ಉತ್ತಮ ಅಂಡರ್‌ಸೀಟ್ ಸ್ಟೋರೆಜ್ ಹೊಂದಿರುವ ಟಾಪ್ 5 ಬೆಸ್ಟ್ ಸ್ಕೂಟರ್‌ಗಳಿವು!
scooters :ಸ್ಕೂಟರ್ ಕ್ರೇಜ್ ಎಲ್ಲರಿಗೂ ಇದ್ದೇ ಇದೆ. ಯಾಕೆಂದರೆ ಸ್ಕೂಟರ್ ನ್ನು ಚಲಾವಣೆ ಮಾಡುವುದು ಅತೀ ಸುಲಭ. ಯುವಕ ಯುವತಿಯರಿಂದ ಹಿಡಿದು ವಯಸ್ಸಾದವರಿಗೂ ಒಂದು ಸ್ಕೂಟರ್(scooters ) ಇದ್ದರೆ ಒಳ್ಳೆಯದಿತ್ತು ಎಂಬ ಅಭಿಪ್ರಾಯ ಇರುತ್ತೆ. ಇದೀಗ ಮನೆ ಕೆಲಸ ಮತ್ತು ಆಫೀಸ್ ಹೋಗಲು ಉತ್ತಮ ಅಂಡರ್ ಸೀಟ್ ಸ್ಟೋರೇಜ್ (storage ) ಹೊಂದಿರುವ ಸ್ಕೂಟರ್‌ಗಳನ್ನು ಹುಡುಕುತ್ತಿದ್ದರೇ ಚಿಂತೆ ಬಿಡಿ. ನಿಮಗಾಗಿ ಟಾಪ್ 5 ಸ್ಕೂಟರ್‌ಗಳ ಪಟ್ಟಿ ಈ ಕೆಳಗೆ ನೀಡಲಾಗಿದೆ.
TVS ಜುಪಿಟರ್ 125:
ಭಾರತದಲ್ಲಿನ ಇತರ ಸ್ಕೂಟರ್‌ಗಳಂತೆ ಅಲ್ಲದೇ ಟಿವಿಎಸ್ ಜುಪಿಟರ್ 125 ಶೇಖರಣೆಗಾಗಿ ಹೆಚ್ಚಿನ ಅಂಡರ್ ಸೀಟ್ ಜಾಗವನ್ನು ನೀಡಿದ್ದು, ಇದು ಎರಡು ಹೆಲ್ಮೆಟ್‌ಗಳನ್ನು ತೆಗೆದುಕೊಳ್ಳುವಷ್ಟು ಉದ್ದ, ಅಗಲ ಮತ್ತು ಆಳವಾದ 33-ಲೀಟರ್ ಸ್ಟೋರೇಜ್ ಹೊಂದಿದೆ. ಜುಪಿಟರ್ 125 ಬೆಲೆಗಳು ರೂ. 85,525 ರಿಂದ ಪ್ರಾರಂಭವಾಗಿ ರೂ. 92,375 (ಎಕ್ಸ್-ಶೋ ರೂಂ, ಬೆಂಗಳೂರು)ವರೆಗೆ ಇರುತ್ತದೆ. ಇದು ಹಗುರವಾದ ಕ್ರ್ಯಾಂಕ್ಶಾಫ್ಟ್, ಸೈಲೆಂಟ್ ಕ್ಯಾಮ್ ಚೈನ್, ಕಡಿಮೆ ಇನ್ಎರ್ಟಿಯ ಕ್ರ್ಯಾಂಕ್ಶಾಫ್ಟ್ ಅಸೆಂಬ್ಲಿ, ಇತ್ಯಾದಿಗಳನ್ನು ಒಳಗೊಂಡಿದೆ. ಇದು ಭಾರತದ ಸ್ಕೂಟರ್ ವಿಭಾಗದಲ್ಲಿ ಸುಗಮವಾದ ಎಂಜಿನ್ ಗಳಲ್ಲಿ ಒಂದಾಗಿದೆ, ಮತ್ತು ಅತ್ಯುತ್ತಮ ದಕ್ಷತೆಯನ್ನು ನೀಡುತ್ತದೆ.
ಹೀರೋ ವಿಡಾ V1:
Hero Vida V1 ಎಲೆಕ್ಟ್ರಿಕ್ ಸ್ಕೂಟರ್ ಸ್ವಲ್ಪ ದುಬಾರಿ ಸ್ಕೂಟರ್ ಆಗಿದೆ. ಇದರಲ್ಲಿ ಎರಡು ವೇರಿಯಂಟ್‌ಗಳಿದ್ದು ಪ್ಲಸ್ ಆವೃತ್ತಿಗೆ 1.45 ಲಕ್ಷ ಮತ್ತು ಪ್ರೊ ರೂಪಾಂತರಕ್ಕೆ 1.59 ಲಕ್ಷ (ಎಕ್ಸ್ ಶೋ ರೂಂ, ಬೆಂಗಳೂರು)ಬೆಲೆಯಿದೆ. ಇದು ಹೀರೋ ಮೋಟೋಕಾರ್ಪ್‌ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದರ ಅಂಡರ್ ಸೀಟ್ ಸ್ಟೋರೇಜ್ ಸಾಮರ್ಥ್ಯವು 26 ಲೀಟರ್ ಇದೆ. ಸ್ಕೂಟರ್‌ನಲ್ಲಿ 7 ಇಂಚಿನ TFT ಡ್ಯಾಶ್ ಟಚ್ ಸ್ಕ್ರೀನ್ ಅನ್ನು ಬಳಸಲಾಗಿದೆ. ಡ್ಯಾಶ್‌ನಲ್ಲಿ ಸ್ಮಾರ್ಟ್‌ಫೋನ್ ಜೋಡಣೆಯನ್ನು ಒದಗಿಸಲಾಗಿದೆ. ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬಳಸಲಾದ ಬ್ಯಾಟರಿಯನ್ನು ಹೀರೋ ಸ್ವತಃ ಅಭಿವೃದ್ಧಿಪಡಿಸಿದೆ. ಈ ಕಾರಣದಿಂದಾಗಿ, ಬ್ಯಾಟರಿ ಬಾಳಿಕೆ ಹೆಚ್ಚಿರುತ್ತದೆ.
