನಗತಿಯ ರೈಲು ಎಂದು ಹೆಸರಿಸಲಾದ ಈ ರೈಲನ್ನು ಮೆಟ್ಟುಪಾಳ್ಯಂಟು ಊಟಿ ನೀಲಗಿರಿ ಪ್ಯಾಸೆಂಜರ್ ರೈಲು ( Mettupalayam ooty Neelgiri passenger train) ಎಂದು ಕರೆಯಲಾಗುತ್ತದೆ.

ಈ ಪ್ರಯಾಣಿಕ ರೈಲು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಂ ನಡುವೆ ನೀಲಗಿರಿ ಜಿಲ್ಲೆಯ ಊಟಿಗೆ ಚಲಿಸುತ್ತದೆ. ಮೆಟ್ಟುಪಾಳ್ಯಂ – ಊಟಿ ನಡುವಿನ ಅಂತರವು ಕೇವಲ 46 ಕಿಮೀ ಆದರೆ ನಿಲ್ದಾಣ ತಲುಪಲು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆಯಂತೆ. ಅಂದರೆ ಈ ರೈಲು ಮೆಟ್ಟುಪಾಳ್ಯಂ ರೈಲು ನಿಲ್ದಾಣದಿಂದ ಬೆಳಗ್ಗೆ 7.10ಕ್ಕೆ ಹೊರಟು ಮಧ್ಯಾಹ್ನ 12 ಗಂಟೆಗೆ ಊಟಿಗೆ ತಲುಪುತ್ತದೆ.

ಅದಲ್ಲದೆ ಎಲ್ಲಾ ರೈಲುಗಳಂತೆ ಈ ರೈಲು ಕೂಡ ಪ್ರಥಮ ದರ್ಜೆ ಮತ್ತು ಸಾಮಾನ್ಯ ದರ್ಜೆಯ ಕೋಚ್‌ಗಳನ್ನು ಹೊಂದಿದೆ. ಅನುಕೂಲಕ್ಕೆ ತಕ್ಕಂತೆ ಟಿಕೆಟ್ ಬುಕ್ ಸಹ ಮಾಡುವ ಅವಕಾಶ ಕಲ್ಪಿಸಲಾಗಿದೆ.

ಪ್ರಸ್ತುತ UNESCO ವೆಬ್‌ಸೈಟ್ ಪ್ರಕಾರ ನೀಲಗಿರಿ ಮೌಂಟೇನ್ ರೈಲ್ವೇ 1854 ರಲ್ಲಿ ನಿರ್ಮಾಣವಾಗಬೇಕಿತ್ತು ಆದರೆ ಗುಡ್ಡಗಾಡು ಪ್ರದೇಶಗಳ ಸಮಸ್ಯೆಯಿಂದಾಗಿ ಇದನ್ನು 1891 ರಲ್ಲಿ ಪ್ರಾರಂಭಿಸಲಾಯಿತು. 1908 ರಲ್ಲಿ ಪೂರ್ಣಗೊಳಿಸಲಾಯಿತು. ಯುನೆಸ್ಕೋ ಪ್ರಕಾರ, ಈ ರೈಲು ಹೊಸ ತಂತ್ರಜ್ಞಾನದೊಂದಿಗೆ 326 ಮೀಟರ್‌ಗಳಿಂದ 2,203 ಮೀಟರ್ ಎತ್ತರವನ್ನು ತಲುಪುತ್ತದೆಯಂತೆ.

ಪ್ರಯಾಣದಲ್ಲಿ ಮೆಟ್ಟುಪಾಳ್ಯಂ – ಊಟಿ ನಡುವೆ ಕೆಲ್ಲರ್, ಕೂನೂರು, ವೆಲ್ಲಿಂಗ್ಟನ್, ಲವ್‌ಡೇಲ್ ಮತ್ತು ಊಟಕಮಂಡ್ ಎಂಬ ಐದು ರೈಲು ನಿಲ್ದಾಣಗಳಿವೆ. ಗುಡ್ಡಗಾಡು ಪ್ರದೇಶದಲ್ಲಿ ಓಡುವುದರಿಂದ ಅದರ ವೇಗ ಕಡಿಮೆಯಾಗಿ 5 ಗಂಟೆಗಳಲ್ಲಿ ಕೇವಲ 46 ಕಿ.ಮೀ. ಕ್ರಮಿಸುತ್ತದೆ ಎಂದು ತಿಳಿಸಲಾಗಿದೆ.

ಸದ್ಯ ಭಾರತದ ಅತಿ ವೇಗದ ರೈಲುಗಳಿಗೆ ಹೋಲಿಸಿದರೆ ಇದರ ವೇಗ 18 ಪಟ್ಟು ಕಡಿಮೆಯಾಗಿದ್ದು, ಇಷ್ಟು ನಿಧಾನಗತಿಯ ರೈಲಿನಲ್ಲಿ ಯಾರು ಪ್ರಯಾಣಿಸುತ್ತಾರೆ ಎಂದು ನಿಮ್ಮ ಪ್ರಶ್ನೆ ಇರಬಹುದು. ಆದರೆ ಈ ರೈಲಿಗೆ ಭಾರೀ ಬೇಡಿಕೆ ಇದೆ. ಏಕೆಂದರೆ ಮೆಟ್ಟುಪಾಳ್ಯಂನಿಂದ ಊಟಿಗೆ ತೆರಳುವಾಗ ರೈಲು ಮಾರ್ಗದ ಎರಡೂ ಬದಿಗಳಲ್ಲಿ ಪ್ರಕೃತಿಯಿಂದ ಆವೃತವಾಗಿದೆ. ಆದ್ದರಿಂದಲೇ ಊಟಿಗೆ ಹೋಗುವ ಹೆಚ್ಚಿನ ಪ್ರವಾಸಿಗರು ಈ ರೈಲಿನಲ್ಲಿ ಹೋಗಿ ಪ್ರಕೃತಿಯ ರಮಣೀಯ ಸೊಬಗನ್ನು ಸವಿಯುತ್ತಾರೆ.

Leave A Reply

Your email address will not be published.