ಬಾಯಾರಿದ ಕಾಗೆಯ ಕಥೆಯ ಈಗಿನ ವೀಡಿಯೋ ನೋಡಿ, ನಿಜಕ್ಕೂ ಹೌದಾ ಅನಿಸುತ್ತೆ!
Thirsty crow: ನಾವು ಬಾಲ್ಯ ಸಮಯದಲ್ಲಿ ಹಿರಿಯರು ಹೇಳಿದ ಕೆಲವೊಂದು ಕಥೆಯನ್ನು ನಿಜವಾಗಬಾರದಿತ್ತಾ ಎಂದು ಈಗ ಅಂದುಕೊಳ್ಳುವುದು ಉಂಟು. ಯಾಕೆಂದರೆ ಕೆಲವೊಂದು ಕಥೆಗಳು ಅಷ್ಟೊಂದು ಮುಗ್ದತೆ ಒಳಗೊಂಡಿರುತ್ತದೆ. ಹಾಗೆಯೇ ನಾವು ಬಾಲ್ಯದಲ್ಲಿ ಬಾಯಾರಿದ ಕಾಗೆ (Thirsty crow) ಕಥೆ ಕೇಳದೆ ಇರಲು ಸಾಧವಿಲ್ಲ. ಈ ಕಥೆ ನಿಜವಾದರೆ ಹೇಗಿರಬಹುದು ಅಂತಾ ನೀವೇ ನೋಡಿ.
ಬನ್ನಿ ಆ ಕಥೆ ಏನೆಂದು ಮತ್ತೇ ಮೆಲುಕು ಹಾಕೋಣ. ಎಲ್ಲಿಂದಲೋ ತುಂಬಾ ಬಾಯಾರಿಕೆಯಾದ ಹಾರಿಕೊಂಡು ಬಂದ ಕಾಗೆಗೆ ಹೂಜಿ ಒಳಗೆ ನೀರು ಇರುವುದು ಕಾಣುತ್ತದೆ ಆದರೆ ಅದನ್ನು ಕುಡಿಯಲೇ ಬೇಕೇನುವಷ್ಟು ಕಾಗೆಗೆ ಬಾಯಾರಿಕೆಯಾಗಿರುತ್ತದೆ. ಆ ನೀರನ್ನು (water ) ಬಿಟ್ಟು ಹೋದರೆ ಮುಂದೆ ಸಿಗುತ್ತದೆ ಇಲ್ಲವೇ ಎಂಬ ಭಯ ಕಾಗೆಗೆ ಇತ್ತು. ಸದ್ಯ ಹೂಜಿಯಲ್ಲಿರುವ ನೀರು ಕುಡಿಯಲೇಬೇಕೆಂದು ನಿರ್ಧರಿಸಿ ಹೂಜಿಯಲ್ಲಿನ ನೀರು ಕುಡಿಯುವ ಪ್ರಯತ್ನ ಮಾಡಿತ್ತು. ಆದರೆ ನೀರು ಎಟುಕುತ್ತಿರಲಿಲ್ಲ..
ಆ ಕಾರಣದಿಂದ ಕಾಗೆ ತನ್ನ ಬುದ್ಧಿ ಉಪಯೋಗಿಸಿ ಅಲ್ಲೇ ಇದ್ದ ಸಣ್ಣ ಕಲ್ಲುಗಳನ್ನು ನೀರಿನ ಬಾಟಲಿಯೊಳಗೆ ಹಾಕಿ ಬಾಟಲಿಯಲ್ಲಿನ (bottle ) ನೀರು ಸಣ್ಣ ಕಲ್ಲುಗಳು ನೀರಿನಲ್ಲಿ ಮುಳುಗುತ್ತಿದ್ದಂತೆ ನೀರುಮೇಲೆ ಬರ ತೊಡಗಿತು. ಕಾಗೆಯು ಹೊಟ್ಟೆ ತುಂಬುವಷ್ಟು ನೀರು ಕುಡಿದು ಅಲ್ಲಿಂದ ಹೊರಡಿತು.
ಅದೇ ರೀತಿ ದಕ್ಷಿಣ ಚೀನಾದಲ್ಲಿ ಬಾಯಾರಿದ ಕಾಗೆಯು ಬೆಣಚುಕಲ್ಲುಗಳನ್ನು ಎತ್ತಿಕೊಂಡು ಬಾಟಲಿಗೆ ಹಾಕಿ ನೀರು ಕುಡಿದಿರುವುದು ಸಾಮಾಜಿಕ ಜಾಲತಾಣದಲ್ಲಿ (social media ) ವೈರಲ್ (viral ) ಆಗಿದೆ.
ಈ ವಿಡಿಯೋ ವನ್ನು ಪೀಪಲ್ಸ್ ಡೈಲಿ ಎಂಬ ಇನ್ಸ್ಟಾಗ್ರಾಮ್ ನಲ್ಲಿ (Instagram) ಹಂಚಿಕೊಂಡಿದ್ದು, “ದಿ ಕ್ರೌ ಅಂಡ್ ದಿ ಪಿಚರ್” ಎಂಬ ಶೀರ್ಷಿಕೆ ಹೊಂದಿದ್ದು , ಸಾವಿರಾರು ಜನ ವೀಕ್ಷಣೆ ಮಾಡಿದ್ದು, ಹಲವಾರು ಜನ ಲೈಕ್(like ) ಸಹ ಮಾಡಿದ್ದು, ʼಬುದ್ಧಿವಂತ ಕಾಗೆʼ ಎಂದು ಅನೇಕ ರೀತಿಯ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
ಇಂತಹ ನೀತಿ ಕಥೆಯಿಂದ ನಮ್ಮ ಜೀವನದಲ್ಲಿ (life ) ಸಹ ಕೆಲವೊಂದು ಪಾಠ ಕಲಿಯಲು ಸಾಧ್ಯವಾಗುತ್ತದೆ. ಅಂದರೆ ನಾವು ಜೀವನದಲ್ಲಿ ಕಷ್ಟ ಪಟ್ಟರೆ ಮಾತ್ರ ನಮಗೆ ಬೇಕಾದದನ್ನು ಪಡೆಯಬಹುದು. ಇದೊಂದು ಜೀವನದ ಪ್ರಮುಖ ಪಾಠ ವು ಹೌದು.