ಕೊರೋನಾ ಸ್ಪುಟ್ನಿಕ್ ಲಸಿಕೆ ಅನ್ವೇಷಣೆಗೈದ ಆಂಡ್ರೆ ಬೊಟಿಕೋವ್ ಕೊಲೆ!
Andrey Botikov: ಆಂಡ್ರೆ ಬೊಟಿಕೋವ್ ರಷ್ಯಾದಲ್ಲಿ ಕೋವಿಡ್-19 ಲಸಿಕೆ ಸ್ಪುಟ್ನಿಕ್ ವಿ ಅಭಿವೃದ್ಧಿ ಕಾರ್ಯದಲ್ಲಿ ಭಾಗಿಯಾಗಿದ್ದ ವಿಜ್ಞಾನಿಗಳಲ್ಲಿ ಒಬ್ಬರು. 47 ವರ್ಷದ ಬೋಟಿಕೋವ್( Andrey Botikov) ಅವರು ಗಮಲೇಯ ನ್ಯಾಷನಲ್ ರಿಸರ್ಚ್ ಸೆಂಟರ್ ಫಾರ್ ಎಕಾಲಜಿ ಅಂಡ್ ಮ್ಯಾಥಮ್ಯಾಟಿಕ್ಸ್‌ನಲ್ಲಿ ಹಿರಿಯ ಸಂಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಸದ್ಯ, ಇವರ ಅಪಾರ್ಟ್‌ಮೆಂಟ್‌ನಲ್ಲಿ ಬೆಲ್ಟ್‌ನಿಂದ ಕತ್ತು ಬಿಗಿದು ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
2020 ರಲ್ಲಿ ಸ್ಪುಟ್ನಿಕ್ V ಲಸಿಕೆಯನ್ನು ಅಭಿವೃದ್ಧಿಪಡಿಸಿದ 18 ವಿಜ್ಞಾನಿಗಳಲ್ಲಿ ಬೊಟಿಕೋವ್( Andrey Botikov)ಒಬ್ಬರು ಎಂದು ವರದಿಗಳು ಮಾಹಿತಿ ನೀಡಿದೆ. ಅಷ್ಟೆ ಅಲ್ಲದೇ, 2021 ರಲ್ಲಿ COVID ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿದ್ದ ಹಿನ್ನೆಲೆ ಬೋಟಿಕೋವ್ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಂದ ವೈರಾಲಜಿಸ್ಟ್‌ಗೆ ಆರ್ಡರ್ ಆಫ್ ಮೆರಿಟ್ ಫಾರ್ ದಿ ಫಾದರ್‌ಲ್ಯಾಂಡ್ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. ಆದರೆ, ಇವರು ಗುರುವಾರ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿರುವ ಕುರಿತು ರಷ್ಯಾದ ನ್ಯೂಸ್ ಏಜೆನ್ಸಿ ಟಾಸ್ ರಷ್ಯಾದ ಒಕ್ಕೂಟದ ತನಿಖಾ ಸಮಿತಿಯನ್ನು ಉಲ್ಲೇಖಿಸಿ ವರದಿ ನೀಡಿದೆ ಎನ್ನಲಾಗಿದೆ. ಸದ್ಯ, ಈ ಕೊಲೆ ಪ್ರಕರಣದಲ್ಲಿ ಭಾಗಿಯಾದ ಶಂಕಿತ ಆರೋಪಿಯನ್ನು ಖಾಕಿ ಪಡೆ ಬಂಧಿಸಿರುವ ಕುರಿತು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.
ರಷ್ಯಾದಲ್ಲಿ ತನಿಖಾ ಪ್ರಾಧಿಕಾರವಾಗಿರುವ ಸಮಿತಿಯು ಬೊಟಿಕೋವ್ ಅವರ ಸಾವನ್ನು ಕೊಲೆ ಎಂದು ಪರಿಗಣಿಸಿ ತನಿಖೆ ನಡೆಸಲಾಗುತ್ತಿರುವ ಕುರಿತು ಟೆಲಿಗ್ರಾಮ್‌ನಲ್ಲಿ ಹೇಳಿಕೆಯನ್ನು ನೀಡಿದೆ. ಈ ಘಟನೆ ನಡೆದ ಸ್ವಲ್ಪ ಸಮಯದಲ್ಲೇ ದಾಳಿಕೋರನ ಸ್ಥಳವನ್ನು ಪತ್ತೆ ಹಚ್ಚುವಲ್ಲಿ(Identify) ಪೊಲೀಸರು ಯಶಸ್ವಿಯಾಗಿರುವ ಕುರಿತು ಫೆಡರಲ್ ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
29 ವರ್ಷದ ಯುವಕ ಬೋಟಿಕೋವ್ ಅವರ ಜೊತೆಗೆ ಜಗಳವಾಗಿದ್ದು, ಈ ವೇಳೆ ಆರೋಪಿ ಬೋಟಿಕೋವ್ ಅವರನ್ನು ಬೆಲ್ಟ್‌ನಿಂದ ಕತ್ತು ಬಿಗಿದು ಕೊಲೆಗೈದು(Murder) ಓಡಿ ಹೋಗಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ ವೇಳೆ ತಾನು ಮಾಡಿದ ಅಪರಾಧವನ್ನು ಆರೋಪಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಆರೋಪಿ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ತನಿಖೆ ಮುಂದುವರೆಸಲಾಗಿದೆ” ಎಂದು ತನಿಖಾ ಸಮಿತಿ ಮಾಹಿತಿ ನೀಡಿದೆ. ಇದಲ್ಲದೆ, ಕೌಟುಂಬಿಕ ಅಪರಾಧ ಮತ್ತು ಸಂಘರ್ಷದ ಪರಿಣಾಮವಾಗಿ ಈ ಕೊಲೆ ನಡೆದಿರುವ ಸಾಧ್ಯತೆಯ ಬಗ್ಗೆ ಕಾನೂನು ಜಾರಿ ಸಂಸ್ಥೆಗಳು ಮಾಹಿತಿ ನೀಡಿದೆ.