TVS motor : ಆಕರ್ಷಕ ವಿನ್ಯಾಸದ ಕಸ್ಟಮ್ ಬೈಕ್‌ಗಳ ಅನಾವರಣ!

TVS motor :ಇತ್ತೀಚೆಗೆ ವಿವಿಧ ವಿನ್ಯಾಸದ ಬೈಕ್(bike) ಗಳು ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿವೆ. ಕಳೆದ ದಿನದಲ್ಲಿ Matter Motorcycles ತಮ್ಮ ಮೊದಲ ಎಲೆಕ್ಟ್ರಿಕ್ ಗೇರ್‌ ಮೋಟರ್ ಬೈಕ್ ಏರಾ 5000(electric gear bike area) ಅನ್ನು ಬಿಡುಗಡೆ ಮಾಡಿದೆ. ಇದೀಗ ಭಾರತದ ಬೃಹತ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಟಿವಿಎಸ್ ಮೋಟಾರ್(TVS motor), TVS MotoSoul ಕಾರ್ಯಕ್ರಮದಲ್ಲಿ ಆಕರ್ಷಕ ವಿನ್ಯಾಸದ ಕಸ್ಟಮ್ ಬೈಕ್‌(custom bikes)ಗಳನ್ನು ಅದ್ದೂರಿಯಾಗಿ ಅನಾವರಣ ಮಾಡಿದೆ.

 

ಕಂಪನಿಯು ಕಳೆದ ವರ್ಷದಿಂದ ಗೋವಾ(Goa)ದಲ್ಲಿ ‘ಟಿವಿಎಸ್ ಮೋಟೋಸೊಲ್’ (TVS MotoSoul) ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದೀಗ, ಎರಡು ದಿನದ ಈ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಅದ್ದೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಕಂಪನಿಯು ಮೊದಲ ದಿನ ನಾಲ್ಕು ರೋನಿನ್ ಮೋಟಾರ್‌ಸೈಕಲ್‌ನ ಹೊಸ ಆವೃತ್ತಿಗಳನ್ನು ಪ್ರದರ್ಶಿಸಿದೆ.

ನೂತನ ರೋನಿನ್ ಬೈಕ್‌(Ronin bike) ಗಳ ನಾಲ್ಕು ಮಾದರಿಗಳು ‘ಮುಸಾಶಿನಿ’, ‘ಅಗೊಂಡಾ’, ‘ವಾಕಿಜಾಶಿ’, ಮತ್ತು ‘ಎಸ್‌ಸಿಆರ್’ ಎಂಬ ಹೆಸರನ್ನು ಹೊಂದಿವೆ. ಟಿವಿಎಸ್ ಕಂಪನಿಯು ರೋನಿನ್ ಬೈಕ್‌ಗಳ ಮೂಲಕ ಫ್ಲಾಟ್ ಟ್ರ್ಯಾಕ್ ರೇಸಿಂಗ್‌ಗೆ ಎಂಟ್ರಿ ಕೊಡುವುದಾಗಿಯೂ ಘೋಷಣೆ ಮಾಡಿದ್ದು, ಈ ಬೈಕ್ ಗಳು ಸಖತ್ ಲುಕ್ ನ ಜೊತೆಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಇವುಗಳ ಆರಂಭಿಕ ಬೆಲೆ ಸುಮಾರು ರೂ.1.50 ಲಕ್ಷ ಇರಬಹುದು ಎನ್ನಲಾಗಿದೆ.

ವೈಶಿಷ್ಯತೆಯ ಬಗ್ಗೆ ಹೇಳಬೇಕಾದರೆ, ಈ ಬೈಕ್ ಬ್ಲೂಟೂತ್ ಕನೆಕ್ಟ್ದ್, ವಿವಿಧ ರೈಡಿಂಗ್ ಮೋಡ್‌ಗಳು, ಬೃಹತ್ ಹ್ಯಾಂಡಲ್‌ಬಾರ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಹಾಗೂ ಡ್ಯುಯಲ್-ಚಾನೆಲ್ ಎಬಿಎಸ್ ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ ಹೊಂದಿರಲಿದೆ. ಇನ್ನೂ, ಟಿವಿಎಸ್ ರೋನಿನ್ ಬೈಕ್ ಎಂಜಿನ್ ಕಾರ್ಯಕ್ಷಮತೆ, ಇದು 225.9 ಸಿಸಿ ಎಂಜಿನ್ ಹೊಂದಿರಲಿದೆ. ಹಾಗೇ 20.1 bhp ಪವರ್, 19.93 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿರುತ್ತದೆ.

ಈ ಕಾರ್ಯಕ್ರಮದಲ್ಲಿ ಕಂಪನಿಯು ಎರಡು ಬಹುಪಯೋಗಿ ಸ್ಮಾರ್ಟ್ ಕನೆಕ್ಟ್ ಎಸ್10ಎಕ್ಸ್ (Smart connect S10X) ಹಾಗೂ ಎಸ್20ಎಕ್ಸ್ ಎಂಬ ಹೆಲ್ಮೆಟ್ ಸಂವಹನ ಸಾಧನಗಳನ್ನು (communication devices) ಬಿಡುಗಡೆ ಮಾಡಿದೆ. ಇದನ್ನು ಧರಿಸಿ, 1.2 ಕಿಲೋಮೀಟರ್‌ ದೂರದವೆರೆಗೆ ಮಾತುಕತೆ ನಡೆಸಬಹುದು. ಅಲ್ಲದೆ, ಬ್ಲೂಟೂತ್ ಹಾಗೂ ಮೊಬೈಲ್ ಜಿಪಿಎಸ್ ನ್ಯಾವಿಗೇಷನ್‌ಗೂ ಅವಕಾಶವಿದೆ. ಸದ್ಯ ಸ್ಮಾರ್ಟ್ ಕನೆಕ್ಟ್ ಎಸ್10ಎಕ್ಸ್ ಬೆಲೆ ರೂ.8,499 ಹಾಗೂ ಸ್ಮಾರ್ಟ್ ಕನೆಕ್ಟ್ ಎಸ್20ಎಕ್ಸ್(Smart connect S20X) ಬೆಲೆ ರೂ.10,999 ಆಗಿದೆ.

Leave A Reply

Your email address will not be published.