Viral Video : ಬಾಯ್‌ ಫ್ರೆಂಡ್‌ ಜೊತೆ ಕುಳಿತಿದ್ದಕ್ಕೆ ಸಾಧು ಆಕ್ಷೇಪ ; ಯುವತಿ ಏನು ಮಾಡಿದಳು ಗೊತ್ತಾ? ನೀವು ಶಾಕ್ ಆಗ್ತಿರಾ!!

Sadhu : ಸಾಧು (Sadhu)ಗಳು ಸದಾ ದೇವರನ್ನು ಸ್ಮರಿಸುತ್ತಾ, ದೇವರ ಧ್ಯಾನ ಮಾಡುತ್ತಿರುತ್ತಾರೆ. ಸಾಧುಗಳು ದೇವರ ಧ್ಯಾನ ಮಾಡಿ ಶಕ್ತಿಗಳನ್ನು ಪಡೆದಿರುತ್ತಾರೆ ಎಂದು ಹೇಳಲಾಗುತ್ತದೆ. ಜನರು ಅವರನ್ನು ಬಹಳ ಗೌರವಿಸುತ್ತಾರೆ. ಆದರೆ ಇಲ್ಲೊಬ್ಬ ಹುಡುಗಿ ಏನು ಮಾಡಿದ್ದಾಳೆ ಗೊತ್ತಾ? ಸಾಧುವಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಹೊಡೆದಿದ್ದಾಳೆ.

 

ಅಬ್ಬಾ!!! ಇಂದಿನ ಕಾಲದ ಮಕ್ಕಳಿಗೆ ಅದೆಲ್ಲಿಂದ ಇಷ್ಟೊಂದು ಧೈರ್ಯ ಬರುತ್ತದೋ ಗೊತ್ತಿಲ್ಲ. ಹಿರಿಯರು, ಸಾಧುಗಳು ಎಂಬ ಪರಿವೆ ಇಲ್ಲದೆ ಹೊಡೆದಿದ್ದಾಳೆ. ಅದು ಕೂಡ ಚಪ್ಪಲಿಯಲ್ಲಿ. ಹಾಗಾದ್ರೆ ಸಾಧು ಅಂತಹ ದೊಡ್ಡ ತಪ್ಪು ಏನು ಮಾಡಿರಬಹುದು? ಇನ್ನು ಈ ಘಟನೆ ಎಲ್ಲಿ ನಡೆದಿರೋದು ಗೊತ್ತಾ? ಮಧ್ಯಪ್ರದೇಶದ ಹೋಶಂಗಾಬಾದ್‌ನಲ್ಲಿ ಇಂತಹ ಆಶ್ಚರ್ಯಕರ ಘಟನೆ ನಡೆದಿದ್ದು, ಸದ್ಯ ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್(viral video) ಆಗಿದೆ.

ನರ್ಮದಾ ನದಿಯ ಪಕ್ಕದಲ್ಲಿರುವ ಕೋರಿ ಘಾಟ್ ಮೇಲೆ ಯುವತಿ(girl)ಯು ತನ್ನ ಸ್ನೇಹಿತನ ಜೊತೆಗೆ ಕುಳಿತಿದ್ದಳು. ಇದನ್ನು ಕಂಡ ಸಾಧು ಜೊತೆಗೆ ಇದ್ದದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಕೋಪಗೊಂಡ ಯುವತಿ ಸಾಧುವಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾಳೆ. ಈ ವೇಳೆ ಅಲ್ಲಿದ್ದ ಯುವತಿ ಗೆಳೆಯ ಅವಳನ್ನು ತಡೆಯಲು ಪ್ರಯತ್ನಿಸಿದ್ದಾನೆ. ಆದರೂ ಯುವತಿ ಸಾಧುವಿಗೆ ಹೊಡೆಯಲು ಪ್ರಯತ್ನಿಸುತ್ತಲೇ ಇದ್ದಾಳೆ ಎಂಬುದು ವಿಡಿಯೋದಲ್ಲಿ ನೋಡಬಹುದು.

ಅಲ್ಲದೆ, ಅಲ್ಲೇ ಅಡ್ಡಾಡುತ್ತಿದ್ದ ಜನರು ಕೂಡ ಆಕೆಯನ್ನು ದೂರ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ನಂತರ ಹುಡುಗಿಯ ಗೆಳೆಯ ಆಕೆಯನ್ನು ಬೇರೆಡೆಗೆ ಕರೆದೊಯ್ಯುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಸಾಧುವಿನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದನ್ನು ಹಲವರು ಖಂಡಿಸಿದ್ದು, ನೆಟ್ಟಿಗರು ವಿಭಿನ್ನ ರೀತಿಯ ಕಾಮೆಂಟ್ ನೀಡುತ್ತಿದ್ದಾರೆ.

 

Leave A Reply

Your email address will not be published.