E-Bike: ಮಾರುಕಟ್ಟೆಗೆ ಬಂದಿದೆ ಹೊಸ ಎಲೆಕ್ಟ್ರಿಕ್​ ಬೈಕ್​! ಡಿಸೈನ್ ನೋಡಿ ಮಾರು ಹೋಗೋದು ಖಂಡಿತ!

E-bike :ಹೊಸತನ ಯಾವಾಗಲೂ ಹೊಸ ಅನುಭವ ನಿಮಗೆ ನೀಡುತ್ತದೆ. ಸದ್ಯ ನಿಮಗಾಗಿ ಹೊಸ ಎಲೆಕ್ಟ್ರಿಕ್ ಬೈಕ್ (electric bike ) (E-bike) ಇದೀಗ ಮಾರುಕಟ್ಟೆಗೆ (market ) ಬಿಡುಗಡೆಯಾಗಿದೆ. ಇದರ ವಿಶೇಷತೆ ಏನೆಂದು ನೀವು ನೋಡಲೇ ಬೇಕು. ನಂತರ ನೀವು ಸಹ ಈ ಬೈಕ್ ಕೊಂಡುಕೊಳ್ಳಲು ಮುಂದಾಗುವುದು ಖಾತರಿ.

 

ಹೌದು ಉಬೋರ್ಡ್ ಕಂಪನಿಯಿಂದ (company ) ತಯಾರಿಸಲ್ಪಟ್ಟ ಹೊಸ ಡಿಸ್ಕವರಿ ಬೈಕ್​ ಈ ಬೈಕ್ ಹೆಚ್ಚಿನ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ಕಂಪೆನಿಯು ತನ್ನ ವೆಬ್‌ಸೈಟ್‌ನಲ್ಲಿ (website ) ತಿಳಿಸಿದೆ. ಬನ್ನಿ ಇದರ ವಿಶೇಷತೆ ಏನೆಂದು ನೋಡೋಣ.

ವಿಶೇಷವಾಗಿ ಈ ಬೈಕ್ ತುಂಬಾ ಸ್ಟ್ರಾಂಗ್ (strong ) ಆಗಿದ್ದು, ತೂಕ ಮಾತ್ರ ಕಡಿಮೆ ಇರುತ್ತದೆ. ಈ ಬೈಕಿನ ವಿನ್ಯಾಸವನ್ನು ಏರೋಸ್ಪೇಸ್ ಗ್ರೇಡ್​ನ ಅಲ್ಯೂಮಿನಿಯಂನಿಂದ ಮಾಡಲಾಗಿದೆ. ಈ ಬೈಕ್ ಅಲ್ಟ್ರಾ ವೈಡ್ ಟೈರ್ ಹೊಂದಿದ್ದು, ಇವುಗಳನ್ನು ಫ್ಯೂಚರಿಸ್ಟಿಕ್ ವಿನ್ಯಾಸಗಳು ಎಂದು ಸಹ ಕರೆಯಲಾಗುತ್ತದೆ. ಇದರಿಂದ ನಿಮ್ಮ ಬೈಕ್ ಗ್ರಿಪ್​ ಆಗಿರುತ್ತದೆ.

ಈ ಬೈಕ್​ನ ಬ್ಯಾಟರಿಯನ್ನು ಮನೆ ಅಥವಾ ಕಚೇರಿಯಲ್ಲಿ ಎಲ್ಲಿ ಬೇಕಾದರೂ ತೆಗೆದು ಚಾರ್ಜ್ ಮಾಡಬಹುದು. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಲು 4-5 ಗಂಟೆ ತೆಗೆದುಕೊಳ್ಳುತ್ತದೆ. ಅಷ್ಟೇ ಅಲ್ಲದೆ ಈ ಬೈಕ್ 150 ಕಿಲೋಮೀಟರ್ ವೇಗವನ್ನು ಹೊಂದಿದೆ ಮತ್ತು ಎಲ್ಇಡಿ ಲೈಟ್​ ಮತ್ತು ಎಬಿಎಸ್ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಲಾಗಿದೆ.

ಮುಖ್ಯವಾಗಿ ಈ ಬೈಕ್ i-CAT ನಿಂದ ಅನುಮೋದಿತವಾಗಿದೆ. ಅಂದರೆ ಈ ಬೈಕನ್ನು 14 ವರ್ಷ ಮೇಲ್ಪಟ್ಟವರು ಮಾತ್ರ ಬಳಸಬಹುದು. ಇದಕ್ಕಾಗಿ ಡ್ರೈವಿಂಗ್ ಲೈಸೆನ್ಸ್ ಸಹ ಅಗತ್ಯವಿಲ್ಲ. ಜೊತೆಗೆ ಈ ಬೈಕ್‌ಗೆ ವಿಮೆಯ ಅಗತ್ಯ ಸಹ ಇರುವುದಿಲ್ಲ.

ಈ ಬೈಕ್​ನ ಬ್ಯಾಟರಿ ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ 35 ಕಿಲೋಮೀಟರ್ ಹೋಗಬಹುದು. ಇನ್ನು ಹೆಚ್ಚುವರಿ ಬ್ಯಾಟರಿಯನ್ನು ಖರೀದಿಸುವ ಮೂಲಕ ನೀವು ಮುಂದೆ ಚಲಿಸಬಹುದು ಎಂದು ಕಂಪೆನಿ ತಿಳಿಸಿದೆ.

ಈ ಬೈಕ್ 220 ಕೆಜಿ ಭಾರ ಎತ್ತಬಲ್ಲದು. ಈ ಬೈಕಿನ ಗರಿಷ್ಠ ವೇಗ ಗಂಟೆಗೆ 25 ಕಿ.ಮೀ. ಈ ಬೈಕಿನ ಎಕ್ಸ್ ಶೋ ರೂಂ ಬೆಲೆ ರೂ.79,999 ಎಂದು ಕಂಪೆನಿ ತಿಳಿಸಿದೆ. ಪ್ರತಿ ಕಂತಿಗೆ 26666 ರೂ.ನಂತೆ 3 ಕಂತುಗಳಲ್ಲಿ ಪಾವತಿಸಬಹುದು ಎಂದು ಹೇಳಿದೆ. ಅದಲ್ಲದೆ ಈ ಬೈಕ್ ಬ್ಯಾಟರಿ 1 ವರ್ಷದ ವಾರಂಟಿ ಹೊಂದಿದ್ದು, ಬೈಕ್ ಮೋಟರ್‌ಗೆ 2 ವರ್ಷ ಮತ್ತು ಚಾಸಿಸ್‌ಗೆ 10 ವರ್ಷಗಳ ವಾರಂಟಿಯನ್ನು ನೀಡಲಾಗಿದೆ. ಒಟ್ಟಿನಲ್ಲಿ ಹೊಸ ವಿನ್ಯಾಸದ ಬೈಕ್ ತನ್ನ ಹವಾ ಎಬ್ಬಿಸಲು ಬರುತ್ತಿದೆ.

Leave A Reply

Your email address will not be published.