ದೇಶಾದ್ಯಂತ ಕೆಮ್ಮು, ಜ್ವರ ಹಾವಳಿ : ತಜ್ಞರು ಇದಕ್ಕೆಲ್ಲ ಕಾರಣ ಏನಂದ್ರು? ಸಲಹೆಗಳೇನು?

Fever: ಇತ್ತೀಚೆಗೆ ಬೆಳಿಗ್ಗೆ ಎದ್ದಾಗ ಚುಮು ಚುಮು ಚಳಿಯಾದರೆ ಮಧ್ಯಾಹ್ನ ರಣ ಬಿಸಿಲು ಹವಾಮಾನದಲ್ಲಿ ಬದಲಾವಣೆ ಉಂಟಾಗುತ್ತಿರುವ ಹಿನ್ನೆಲೆ ಜ್ವರ (Fever) ಶೀತ (cold) ,ಕೆಮ್ಮಿನ ಸಮಸ್ಯೆ ವ್ಯಾಪಕವಾಗಿ ಕಂಡುಬರುತ್ತಿದೆ. ಇದರಿಂದಾಗಿ ಹೊಸ ಸಮಸ್ಯೆ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ. ಹೀಗಾಗಿ, ಬೆಂಗಳೂರು ಸೇರಿದಂತೆ ಹಲವೆಡೆ ನಿರಂತರ ಕೆಮ್ಮು, ಉಸಿರಾಟದ ತೊಂದರೆ ಮತ್ತು ಜ್ವರದಿಂದ ಬಳಲುತ್ತಿರುವ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಏರಿಕೆ ಕಾಣುತ್ತಿದೆ.ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌)ಯ ತಜ್ಞರು ಎಚ್‌3ಎನ್‌2 ವೈರಸ್‌ನ ಉಪತಳಿ ಮುಖ್ಯ ಕಾರಣವೆಂದು ತಿಳಿಸಿದ್ದಾರೆ ಎನ್ನಲಾಗಿದೆ.

 

ವೈರಸ್‌ನ ಲಕ್ಷಣಗಳು ಹೀಗಿವೆ:
ಕೆಮ್ಮು, ವಾಕರಿಕೆ, ವಾಂತಿ, ಗಂಟಲುನೋವು, ಸ್ನಾಯುಸೆಳೆತ,ಅತಿಸಾರ ಈ ಎಲ್ಲಾ ಲಕ್ಷಣಗಳು ಕಂಡುಬರುತ್ತವೆ. ಕೊರೋನಾ( Covid) ಕಂಡುಬಂದ ಸಂದರ್ಭ ನೀವು ಕೈಗೊಂಡ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಪರಿಹಾರ ಕಂಡುಕೊಳ್ಳಬಹುದು .

ಭಾರತೀಯ ವೈದ್ಯಕೀಯ ಮಂಡಳಿ (ಐಎಂಎ) 15 ವರ್ಷದಿಂದ ಕೆಳಗಿನ ಮತ್ತು 50 ವರ್ಷ ಮೇಲ್ಪಟ್ಟವರಲ್ಲಿ ಶ್ವಾಸಕೋಶದ (Lungs) ಸೋಂಕಿನ ರೂಪದಲ್ಲಿ ಹರಡುತ್ತಿರುವ ಬಗ್ಗೆ ತನ್ನ ಹೇಳಿಕೆಯಲ್ಲಿ ಮಾಹಿತಿ ನೀಡಿದೆ. ಈ ನಡುವೆ ಹವಾಮಾನ ಬದಲಾವಣೆ (Weather change), ವಾಯುಮಾಲಿನ್ಯಗಳಿಂದ ಶೀತಜ್ವರ ಸಾಮಾನ್ಯವಾಗಿ ಬಿಟ್ಟಿದ್ದು, ಈ ಶೀತ ಜ್ವರ ಒಂದು ವಾರದ ಒಳಗೆ ಕಡಿಮೆಯಾಗುತ್ತದೆ. ಆದರೆ ಕೆಮ್ಮು 2-3 ವಾರಗಳ ಕಾಲ ಮುಂದುವರೆಯುತ್ತಿದೆ. ಹೀಗಾಗಿ, ದೀರ್ಘ ಕಾಲದ ಕೆಮ್ಮು, ಜ್ವರದ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರದೆ ಎಚ್ಚರಿಕೆ ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ. H3N2 ಬಗ್ಗೆ ಇಂಡಿಯನ್ ಮೆಡಿಕಲ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಆತಂಕ ವ್ಯಕ್ತಪಡಿಸಿದೆ. ಸಿಕ್ಕಿದ ಆಂಟಿಬಯೋಟಿಕ್ ಮಾತ್ರೆಗಳನ್ನು ಬಳಸದಂತೆ ಎಚ್ಚರಿಕೆ ನೀಡಿದೆ.

ಈ ಮೊದಲು ಕಾಣಿಸಿಕೊಂಡ ಕೋವಿಡ್‌ ಮಹಾಮಾರಿ ವೇಳೆ ಔಷಧಗಳನ್ನು (Medicine) ಭಾರೀ ಪ್ರಮಾಣದಲ್ಲಿ ಬಳಕೆ ಮಾಡಿದ ಹಿನ್ನೆಲೆ ಜನರಲ್ಲಿ ರೋಗ ನಿರೋಧಕ ಶಕ್ತಿ(Immunity power) ಕಡಿಮೆಯಾಗಿದ್ದು, ಇದರಿಂದ ವೈದ್ಯರು ಸಹ ಶೀತಜ್ವರಕ್ಕೆ ಆಂಟಿಬಯೋಟಿಕ್ಸ್‌ ಮಾತ್ರೆಗಳನ್ನು ಶಿಫಾರಸು ಮಾಡದಂತೆ ಸೂಚಿಸಿದೆ. ರೋಗಲಕ್ಷಣಕ್ಕೆ (Symptoms) ಅನುಗುಣವಾದ ಸಾಮಾನ್ಯ ಔಷಧ ನೀಡಬೇಕು ಎಂದು ಐಎಂಎ ಎಚ್ಚರಿಕೆ ನೀಡಿದೆ. ಒಂದು ವೇಳೆ ಅವಶ್ಯಕ ಎನಿಸಿದರೆ ಬ್ಯಾಕ್ಟೀರಿಯಾದಿಂದ ಸೋಂಕು ತಗುಲಿದ್ದರೆ ರೋಗ ಪತ್ತೆ ಪರೀಕ್ಷೆ ಮೂಲಕ ಸ್ಪಷ್ಟ ಪಡಿಸಿಕೊಂಡ ನಂತರ ಆಂಟಿ ಬಯೋಟಿಕ್ಸ್‌ ಶಿಫಾರಸು ಮಾಡಲು ಸೂಚಿಸಿದೆ.

Leave A Reply

Your email address will not be published.