Tata cars: ದೇಶೀಯ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ ಟಾಟಾದ ಈ ಐದು ಕಾರುಗಳು ; ವೈಶಿಷ್ಟ್ಯತೆ ಅದ್ಭುತ!!
Tata cars :ದೇಶದ ಮಾರುಕಟ್ಟೆಯಲ್ಲಿ ವಿಭಿನ್ನ ವಿನ್ಯಾಸದ ಕಾರುಗಳು ಲಗ್ಗೆ ಇಡುತ್ತಿವೆ. ಅದರಲ್ಲೂ ಇತ್ತೀಚೆಗೆ ಜನಪ್ರಿಯ ಕಂಪನಿಗಳು ನೂತನ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಇವುಗಳು ಗ್ರಾಹಕರನ್ನು ಆಕರ್ಷಿಸಲು ಪೈಪೋಟಿ ನಡೆಸುತ್ತಿವೆ. ಸದ್ಯ ಜನಪ್ರಿಯ ಕಾರು ತಯಾರಿಕಾ ಕಂಪನಿ ಟಾಟಾ(Tata) ಮುಂದಿನ 2 ವರ್ಷಗಳಲ್ಲಿ ಸುಮಾರು ಐದು ಕಾರು(cars)ಗಳನ್ನು ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ ಈ ಕಾರುಗಳ ಸಂಪೂರ್ಣ ವಿವರಗಳನ್ನು ತಿಳಿಯೋಣ ಬನ್ನಿ.
ಟಾಟಾ Curvv (Tata curvv): ಕಳೆದ ಜನವರಿಯಲ್ಲಿ ನಡೆದ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ Curvv ಪರಿಕಲ್ಪನೆ (concept)ಯನ್ನು ಅನಾವರಣ ಮಾಡಿದ್ದು, ಸದ್ಯ ಟಾಟಾ Curvv ಮುಂದಿನ ವರ್ಷ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಇದು ಪೆಟ್ರೋಲ್ ಹಾಗೂ ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ. ಇದು ಹೊಸ 1.2 ಲೀಟರ್ ಟರ್ಬೊ ಎಂಜಿನ್ ಹೊಂದಿರಲಿದ್ದು, 125 PS ಪವರ್ ಹಾಗೂ 225 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಟಾಟಾ ನೆಕ್ಸನ್ & ಟಿಯಾಗೊ(tata Nexon and Tiago) : ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಮತ್ತು ಟಿಯಾಗೊ ಇವಿ ರೂ.8.69 ಆರಂಭಿಕ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಟಿಯಾಗೊ 315 km ರೇಂಜ್ ನೀಡಲಿದ್ದು, ಟಾಟಾ ನೆಕ್ಸನ್ 312 km ರೇಂಜ್ ನೀಡಲಿದೆ. ನೆಕ್ಸನ್ ಇವಿ ರೂ.14.49 ಲಕ್ಷದಿಂದ ರೂ.17.50 ಲಕ್ಷ ಆನ್-ರೋಡ್ ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ. ನೆಕ್ಸನ್ ಕಾರು, 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 125 bhp ಪವರ್ ಮತ್ತು 225 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿರುತ್ತದೆ ಎನ್ನಲಾಗಿದೆ.
ಟಾಟಾ ಸಿಯೆರಾ (Tata Sierra): ಈ ಎಸ್‌ಯುವಿಯನ್ನು ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿದ್ದು, ಸಿಯೆರಾ ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ. ಇದು ಪವರ್ ಫುಲ್ 1.5 ಲೀಟರ್ 4-ಸಿಲಿಂಡರ್ ಟರ್ಬೊ ಎಂಜಿನ್ ಹೊಂದಿರಲಿದ್ದು, 500 km ರೇಂಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ 5 ಸೀಟ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಬಹುದು ಎನ್ನಲಾಗಿದೆ. ಟಾಟಾ ಸಿಯೆರಾ XUV300, Bolero Neo ಮತ್ತು Bolero ಜೊತೆಗೆ ಸ್ಪರ್ಧಿಸಲಿದೆ.
ಟಾಟಾ ಹ್ಯಾರಿಯರ್ ಇವಿ(tata harrier) : ಭಾರತದ ಮಾರುಕಟ್ಟೆಯಲ್ಲಿ ಈ ಹಿಂದೆ, ಟಾಟಾ ಹ್ಯಾರಿಯರ್ ರೆಡ್ ಡಾರ್ಕ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ. ಇದರ ಬೆಲೆ ರೂ.21.77 ಲಕ್ಷದಿಂದ ರೂ.24.07 ಲಕ್ಷ ಆಗಿದೆ. ಮೊದಲು ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಹ್ಯಾರಿಯರ್ ಇವಿಯನ್ನು ಅನಾವರಣ ಮಾಡಿದ್ದು, ಇದು 4WD (ಫೋರ್ ವೀಲ್ ಡ್ರೈವ್) ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ ಎನ್ನಲಾಗಿದೆ. ಒಟ್ಟಾರೆ ಟಾಟಾದ ಈ ಕಾರುಗಳು ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಮೂಡಿಸಲಿದೆ.