ಮನಸ್ಮೃತಿಗೆ ಬೆಂಕಿ ಹಚ್ಚಿ ಕೋಳಿ ಬೇಯಿಸಿದ ಯುವತಿಯ ವೀಡಿಯೋ ವೈರಲ್

Manusmriti Book Burned: ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವೀಡಿಯೋ ವೈರಲ್ ಆಗಿ ಸಂಚಲನ ಮೂಡಿಸುತ್ತವೆ. ಅವುಗಳಲ್ಲಿ ಕೆಲವು ನಮ್ಮನ್ನು ನಗೆಗಡಲಲ್ಲಿ ತೇಲಿಸಿದರೆ ಮತ್ತೆ ಕೆಲವು ಅಚ್ಚರಿ ಮೂಡಿಸುತ್ತವೆ. ಇದೀಗ, ವೈರಲ್ ಆಗಿರುವ ವೀಡಿಯೋ ನೋಡಿದ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಷ್ಟಕ್ಕೂ ಏನು ಈ ಕಹಾನಿ ಅಂತೀರಾ?

ಜ್ಞಾನ ದೀವಿಗೆಯನ್ನೂ ಒರೆಗೆ ಹಚ್ಚಿ ಓದಲು ಜ್ಞಾನಾರ್ಜನೆ ಮಾಡಲು ಅವಕಾಶ ಕಲ್ಪಿಸುವ ಪುಸ್ತಕ ಇಲ್ಲವೇ ವಿದ್ಯೆಗೆ ನಮ್ಮಲ್ಲಿ ವಿಶೇಷ ಗೌರವ ಕೊಡುವುದು ವಾಡಿಕೆ. ಅದೇ ಪುಸ್ತಕವನ್ನು ಸುಟ್ಟು ಹಾಕಿದರೆ ವಿದ್ಯೆಗೆ ಸರಸ್ವತಿಗೆ ಮಾಡುವ ಅವಮಾನ ಎಂದೇ ಅರ್ಥೈಸಲಾಗುತ್ತದೆ. ಶಿಕ್ಷಣ ನಮ್ಮನ್ನು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಬೇಕೆ ವಿನಃ ಸಮಾಜದಲ್ಲಿ ಬೇಧ -ಭಾವ ಹಾಗೂ ದ್ವೇಷದ ಕಿಡಿಯನ್ನು ಹಚ್ಚಲು ಅವಕಾಶ ಕಲ್ಪಿಸಬಾರದು. ಆದರೆ, ಸದ್ಯ, ಮನುಸ್ಮೃತಿಗೆ ಬೆಂಕಿ ಹಚ್ಚುತ್ತಿರುವ(Manusmriti Book Burned) ಹುಡುಗಿಯೊಬ್ಬಳ ವಿಡಿಯೋವೊಂದು ವೈರಲ್‌ ಆಗಿದೆ. ವೈರಲ್ ವೀಡಿಯೋ (Viral Video) ದಲ್ಲಿ ತನ್ನ ಕೈಯಲ್ಲಿ ಸಿಗರೇಟು ಹಿಡಿದು ಬಳಿಕ ನೆಲದ ಮೇಲೆ ಇಟ್ಟಿದ್ದ ಮನುಸ್ಮೃತಿ ಪುಸ್ತಕವನ್ನು ಕೈಗೆತ್ತಿಕೊಂಡು ಅದರ ಮೂಲಕ ಸಿಗರೇಟ್‌ ಹಚ್ಚಿಕೊಳ್ಳುವ ದೃಶ್ಯ ಕಂಡುಬಂದಿದೆ.

ಜನರನ್ನು ಉನ್ನತ ಮತ್ತು ಕೀಳು, ತಾರತಮ್ಯ ಮತ್ತು ಪರಸ್ಪರ ವಿಭಜಿಸುವಲ್ಲಿ ಈ ರೀತಿ ಪುಸ್ತಕ ಮಹತ್ತರ ಪಾತ್ರ ವಹಿಸುತ್ತದೆ. ಹೀಗಾಗಿ, ಈ ಪುಸ್ತಕವನ್ನು ವಿರೋಧಿಸಬೇಕು. ಇದು ಕೇವಲ ಪುಸ್ತಕವಾಗಿದ್ದು, ಇದರ ಅಸ್ತಿತ್ವವನ್ನು ಕೊನೆಗಾಣಿಸಬೇಕು. ಈ ಪುಸ್ತಕವು ಸರಿಯಲ್ಲ ಎಂದು ಪ್ರಿಯಾ ದಾಸ್ ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಯುವತಿ ಪುಸ್ತಕವನ್ನು ಒಲೆಗೆ ಹಾಕಿ ಮೇಲೆ ಕೋಳಿ ಬೇಯಿಸುತ್ತಿರುವುದು ವೀಡಿಯೊದಲ್ಲಿ ಕಾಣಬಹುದು.ಇದನ್ನು ನೋಡಿ ನೆಟ್ಟಿಗರು ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಮತ್ತೆ ಕೆಲವರು ಈ ವೀಡಿಯೊ ನೋಡಿ ಲೈಕ್ ಮಾಡಿ ಶೇರ್ ಮಾಡಿ ಬೆಂಬಲ ಸೂಚಿಸುತ್ತಿದ್ದಾರೆ.

ನಮ್ಮ ಭಾವನೆಗಳು , ಅಭಿಪ್ರಾಯಗಳು ಏನೇ ಇದ್ದರೂ ಅದನ್ನು ವ್ಯಕ್ತಪಡಿಸುವ ರೀತಿ , ಸಮಾಜದ ಮುಂದೆ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದು ಮುಖ್ಯ ಪಾತ್ರ ವಹಿಸುತ್ತದೆ. ಕೆಲವೊಮ್ಮೆ ಕೆಟ್ಟ ಅಭ್ಯಾಸಗಳು ಬೇಗ ಅನುಕರಣೆಗೊಂಡು ಸಮಾಜದಲ್ಲಿ ದ್ವೇಷದ ಕಿಡಿ ಬೆಳೆಯಲು ಕಾರಣವಾಗಬಹುದು.ಹಾಗಾಗಿ, ಒಳ್ಳೆಯ ವಿಚಾರಗಳನ್ನು, ಉತ್ತಮ ಸಮಾಜಕ್ಕೆ ಬೆಳವಣಿಗೆಗೆ ಪ್ರೇರಣೆ ನೀಡುವ ಹವ್ಯಾಸ ರೂಢಿಸಿಕೊಳ್ಳುವುದು ವ್ಯಕ್ತಿಗತವಾಗಿ ಹಾಗೂ ಸಮಾಜಕ್ಕೆ ಎರಡಕ್ಕೂ ಉತ್ತಮ.

Leave A Reply

Your email address will not be published.