ಅತಿ ಹೆಚ್ಚು ಮೈಲೇಜ್‌ನೊಂದಿಗೆ ಬಿಡುಗಡೆಯಾಗಿದೆ ಪವರ್‌ಫುಲ್ ʼಟೊಯೊಟಾ ಪ್ರಿಯಸ್ PHEV’ ಬಿಡುಗಡೆ!
Toyota Prius PHEV :ಕಾರು ಪ್ರಿಯರಿಗಾಗಿ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ , ಉತ್ತಮ ಪವರ್ (best power ) ಉತ್ಪಾದಿಸುವ ಮೋಟಾರ್ ಹಾಗೂ ಅಧಿಕ ಇಂಧನ ದಕ್ಷತೆಯನ್ನು ಹೊಂದಿರುವ ಪೆಟ್ರೋಲ್ (petrol )ಎಂಜಿನ್(engine ) ಹೊಂದಿರುವ ಕಾರನ್ನು ಪ್ರಮುಖ ವಾಹನ ತಯಾರಕ ಕಂಪನಿಯಾದ ಟೊಯೊಟಾ ಮೋಟಾರ್ ಕಾರ್ಪೊರೇಷನ್, ಪ್ರಿಯಸ್ PHEV ಕಾರನ್ನು ಜಪಾನ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.
ಹೊಸ ಟೊಯೊಟಾ ಪ್ರಿಯಸ್ ಸೆಡಾನ್, ಗರಿಷ್ಠ 223 PS ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಹೆಚ್ಚು ಪವರ್ ಫುಲ್ ಆಗಿದೆ ಎಂದು ಹೇಳಬಹುದು. ಸದ್ಯ ಗ್ರಾಹಕರಿಗೆ ‘Z’ ರೂಪಾಂತರದಲ್ಲಿ ಮಾತ್ರ, ಈ ಸೆಡಾನ್ ಖರೀದಿ ಲಭ್ಯವಿದ್ದು, 19 ಇಂಚಿನ ಟೈರ್ ಪಡೆದಿರುವ ಕಾರು 26 kmpl ಹಾಗೂ 17-ಇಂಚಿನ ಟೈರ್ ಹೊಂದಿರುವ ಕಾರು 30.1 kmpl ಮೈಲೇಜ್ ನೀಡುತ್ತದೆ ಎಂದು ಮಾಹಿತಿ ನೀಡಲಾಗಿದೆ.
ಸದ್ಯ ಎಲೆಕ್ಟ್ರಿಕ್ ಮೋಡ್ ನಲ್ಲಿ ಚಲಿಸುವಾಗ 19-ಇಂಚಿನ ಟೈರ್ ಹೊಂದಿರುವ ಕಾರು, 87 ಕಿಮೀ, 17 ಇಂಚಿನ ಟೈರ್ ಪಡೆದಿರುವ ಕಾರು, 105 ಕಿಮೀ ರೇಂಜ್ ನೀಡುತ್ತದೆ. ಹಳೆಯ ಮಾದರಿಗೆ ಹೋಲಿಸಿದರೆ, 75% ಮಿತವ್ಯಯಕಾರಿಯಾಗಿದೆ. ಟೊಯೊಟಾ ಪ್ರಿಯಸ್ PHEV ಸೆಡಾನ್ 5ನೇ ಜನರೇಷನ್ ನ 2.0-ಲೀಟರ್ ಪ್ಲಗ್-ಇನ್ ಹೈಬ್ರಿಡ್ ಸಿಸ್ಟಮ್ ಹೊಂದಿದ್ದು, ಕೇವಲ 6.7 ಸೆಕೆಂಡುಗಳಲ್ಲಿ 0 – 100 ಕಿಮೀ ವೇಗವನ್ನು ಪಡೆಯುವ ಸಾಮರ್ಥ್ಯ ಪಡೆದಿದೆ.
ಮುಖ್ಯವಾಗಿ ಪವರ್ ಫುಲ್ ‘ಟೊಯೊಟಾ ಪ್ರಿಯಸ್ PHEV’ ಅತಿಹೆಚ್ಚು ಮೈಲೇಜ್‌ನೊಂದಿಗೆ ಜಪಾನ್ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದು ಈ ಕಾರು, ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತದೆಯೇ ಇಲ್ಲವೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. PHEV ಅಂದರೆ, ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ ಎಂಬರ್ಥವನ್ನು ನೀಡುತ್ತದೆ. ಇಂತಹ ವಾಹನಗಳಲ್ಲಿ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ, ಉತ್ತಮ ಪವರ್ ಉತ್ಪಾದಿಸುವ ಮೋಟಾರ್ ಹಾಗೂ ಅಧಿಕ ಇಂಧನ ದಕ್ಷತೆಯನ್ನು ಹೊಂದಿರುವ ಪೆಟ್ರೋಲ್ ಎಂಜಿನ್ ಒಟ್ಟಿಗೆ ಇರುತ್ತದೆ.
ಭಾರತದಲ್ಲಿ ಟೊಯೊಟಾದ ಇನ್ನೋವಾ ಸರಣಿಯ ಕಾರುಗಳನ್ನು ಹೆಚ್ಚಿನ ಮಂದಿ ಖರೀದಿಸುವ ಹಿನ್ನೆಲೆಯಲ್ಲಿ ಒಂದು ವೇಳೆ ಟೊಯೊಟಾ ಪ್ರಿಯಸ್ PHEV’ (Toyota Prius PHEV) ಭಾರತಕ್ಕೆ ಬಂದರೆ, ಇದು ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುವುದರಿಂದ ಗ್ರಾಹಕರು ಇಷ್ಟ ಪಡಲು ಅವಕಾಶವಿದೆ.
ಅದರಲ್ಲೂ ಹೆಚ್ಚು ಕಾರ್ಯಕ್ಷಮತೆ ಹೊಂದಿರುವ ಹೈಬ್ರಿಡ್ ಎಂಜಿನ್ ಆಧಾರಿತ ಕಾರುಗಳನ್ನು ವಿವಿಧ ಕಂಪನಿಗಳು (company) ತಯಾರಿಸುತ್ತವೆ. ಸದ್ಯ ಈ ಪಟ್ಟಿಯಲ್ಲಿ ಟೊಯೊಟಾ ಮುಂದಿದ್ದು, ಆದ್ದರಿಂದ ಅಧಿಕ ಮೈಲೇಜ್‌ನೊಂದಿಗೆ ಪವರ್ ಫುಲ್ ಟೊಯೊಟಾ ಪ್ರಿಯಸ್ ಸೆಡಾನ್ ಬಿಡುಗಡೆ ಮಾಡಿದ್ದು, ಜಪಾನ್ ಮಾರುಕಟ್ಟೆಯಲ್ಲಿ(market) JPY 4,600,000 (27.88 ಲಕ್ಷ ಭಾರತೀಯ ರೂಪಾಯಿ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.