ಹೆಣ್ಮಕ್ಕಳೇ ಗಮನಿಸಿ, ಈ 5 ಪ್ರಾಡಕ್ಟ್ ಬಳಸೋದನ್ನ ಈಗಲೇ ನಿಲ್ಲಿಸಿ!

Women’s product: ದೇಹದಲ್ಲಿ ಮುಖದ ಚರ್ಮವು (face skin ) ಬಹಳ ಸೆನ್ಸಿಟಿವ್ ಆಗಿರುವುದು ನಮಗೆ ತಿಳಿದಿರುವ ವಿಚಾರ. ಆದ್ದರಿಂದ ಮುಖದ ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಗತ್ಯ. ಅದೂ ಅಲ್ಲದೆ ಹೆಣ್ಣುಮಕ್ಕಳು ಮುಟ್ಟಾಗುವ ಸಂದರ್ಭ ಮತ್ತು ಹೆರಿಗೆ ಆಗುವ ಸಂದರ್ಭದಲ್ಲಿ ತಮ್ಮ ದೇಹದಲ್ಲಿನ ಕೆಲವು ಅಗತ್ಯ ಅಂಶಗಳು ನಷ್ಟವಾಗುತ್ತವೆ. ಆದ್ದರಿಂದ ಈ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳು ಎಷ್ಟು ತಮ್ಮ ಆರೋಗ್ಯ(health ) ಮತ್ತು ಸೌಂದರ್ಯದ (beauty ) ಬಗ್ಗೆ ಗಮನ ಹರಿಸುತ್ತಾರೋ, ಅಷ್ಟು ಒಳ್ಳೆಯದು.

 

ಮುಖ್ಯವಾಗಿ ಹೆಣ್ಣು ಮಕ್ಕಳು ತಮ್ಮ ಮುಖದ ಆರೈಕೆ ಮತ್ತು ಆರೋಗ್ಯ ಸಲುವಾಗಿ ಕೆಲವು ಪ್ರಾಡಕ್ಟ್‌ಗಳನ್ನ (Women’s product) ಬಳಸಬಾರದಂತೆ ಇಲ್ಲಿ ಸೂಚಿಸಲಾಗಿದೆ.

ಲಿಪ್ಸ್ಟಿಕ್ ಬಳಸುವುದು ಅರೋಗ್ಯಕ್ಕೆ ಮಹಾಮಾರಿಯೇ ಹೌದು. ತುಟಿಗಳಿಗೆ ಹಚ್ಚಿದ ಬಣ್ಣವು ಬಾಯಿ ಮೂಲಕ ಹೊಟ್ಟೆಗೆ ಸೇರಿ ಹಲವು ಆರೋಗ್ಯ ಸಮಸ್ಯೆಗಳ ಉಲ್ಬನಕ್ಕೆ ಕಾರಣ ಆಗಬಲ್ಲದು.ಆದ್ದರಿಂದ ತುಟಿಗಳಿಗೆ ರಾಸಾಯನಿಕ ಯುಕ್ತ ಬಣ್ಣ ಹಚ್ಚುವುದು ನಿಲ್ಲಿಸುವುದು ಸೂಕ್ತ.

ಇನ್ನು ಹೆಣ್ಣುಮಕ್ಕಳ ಗುಪ್ತಾಂಗ ಸೂಕ್ಷ್ಮತೆ ಆಗಿರುವ ಕಾರಣ ಗುಪ್ತಾಂಗ ಸ್ವಚ್ಛವಾಗಿ ಇಡುವುದು ತುಂಬಾ ಅವಶ್ಯಕ. ಇಲ್ಲದಿದ್ದರೆ, ಅಲರ್ಜಿಯಾಗಿ, ಯುರಿನ್ ಇನ್‌ಫೆಕ್ಷನ್ ಆಗುತ್ತದೆ. ಹಾಗಾಗಿ ಅದನ್ನ ಕ್ಲೀನ್ ಆಗಿ ಇರಿಸಬೇಕು. ಆದರೆ ಅದಕ್ಕಾಗಿ ಇಂಟಿಮೇಟ್ ವಾಶ್ ಪ್ರಾಡಕ್ಟ್‌ಗಳನ್ನ ಬಳಸಬೇಡಿ.

ಮುಖ್ಯವಾಗಿ ಸ್ಕಿನ್ ಲೈಟೆನಿಂಗ್‌ ಕ್ರೀಮ್. ಈ ಕ್ರೀಮ್ ಬಳಸಿದರೆ ನೀವು ಬೆಳ್ಳಗಾಗಬಹುದು. ಆದ್ರೆ ಅನಾರೋಗ್ಯಕರವಾಗಿ. ಯಾಕೆಂದರೆ ಇದರಲ್ಲಿ ಅಷ್ಟು ಹಾರ್ಮ್‌ಫುಲ್ ಕೆಮಿಕಲ್‌ಗಳಿದೆ. ಇದರಿಂದ ನಿಮ್ಮ ಚರ್ಮ ಹಾಳಾಗುವುದಲ್ಲದೇ, ಕಿಡ್ನಿ ಅಥವಾ ಬ್ರೇನ್ ಸಮಸ್ಯೆಗಳು ತಲೆದೋರುತ್ತದೆ. ನೀವು ಕ್ರೀಮ್ ಹಚ್ಚಿ ಬೆಳ್ಳಗಾಗುವ ಬದಲು, ನೀರು ಕುಡಿದು, ಆರೋಗ್ಯಕರ ಆಹಾರ ಸೇವಿಸಿ ಚರ್ಮಕ್ಕೆ ಹೊಳಪು ಬರಿಸುವುದು ಉತ್ತಮ.

ಫೇಸ್ ವಾಶ್ ಮತ್ತು ಮೇಕಪ್ ಕಿಟ್ ಬಳಸುವುದು ಇತ್ತೀಚಿಗೆ ಸಾಮಾನ್ಯ ಆಗಿದೆ. ಆದರೆ ಇದು ನಿಮ್ಮ ಅರೋಗ್ಯವನ್ನು ಮತ್ತಷ್ಟು ಕೆಡಿಸಲು ಕಾರಣವಾಗುತ್ತೆ. ಇದಕ್ಕಿಂತ ನೀವು ನೈಸರ್ಗಿಕ ಫೇಸ್ ಪ್ಯಾಕ್ ಬಳಸುವುದು ಉತ್ತಮ.

ಹೇರ್ ಡೈ ಬಳಸಬೇಡಿ. ಯಾರಿಗೂ ಕೂಡ ತಾವು ಮುದುಕಿಯಂತೆ ಕಾಣೋದು ಇಷ್ಟವಿರೋದಿಲ್ಲಾ. ಹಾಗಾಗಿಯೇ ಹಲವರು ಹೇರ್ ಡೈ ಬಳಸುತ್ತಾರೆ. ಆದ್ರೆ ಇದರಲ್ಲಿರುವ ಕೆಮಿಕಲ್, ನಿಮ್ಮ ಕೂದಲಿನ ಆರೋಗ್ಯವನ್ನ ಹಾಳು ಮಾಡತ್ತೆ. ಕೆಲವರಿಗೆ ಹೇರ್ ಡೈ ಹಾಕಿದ್ರೆ, ತಲೆ ನೋವು ಬರತ್ತೆ, ಮೈಗ್ರೇನ್, ಸೈನಸ್ ಸಮಸ್ಯೆ ಕಾಡತ್ತೆ. ಹಾಗಾಗಿ ಹೇರ್ ಡೈ ಬದಲು, ಕೆಮಿಕಲ್ ಇಲ್ಲದ ಮೆಹಂದಿ ಬಳಸುವುದು ಉತ್ತಮ.

