Traffic Fines : ರಾಜ್ಯ ಸರಕಾರದಿಂದ ವಾಹನ ಸವಾರರಿಗೆ ಗುಡ್‌ನ್ಯೂಸ್‌!

Traffic fine :ಟ್ರಾಫಿಕ್ ರೂಲ್ಸ್ (traffic rules) ಬ್ರೇಕ್ ಮಾಡುವವರು ಸಾಕಷ್ಟು ಜನ. ಗೊತ್ತಿದ್ದೋ, ಮರೆತೋ ಒಟ್ಟಾರೆ ಬೇಕಾದ ಅಗತ್ಯ ದಾಖಲೆಗಳನ್ನು ವಾಹನದಲ್ಲಿ ಪ್ರಯಾಣಿಸುವಾಗ ಜೊತೆಗಿರಿಸಿಕೊಂಡಿರುವುದಿಲ್ಲ. ಇದರಿಂದ ಟ್ರಾಫಿಕ್ ರೂಲ್ ಉಲ್ಲಂಘನೆ ಮಾಡಿದಂತಾಗಿ, ದಂಡ ತೆರಬೇಕಾಗುವ (Traffic Fine) ಪರಿಸ್ಥಿತಿ ಎದುರಾಗುತ್ತದೆ.

 

ಪ್ರತೀದಿನ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಇದ್ದೇ ಇರುತ್ತದೆ. ಒಂದಿಲ್ಲೊಂದು ವಿಚಾರವಾಗಿ, ವಾಹನ ಸವಾರರು ಟ್ರಾಫಿಕ್ ಪೊಲೀಸ್(traffic police) ಕೈಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಸದ್ಯ ಇಂತಹ ವಾಹನ ಸವಾರರಿಗೆ ರಾಜ್ಯ ಸರ್ಕಾರ(state government) ಗುಡ್ ನ್ಯೂಸ್ ನೀಡಿದೆ.

ಹೌದು, ಸರ್ಕಾರ, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ಶೇಕಡಾ 50ರಷ್ಟು ರಿಯಾಯಿತಿಯನ್ನು ನೀಡಿ ಆದೇಶ ಹೊರಡಿಸಿದೆ.

ಫೆಬ್ರವರಿ 11, 2023ರೊಳಗೆ ದಾಖಲಾದ ಪ್ರಕರಣಗಳಿಗೆ ಈ ನಿಯಮ ಅನ್ವಯವಾಗುತ್ತದೆ. ಅನ್ವಯವಾಗುವ ಪ್ರಕರಣಗಳಿಗೆ ಒಂದು ಬಾರಿಯ ಕ್ರಮವಾಗಿ ಸಂಚಾರಿ ಇ-ಚಲನ್​​ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿ ಆದೇಶ ಹೊರಡಿಸಲಾಗಿದೆ.

ಮಾರ್ಚ್ 4 ರಿಂದ (ಇಂದು) ಮುಂದಿನ 15 ದಿನಗಳವರೆಗೆ ಈ ರಿಯಾಯಿತಿ ನೀಡಿ ರಾಜ್ಯ ಸಂಚಾರಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದ್ದು, 15 ದಿನದಲ್ಲಿ ದಂಡ ಕಟ್ಟಬೇಕಿದೆ.

Leave A Reply

Your email address will not be published.