ದೈವದ ಮುಂದೆ ಪುಟ್ಟ ಪೋರನ ದಿಟ್ಟ ನಡೆ!! ವೈರಲ್ ಆದ ವೀಡಿಯೋ ನೋಡಿ ಮೆಚ್ಚುಗೆಯ ಸುರಿಮಳೆಗೈದ ನೆಟ್ಟಿಗರು

Viral video: ಸಾಮಾನ್ಯವಾಗಿ ಮಕ್ಕಳು ಸಣ್ಣ ಪುಟ್ಟ ವಿಚಾರಕ್ಕೂ ಭಯ ಬೀಳೋದು ಸಹಜ. ಕಾಂತಾರ ಸಿನಿಮಾದ ಮೂಲಕ ದೈವದ ಬಗ್ಗೆ ಜನರಲ್ಲಿ ಭಯ ಭಕ್ತಿ ಹೆಚ್ಚಾಗಿ ಅದರಲ್ಲಿಯೂ ಕೆಲ ಜನರು ದೈವ ಎಂದರೆ ಹಾಸ್ಯದ ವಿಚಾರದ ರೀತಿ ರೀಲ್ಸ್ ಮಾಡಿ ದೈವಿಕ ಆಚರಣೆಗಳ ಮೇಲೆ ನಂಬಿಕೆ ಇರುವ ಮಂದಿಯ ಕೆಂಗಣ್ಣಿಗೆ ಗುರಿಯಾಗಿದ್ದು ನೆನಪಿರಬಹುದು. ಹೀಗೆ ಒಂದಲ್ಲ ಒಂದು ವಿಷಯಕ್ಕೆ ದೈವದ ಬಗೆಗಿನ ಸುದ್ಧಿ ಚರ್ಚೆಯಲ್ಲಿ ಇರುವುದು ಇತ್ತೀಚೆಗೆ ಸಾಮಾನ್ಯವಾಗಿ ಬಿಟ್ಟಿದೆ.

 

ಹೆಚ್ಚಿನ ಜನರಲ್ಲಿ ದೇವರು ನಮ್ಮ ಕೈ ಬಿಡಬಹುದೇನೋ ಆದರೆ ಕಾಯುವ ದೈವ ಎಂತಹ ಪರಿಸ್ಥಿತಿಯಲ್ಲಿಯು ಕೂಡ ನಮ್ಮ ಕೈ ಬಿಡುವುದಿಲ್ಲ ಎಂಬಷ್ಟರ ಮಟ್ಟಿಗೆ ದೈವದ ಮೇಲೆ ನಂಬಿಕೆ ಇದೆ. ನಮ್ಮ ಆಚರಣೆ ನಂಬಿಕೆಗಳನ್ನು ನೋಡಿಕೊಂಡು ಮಕ್ಕಳು ಕೂಡ ಅದನ್ನು ಪಾಲಿಸುವುದು ವಾಡಿಕೆ. ಸದ್ಯ, ಬಾಲಕನೊಬ್ಬ ದಿಟ್ಟತನದ ನಡೆಯ ವೀಡಿಯೋವೊಂದು ವೈರಲ್( Viral Video) ಆಗಿ ಸಂಚಲನ ಮೂಡಿಸಿದೆ.

ದೈವ ಎಂದಾಗ ಎಲ್ಲರೂ ಭಯ ಭಕ್ತಿಯಿಂದ ತಲೆಬಾಗುವುದು ರೂಡಿ. ಆದರೆ,ಬಾಲಕನೊಬ್ಬ ದೈವ ತನ್ನ ಸಮೀಪಕ್ಕೆ ಬಂದರೂ ಅಂಜದೆ ಅಳುಕದೆ ನಿಂತಲ್ಲೇ ದೃಢವಾಗಿ ನಿಂತು ದೈರ್ಯದಿಂದ ನಡೆದುಕೊಂಡ ವೈಖರಿ ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಹಜವಾಗಿ ಬಾಲ್ಯದಲ್ಲಿ ಏನನ್ನೇ ಕಂಡರೂ ಮಕ್ಕಳು ಭಯ ಬೀಳೋದು ಸಹಜ. ಅದರಲ್ಲಿಯೂ ಬಣ್ಣ ಬಣ್ಣದ ವೇಷಧಾರಿಗಳನ್ನ ಕಂಡಾಗಲಂತು ಮಕ್ಕಳ ಪಾಡು ಹೇಳುವುದೇ ಬೇಡ. ಅಮ್ಮನ ಸೀರೆಯ ಸೆರಗಿನಡಿ ಅವಿತುಕೊಳ್ಳುವ ಪರಿಯನ್ನು ನಾವೆಲ್ಲ ನೋಡಿರುತ್ತೇವೆ.ಆದರೆ, ಕೆಲ ಮಕ್ಕಳಿಗೆ ಏನೋ ಒಂದು ರೀತಿಯ ಭಂಡ ಧೈರ್ಯ ಕೂಡ ಇರುತ್ತದೆ. ಆದರೆ, ಇಲ್ಲೊಬ್ಬ ಬಾಲಕ ದೈವವನ್ನು ಕಂಡರೂ ನಿಂತಲ್ಲೇ ನಿಂತು ದೈವ ಎದುರು ಬಂದರೂ ಕದಲದೆ ನಿಂತದ್ದು ಕಂಡು ಅಲ್ಲಿ ನೆರೆದಿದ್ದ ಮಂದಿ ಅಚ್ಚರಿಗೊಳಗಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಒಬ್ಬ ಪುಟ್ಟ ಬಾಲಕ ದೈವವನ್ನು ನೋಡುತ್ತಾ ನಿಂತಿದ್ದು, ದೈವವು ಅಲ್ಲಿ ನಿಂತಿದ್ದ ಬಾಲಕನನ್ನು (Boy) ಕಂಡು ಅವನ ಸಮೀಪ ಬಂದಿದ್ದು ಆದರೂ ಕೂಡ ಬಾಲಕ ಕೊಂಚವೂ ಅಳುಕದೆ ನಿಂತ ಜಾಗದಿಂದ ಕದಲದೆ ನಿಂತದ್ದು ವಿಶೇಷವಾಗಿತ್ತು. ಬಾಲಕ ಧೈರ್ಯ ಮತ್ತು ಭಕ್ತಿಯಿಂದ ಆ ದೈವವನ್ನೇ ನೋಡುತ್ತಾ ನಿಂತಿರುವ ಶೈಲಿ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ಟಾಗ್ರಾಮ್‌ ನಲ್ಲಿ (Instagram)ಈ ವೀಡಿಯೊ ಶೇರ್ (share)ಮಾಡಲಾಗಿದ್ದು, ಈ ವಿಡಿಯೊವನ್ನು 80 ಸಾವಿರಕ್ಕಿಂತಲೂ ಹೆಚ್ಚಿನ ಮಂದಿ ವೀಕ್ಷಣೆ ಮಾಡಿದ್ದಾರೆ.

https://www.instagram.com/reel/CpA0FmlPxRn/?utm_source=ig_web_copy_link

 

 

Leave A Reply

Your email address will not be published.