ಮಹಿಳೆಯರೇ ಗಮನಿಸಿ, ನಿಮ್ಮ ವಯಸ್ಸು 30 ಕಳೆದರೂ ಈ ರೀತಿಯ ಖಾಯಿಲೆ ಬರಬಹುದು!

Women Health Problems: ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಾನಾ ರೀತಿಯ ಹರಸಾಹಸ ಪಡುವುದು ಸಹಜ. ನಮಗೆ ಪ್ರಕೃತಿ ದತ್ತವಾಗಿ ದೊರೆತ ಅಮೂಲ್ಯ ವರ ಎಂದರೆ ನಮ್ಮ ದೇಹ. ಈ ದೇಹದ ಆರೈಕೆ ಕೂಡ ಅಷ್ಟೇ ಮುಖ್ಯ ಎಂಬುದನ್ನು ಹೆಚ್ಚಿನವರು ಮರೆತುಬಿಡುತ್ತಾರೆ. ಅದರಲ್ಲಿಯೂ ಮೂವತ್ತನೇ ವಯಸ್ಸಿನಲ್ಲಿ ಹೆಚ್ಚಿನ ಮಹಿಳೆಯರು (Women) ಕಚೇರಿ ಮತ್ತು ಕುಟುಂಬದ ಜವಾಬ್ದಾರಿ (Family Responsibility) ನಡುವೆ ತಮ್ಮ ಆರೋಗ್ಯದ (Health)ಕಡೆ ನಿರ್ಲಕ್ಷ್ಯ ಧೋರಣೆ ತೋರುತ್ತಾರೆ.

ಮಹಿಳೆಯರಲ್ಲಿ ವಯಸ್ಸಾಗುತ್ತಾ ಹೋದಂತೆ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. 30 ವರ್ಷ ದಾಟಿದ ಬಳಿಕ ದೇಹದಲ್ಲಿ ಹಾರ್ಮೋನ್ ಗಳ ವ್ಯತ್ಯಯ ಕಂಡು ಬರುವುದಲ್ಲದೆ, ತೂಕದಲ್ಲಿ ಕೂಡ ವ್ಯತ್ಯಾಸ ಕಂಡುಬರುತ್ತದೆ. ಅಷ್ಟೆ ಅಲ್ಲದೇ, 30 ವರ್ಷ ದಾಟುತ್ತಿದ್ದಂತೆ ಅಣ್ಣ – ತಮ್ಮನ ರೀತಿಯಲ್ಲಿ ಬಿಪಿ, ಶುಗರ್ , ಮಂಡಿ ನೋವು ಹೀಗೆ ಒಂದೊಂದೇ ಸಮಸ್ಯೆಗಳ ಸರಮಾಲೆ ಶುರುವಾಗುತ್ತಾ ಹೋಗುತ್ತದೆ. ಹೀಗಾಗಿ, ಮಹಿಳೆಯರು ತಮ್ಮ ಆಹಾರ ಕ್ರಮದ ಮೇಲೆ ವಿಶೇಷ ಕಾಳಜಿ ವಹಿಸಬೇಕು.

ಮಹಿಳೆಯರಿಗೆ 30 ವರ್ಷ ದಾಟುತ್ತಿದ್ದಂತೆ ಹಲವಾರು ಆರೋಗ್ಯ ಸಮಸ್ಯೆಗಳು (Women Health Problems)ಎದುರಾಗಬಹುದು. ಹಾಗಿದ್ರೆ, ಯಾವುದೆಲ್ಲ ಆರೋಗ್ಯ ಸಮಸ್ಯೆಗಳು ಕಂಡುಬರಬಹುದು ಎಂಬ ಮಾಹಿತಿ ಇಲ್ಲಿದೆ ನೋಡಿ.
ಪುರುಷರು ಮತ್ತು ಮಹಿಳೆಯರಿಗೆ ಹೋಲಿಕೆ ಮಾಡಿದರೆ, ಮಹಿಳೆಯರ ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ತೊಂದರೆಗಳು ಪುರುಷರು ಮತ್ತು ಮಹಿಳೆಯರ ಮೇಲೆ ಭಿನ್ನವಾಗಿ ಪ್ರಭಾವ ಬೀರುತ್ತದೆ. ಪುರುಷರು ಮತ್ತು ಮಹಿಳೆಯರು ಕೇವಲ ದೈಹಿಕ ಗುಣಲಕ್ಷಣಗಳಲ್ಲಿ ಮಾತ್ರವಲ್ಲದೆ ಮನೋಶಾಸ್ತ್ರೀಯ ಸಂರಚನೆಯಲ್ಲಿಯೂ ಭಿನ್ನವಾಗಿರುತ್ತಾರೆ. ಪುರುಷರು ಮತ್ತು ಮಹಿಳೆಯರು ಸಂವಹನ ಮಾಡುವ ರೀತಿ ಇರಬಹುದು ಇಲ್ಲವೇ ಸಂಬಂಧಗಳನ್ನು ಸಂಭಾಳಿಸಿ ಭಾವನೆಗಳ ಅಭಿವ್ಯಕ್ತಿ ಮತ್ತು ಒತ್ತಡಕ್ಕೆ ಪ್ರತಿಕ್ರಿಯಿಸುವ ರೀತಿಗಳಲ್ಲಿ ಭಿನ್ನತೆ ಕಾಣಬಹುದು. ಇದೇ ರೀತಿ ಹೆಚ್ಚಿನ ಒತ್ತಡ ಮಾನಸಿಕವಾಗಿ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ.

ಸಕ್ಕರೆ ಕಾಯಿಲೆ ( Diabetes)
ಮಹಿಳೆಯರ ವಯಸ್ಸು ಮೂವತ್ತು ದಾಟುತ್ತಿದ್ದಂತೆ ಹೆಚ್ಚಾಗಿ ಕಾಡಬಹುದಾದ ಸಮಸ್ಯೆ (Women Health Problems)ಎಂದರೆ ಸಕ್ಕರೆ ಕಾಯಿಲೆ . ಬರಬಹುದು. ಸಕ್ಕರೆ ಕಾಯಿಲೆ ಎಂಬುದು ಧೀರ್ಘಕಾಲ ಕಾಡುವ ಒಂದು ಮೆಟಬೋಲಿಕ್ ಆರೋಗ್ಯ ಸಮಸ್ಯೆಯಾಗಿದ್ದು, ರಕ್ತದ ಗ್ಲುಕೋಸ್ ಮಟ್ಟ ಏರಿಕೆ ಇಲ್ಲವೇ ಇಳಿಕೆ ಕಂಡುಬಂದು ಕೊನೆಗೆ ಹೃದಯದ ಕಾರ್ಯಾಚರಣೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಕ್ಕರೆ ಕಾಯಿಲೆ ಬರಲು ಅನೇಕ ಕಾರಣಗಳು ಇರಬಹುದು. ಹಾರ್ಮೋನ್ ಬದಲಾವಣೆ, ಬೊಜ್ಜು, ವಂಶಾವಳಿಯಾಗಿ ಕೆಲವೊಮ್ಮೆ ಗರ್ಭಾವಸ್ಥೆಯಲ್ಲಿ ಕೂಡ ಕಂಡು ಬರಬಹುದು. ಹೀಗಾಗಿ, ರೋಗ ಬರುವ ಮೊದಲೇ ಮುಂಜಾಗ್ರತೆ ವಹಿಸಿ ಉತ್ತಮ ಆಹಾರ ಪದ್ಧತಿ ಅನುಸರಿಸುವುದು ಉತ್ತಮ.

ಆಸ್ಟಿಯೊಪೊರೋಸಿಸ್ (Osteoporosis)
ಆಸ್ಟಿಯೊಪೊರೋಸಿಸ್ ಒಂದು ಸ್ಥಿತಿಯಾಗಿದ್ದು ಅದು ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಇದರಿಂದಾಗಿ, ಮೂಳೆಗಳು ತೆಳುವಾಗುವುದಲ್ಲದೆ ಇದ್ದಕ್ಕಿದಂತೆ ಮುರಿಯುವ ಸಾಧ್ಯತೆ ಕೂಡ ಇದೆ. ಕೆಲವೊಮ್ಮೆ, ಋತುಬಂಧದ ನಂತರದ ಹಂತದಲ್ಲಿ ಮಹಿಳೆಯರಲ್ಲಿ ಆಸ್ಟಿಯೊಪೊರೋಸಿಸ್ ಸಾಮಾನ್ಯವಾಗಿ ಕಂಡುಬರುವ ಸಾಧ್ಯತೆ ಕೂಡ ಇದೆ.
ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಕಂಡುಬಂದರೆ ಇಲ್ಲವೇ ಆರ್ಥ್ರೈಟಿಸ್ ಸಮಸ್ಯೆಯಿಂದ ಬಳಲುತ್ತಿದ್ದರೆ ಇದಲ್ಲದೆ ಧೂಮಪಾನ ಹಾಗೂ ಮಧ್ಯಪಾನ ಅಭ್ಯಾಸವಿದ್ದರೆ ಮೂಳೆಗಳ ತೊಂದರೆ ಹೆಚ್ಚು ಕಂಡುಬರಬಹುದು.ಈಸ್ಟ್ರೋಜನ್ ಹಾರ್ಮೋನ್ ಮಹಿಳೆಯರ ಮೂಳೆಯ ಸಾಂದ್ರತೆ ಹೆಚ್ಚಿಸಲು ಅಗತ್ಯವಾಗಿದ್ದು, ಒಂದು ವೇಳೆ ಇದಿಲ್ಲದೆ ಇದ್ದರೆ ಮೂಳೆಗಳ ಸಮಸ್ಯೆಯನ್ನು ಹೆಚ್ಚಾಗುವ ಸಾಧ್ಯತೆಗಳಿವೆ.

ಥೈರಾಯಿಡ್ ಸಮಸ್ಯೆ(Thyroid disease)
ಸಾಮಾನ್ಯವಾಗಿ ಜನರು ತೂಕ ಹೆಚ್ಚಾಗುವುದರಿಂದ ಮತ್ತು ಹಾರ್ಮೋನುಗಳ ಅಸಮತೋಲನದಿಂದ ಈ ಸಮಸ್ಯೆ ಎದುರಾಗುತ್ತದೆ. ನಮ್ಮ ಕತ್ತಿನ ಬಳಿ ಒಂದು ಗ್ರಂಥಿ ಇದ್ದು ಅಲ್ಲಿ ಹಾರ್ಮೋನ್ ಗಳು ಉತ್ಪತ್ತಿಯಾಗುತ್ತವೆ. ಈ ಕಾರಣದಿಂದಾಗಿ, ಎರಡು ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ದೇಹದಲ್ಲಿ ಅಯೋಡಿನ್ ಕೊರತೆ ಹಾಗೂ ರೋಗ ನಿರೋಧಕ ವ್ಯವಸ್ಥೆಯ ಅಡ್ಡ ಪರಿಣಾಮಗಳು ಈ ತೊಂದರೆಗೆ ಕಾರಣ ವಾಗಬಹುದು. ಇವುಗಳನ್ನು ಹೈಪರ್ ಥೈರಾಯ್ಡಿಸಮ್ ಮತ್ತು ಹೈಪೋಥೈರಾಯ್ಡಿಸಮ್ ಎಂದು ಕರೆಯಲಾಗುತ್ತದೆ. (ಅಂದರೆ ಹೆಚ್ಚು ಅಥವಾ ಕಡಿಮೆ ಥೈರಾಯ್ಡ್ ಹೊಂದಿರುವ ಸಮಸ್ಯೆ ) ಈ ಸಮಸ್ಯೆ ಮಹಿಳೆಯರಿಗೆ ಹೆಚ್ಚಾಗಿ ಕಂಡುಬರುತ್ತವೆ. ಮಹಿಳೆಯರಿಗೆ ಯಾವುದೇ ಸಂದರ್ಭದಲ್ಲಿ ಕಡಿಮೆ ಅಥವಾ ಹೆಚ್ಚು ಹಾರ್ಮೋನ್ ಉತ್ಪತ್ತಿ ಮಾಡಿ ಸಮಸ್ಯೆ ಒಡ್ಡುವ ಸಾಧ್ಯತೆಗಳಿವೆ.

ಕ್ಯಾನ್ಸರ್ ಕಾಯಿಲೆ(Breast cancer)
ಇತ್ತೀಚಿನ ದಿನಗಳಲ್ಲಿ ಬಹುತೇಕ ಹೆಚ್ಚಿನವರಲ್ಲಿ ಕಂಡುಬರುತ್ತಿರುವ ಸಮಸ್ಯೆಗಳಲ್ಲಿ ಕ್ಯಾನ್ಸರ್ ಕಾಯಿಲೆಗಳಲ್ಲಿ ಮಹಿಳೆಯರ ಸ್ತನ ಕ್ಯಾನ್ಸರ್ ಕೂಡ ಒಂದಾಗಿದ್ದು, ಯಾವುದೇ ಕೌಟುಂಬಿಕ ಇತಿಹಾಸ ಇಲ್ಲದೆ ಕಂಡುಬರುವ ಸಾಧ್ಯತೆಗಳಿವೆ. ಅಷ್ಟೆ ಅಲ್ಲದೇ, ಯಾವುದೇ ವಯಸ್ಸಿನಲ್ಲಿ ಕಂಡುಬರಬಹುದು.
ಕೆಲವೊಮ್ಮೆ ಮುಟ್ಟಿನ ಅವಧಿ ಮುಗಿದ ಕಂಡುಬರುವ ಸಾಧ್ಯತೆಗಳಿವೆ. ಹೀಗಾಗಿ, 30 ವರ್ಷ ದಾಟುತ್ತಿದ್ದಂತೆ ವರ್ಷಕ್ಕೊಮ್ಮೆ ಸ್ತನ ಕ್ಯಾನ್ಸರ್ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ಹೃದಯದ ಕಾಯಿಲೆ( Heart Problems)
ಹೃದಯ ಸ್ನಾಯು ಹಾನಿಗೊಳಗಾದಾಗ ಇಲ್ಲವೇ ಪರಿಣಾಮಕಾರಿಯಾಗಿ ಪಂಪ್ ಮಾಡುವ ಹೃದಯದ ಸಾಮರ್ಥ್ಯ ಕಡಿಮೆಯಾದಾಗ ಹೃದಯ ವೈಫಲ್ಯ ಉಂಟಾಗುತ್ತದೆ. ಹೃದಯ ಕವಾಟ ದೋಷ, ಅಧಿಕ ರಕ್ತದೊತ್ತಡ, ಆನುವಂಶಿಕ ಕಾಯಿಲೆ ಹೃದಯ ವೈಫಲ್ಯಕ್ಕೆ ಕಾರಣವಾಗುತ್ತವೆ. ಹೃದಯಾಘಾತಕ್ಕೆ ಕಾರಣ ಏನೇ ಆಗಿದ್ದರೂ ಕೂಡ ಹೃದಯಕ್ಕೆ ಆಮ್ಲಜನಕ-ಸಮೃದ್ಧ ರಕ್ತದ ಅಗತ್ಯತೆಯನ್ನು ಪಂಪ್ ಮಾಡಲು ಸಾಧ್ಯವಾಗದೇ ಇದ್ದಾಗ ಹೃದಯಾಘಾತ ಸಂಭವಿಸುತ್ತದೆ.

ಮಹಿಳೆಯರು ಮನೆಯವರ ಕಾಳಜಿ ಮಾಡುವ ಜೊತೆಗೆ ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸುವುದು ಅವಶ್ಯಕ. ಕೆಲವೊಮ್ಮೆ ಸಣ್ಣ ನಿರ್ಲಕ್ಷ್ಯ ಮುಂದೊಮ್ಮೆ ದೊಡ್ಡ ಅನಾಹುತಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಕೂಡ ಇದ್ದು, ಹಾಗಾಗಿ ಉತ್ತಮ ಆಹಾರ ಸೇವನೆ ಹಾಗೂ ಆಗಾಗ ವೈದ್ಯಕೀಯ ಸಲಹೆ , ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ.

Leave A Reply

Your email address will not be published.