ಓದುಗರೇ ನಿಮಗೊಂದು ಸವಾಲ್: ಈ ಫೋಟೋದಲ್ಲಿ ಅಡಗಿರುವ ನೀರು ಕುದುರೆಯನ್ನು ಪತ್ತೆ ಹಚ್ಚುವೀರಾ?

Optical Illusion: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಆಗಾಗ ನೋಡಲು ಸಿಗುತ್ತವೆ. ಅದು ಯಾವುದೋ ಪ್ರಾಣಿ-ಪಕ್ಷಿಗಳದ್ದಾಗಿಬಹುದು. ವಸ್ತುಗಳನ್ನು ಪತ್ತೆ ಹಚ್ಚುವ ಕೆಲಸವಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವ ಜೊತೆಗೆ ಕಣ್ಣಿಗೆ ಮತ್ತು ಬುದ್ಧಿವಂತಿಕೆಗೆ ಸವಾಲು ಹಾಕುವುದಂತು ನಿಜ. ಇದೀಗ, ಮತ್ತೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

 

ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ಗಮನಿಸುತ್ತೇವೆ ಎಂಬ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ಭಿನ್ನತೆ ಎದುರಾಗುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

ಈ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್​ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಸವಾಲುಗಳನ್ನು ಸಾಕಷ್ಟು ಜನರು ಸ್ವೀಕರಿಸಿ, ಅದರಲ್ಲಿ ತೊಡಗುತ್ತಾರೆ. ಅಷ್ಟೆ ಏಕೆ ನೀವು ಈಗಾಗಲೇ ಅನೇಕ ಸವಾಲುಗಳನ್ನು ಬಗೆಹರಿಸಿರುತ್ತೀರಿ. ಈಗ ಮತ್ತೊಂದು ಸವಾಲು ನಿಮಗಾಗಿ ನೀಡಲಾಗಿದೆ.
ಸಾಮಾನ್ಯವಾಗಿ ಹೆಚ್ಚಿನವರು ಹೊಸ ಹೊಸ ಆಪ್ಟಿಕಲ್ ಇಲ್ಯೂಷನ್ ಸವಾಲುಗಳನ್ನು ಸ್ವೀಕರಿಸುವುದನ್ನು ಆನಂದಿಸುತ್ತಾರೆ. ನಿಮ್ಮ ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಆಪ್ಟಿಕಲ್ ಇಲ್ಯೂಷನ್ಗಳು ಸಹ ಪ್ರಯೋಜನಕಾರಿಯಾಗಿದ್ದು, ನಿಮ್ಮ ಕಣ್ಣಿಗೆ ಕೆಲಸ ಕೊಡಲು ನೀವು ರೆಡಿನಾ??.

ಸದ್ಯ ವೈರಲ್​​​ ಆಗಿರುವ ಫೋಟೋದಲ್ಲಿ ನೀವು ಕೆಲವು ಕೊಳವೊಂದನ್ನು ಗಮನಿಸಬಹುದು. ಕೊಳದ ಸುತ್ತ ಪಕ್ಷಿಗಳ ಗುಂಪನ್ನು ಕೂಡ ಕಾಣಬಹುದು. ನಿಮಗಿರುವ ಸವಾಲು ಏನು ಎಂದು ನೀವು ಯೋಚಿಸುತ್ತಿದ್ದೀರಾ?? ಈ ಕೊಳದಲ್ಲಿ ಒಂದು ನೀರು ಕುದುರೆ ಅಡಗಿದೆ.ನಿಮಗಿರುವ ಸಿಂಪಲ್ ಟಾಸ್ಕ್ ಇಷ್ಟೇ!!.. ಅಡಗಿರುವ ನೀರು ಕುದುರೆಯನ್ನು ನೀವು ಪತ್ತೆ ಹಚ್ಚಬೇಕು. ಆದರೆ, ಅದನ್ನು ಪತ್ತೆಹಚ್ಚುವುದು ಹೇಳಿದಷ್ಟು ಸುಲಭವಲ್ಲ. ಆದರೆ, ನಿಮ್ಮ ಕಣ್ಣಿಗೂ ತಲೆಗೂ ಕೊಂಚ ಕೆಲಸ ಕೊಟ್ಟರೆ ಹುಡುಕೋದು ಕಷ್ಟವೇನಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ನೀರು ಕುದುರೆ ಕಾಣಲಿದೆ. ನಿಮಗೆ ಕೇವಲ 10 ಸೆಕೆಂಡ್​ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಆ ನೀರು ಕುದುರೆ ಎಲ್ಲಿದೆ ಎಂದು ಹುಡುಕಬೇಕು. ನಿಮ್ಮ ಸಮಯ ಈಗ ಶುರು.

10 ಸೆಕೆಂಡ್​ ಸಮಯದಲ್ಲಿ ನೀವು ಫೋಟೋದಲ್ಲಿರುವ ನೀರು ಕುದುರೆ ಗುರುತಿಸಿದರೆ ನಿಮ್ಮ ಕಣ್ಣಿನ ಸಾಮರ್ಥ್ಯ ಹಾಗೂ ಬುದ್ಧಿವಂತಿಕೆಗೆ ಫುಲ್ ಮಾರ್ಕ್ಸ್ ಕೊಟ್ಟು ಬಿಡಿ. ಹುಡುಕಿ ಹುಡುಕಿ ಸಾಕಾಯ್ತಾ? ಆದರು ನಿಮಗೆ ನೀರು ಕುದುರೆ ಕಾಣಿಸುತ್ತಿಲ್ಲವೇ? ನೀರು ಕುದುರೆಯನ್ನು ಗುರುತಿಸಲು ಸಾಧ್ಯವಾಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿದ್ದರೆ ಈ ಕೆಳಗಿನ ಚಿತ್ರವನ್ನು ನೋಡಿದರೆ ನಿಮಗೆ ಉತ್ತರ ದೊರೆಯಲಿದೆ.

Leave A Reply

Your email address will not be published.