Ola S1 ಏರ್:
Ola ಇತ್ತೀಚಿಗೆ ತನ್ನ ಪ್ರವೇಶ ಮಟ್ಟದ ಕೊಡುಗೆಯಾದ S1 ಏರ್ ಅನ್ನು ಬಿಡುಗಡೆ ಮಾಡಿದ್ದು, ಇದು ರೂ. 84,999 (ಎಕ್ಸ್-ಶೋರೂಮ್, ಬೆಂಗಳೂರು) ನಿಂದ ಪ್ರಾರಂಭವಾಗುತ್ತದೆ. S1 ಮತ್ತು S1 Pro ಗಿಂತ Ola S1 ಏರ್ ಸ್ವಲ್ಪ ಕಡಿಮೆ ಸ್ಟೋರೇಜ್ ನೀಡುತ್ತದೆ. 34 ಲೀಟರ್ ಸ್ಟೋರೇಜ್ ಶೇಖರಣಾ ಸ್ಥಳವಾಗಿದೆ.
Ola S1, S1 Pro:
Ola S1 ಮತ್ತು S1 Pro ಬೃಹತ್ ಸ್ಟೋರೇಜ್‌ಗಳನ್ನು ಹೊಂದಿದ್ದು, ಬರೋಬ್ಬರಿ 36 ಲೀ. ಇದೆ. ಓಲಾ ಸ್ಕೂಟರ್‌ಗಳು ಸಂಪೂರ್ಣವಾಗಿ ಸಮತಟ್ಟಾದ ನೆಲದೊಂದಿಗೆ ಅಚ್ಚುಕಟ್ಟಾಗಿ, ಆಯತಾಕಾರದ ಸ್ಟೋರೇಜ್ ಅನ್ನು ಹೊಂದಿವೆ. ಈ ಉತ್ತಮವಾದ ನಿಯಮಿತವಾದ ಆಕಾರವು ಹೆಚ್ಚಿನ ವಸ್ತುಗಳನ್ನು ತುಂಬಲು ಪ್ರಯಾಣಿಕರಿಗೆ ಸಹಕರಿಸುತ್ತದೆ. S1 ಬೆಲೆ 1.10 ಲಕ್ಷ ರೂ. ಇದ್ದು S1 Pro ಬೆಲೆಯು 1.30 ಲಕ್ಷ ರೂ. (ಎಕ್ಸ್ ಶೋ ರೂಂ, ಬೆಂಗಳೂರು) ಇದೆ.
• ರಿವರ್ ಇಂಡಿ:
ಈ ಪಟ್ಟಿಯಲ್ಲಿರುವ ಟಾಪ್ ಸ್ಟೋರೇಜ್ ಹೊಂದಿರುವ ಸ್ಕೂಟರ್, ಇತ್ತೀಚೆಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ರಿವರ್ ಇಂಡಿ. ಕಳೆದ ತಿಂಗಳಷ್ಟೇ ರೂ. 1.25 ಲಕ್ಷಕ್ಕೆ (ಎಕ್ಸ್ ಶೋ ರೂಂ, ಬೆಂಗಳೂರು) ಬಿಡುಗಡೆಯಾದ ಹೊಸ ರಿವರ್ ಇಂಡಿ ಎಲೆಕ್ಟ್ರಿಕ್ ಸ್ಕೂಟರ್, ಹಲವು ಪ್ರಮುಖ ಕಾರಣಗಳಿಂದಾಗಿ ಬೇಡಿಕೆ ಹೆಚ್ಚಿಸಿಕೊಂಡಿದೆ ಎಂದು ಹೇಳಬಹುದು. 43- ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಸ್ಥಳವನ್ನು ಹೊಂದಿದೆ. ಇದು ಭಾರತದಲ್ಲಿ ಪ್ರಸ್ತುತ ಮಾರಾಟದಲ್ಲಿರುವ ಟಾಪ್ ಅಂಡರ್ ಸೀಟ್ ಸ್ಟೋರೇಜ್ ಹೊಂದಿರುವ ಸ್ಕೂಟರ್ ಆಗಿದೆ.
ನೀವು ಉತ್ತಮ ಅಂಡರ್ ಸೀಟ್ ಸ್ಟೋರೇಜ್ ಹೊಂದಿರುವ ಸ್ಕೂಟರ್ ಖರೀದಿಸುವ ಯೋಜನೆ ಇದ್ದಲ್ಲಿ ಈ ಮೇಲಿನವುಗಳಲ್ಲಿ ಯಾವುದನ್ನಾದರೂ ಆಯ್ಕೆ (select) ಮಾಡಿಕೊಳ್ಳಬಹುದು.