ಇನ್ನು ಬಿಗಿಯಾದ ಅಂಡರ್ ವೈರ್ಡ್ ಬ್ರಾ ಹಾಕಿಕೊಳ್ಳುವುದರಿಂದ ನಿಮಗೆ ಅಪಾಯವಿದೆ ಎಂದು ನಿಮಗೆ ಅರಿವಿರಲಿ. ಇದು ನಿಮ್ಮ ಫಿಗರ್ ಚೆಂದಗಾಣಿಸುವಂತೆ ಮಾಡುವುದು ಮತ್ತು ದೇಹಕ್ಕೂ ಹಿತವೆನಿಸಬಹುದು. ಆದರೆ ಇದರಿಂದ ದೇಹದಲ್ಲಿ ರಕ್ತ ಹೆಪ್ಪುಗಟ್ಟಲು ಕಾರಣವಾಗಬಹುದು. ರಾತ್ರಿ( night ) ಮಲಗುವಾಗ ಬ್ರಾ ಹಾಕಿ ಮಲಗಿದ್ರೆ, ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಅಲ್ಲದೆ ಉಸಿರಾಟದ ಸಮಸ್ಯೆ ಬರಬಹುದು. ಜೊತೆಗೆ ತ್ವಚೆಯ ಸಮಸ್ಯೆಯೂ ಆಗತ್ತೆ. ನಿಮಗೆ ಧರಿಸಲೇಬೇಕು ಎಂದಲ್ಲಿ, ಅವಶ್ಯಕತೆ ಇರುವ ಸಮಯವಷ್ಟೇ ಧರಿಸಿ.

ಹೆಚ್ಚು ಹೈ ಹೀಲ್ಸ್ ಚಪ್ಪಲಿ ಧರಿಸುವುದು ಟ್ರೆಂಡ್ ಕೂಡ ಹೌದು. ಕೆಲವರು ಫ್ಯಾಷನ್‌ಗಾಗಿ ಅದನ್ನ ಧರಿಸಿದರೆ, ಇನ್ನು ಕೆಲವರು ಉದ್ದಕ್ಕೆ ಕಾಣುವ ಉದ್ದೇಶದಿಂದ ಧರಿಸುತ್ತಾರೆ. ಆದರೆ ನೀವು ಹೆಚ್ಚು ಹೊತ್ತು ಹೈ ಹೀಲ್ಸ್ ಚಪ್ಪಲಿ ಧರಿಸಿದರೆ, ಅದು ನಿಮ್ಮ ಗರ್ಭಕೋಶದ ಮೇಲೆ ಪರಿಣಾಮ ಬೀರತ್ತೆ. ವಯಸ್ಸಾದ ಬಳಿಕ ನಿಮಗೆ ಕಾಲು ನೋವು, ಪಾದದ ನೋವು ಕಾಣಿಸಬಹುದು. ನೀವು ಹೈ ಹೀಲ್ಸ್ ಚಪ್ಪಲಿ ಧರಿಸಿ ನಡೆಯುವಾಗ, ಬೀಳಬಾರದು ಎಂದು ಅದರ ಮೇಲೆ ಭಾರ ಹಾಕುತ್ತೇವೆ. ಇದರಿಂದಲೇ ಹಿಮ್ಮಡಿ ನೋವು, ಪಾದ ನೋವು ಬರುವ ಸಾಧ್ಯತೆ ಹೆಚ್ಚು.

ಒಟ್ಟಿನಲ್ಲಿ ಆರೋಗ್ಯವೇ ಭಾಗ್ಯ. ಆದ್ದರಿಂದ ಹೆಣ್ಣುಮಕ್ಕಳು ರಾಸಾಯನಿಕ ಮುಕ್ತ ಸೌಂದರ್ಯ ವರ್ಧಕಗಳನ್ನು ಬಳಸಿ ನಮ್ಮ ತ್ವಚೆಯನ್ನು ಕಾಂತಿಯುತವಾಗಿರಿಸುವುದರ ಜೊತೆಗೆ ಉತ್ತಮ ಅರೋಗ್ಯವನ್ನು ಸಹ ಪಡೆಯಬಹುದಾಗಿದ್ದು, ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಲು ನಾವು ಸದೃಢರಾಗುತ್ತೇವೆ.

Leave A Reply

Your email address will not be published.