ಕೆಂಪು ರಕ್ತಕಣಗಳನ್ನು ಹೆಚ್ಚಿಸುವಲ್ಲಿ ಈ ಆಹಾರಗಳ ಮಹತ್ವ!
Red blood cell :ಸಾಮಾನ್ಯವಾಗಿ ಆಯಾಸ,ದೌರ್ಬಲ್ಯ, ಹೃದಯ (heart ) ಬಡಿತದಲ್ಲಿ ಏರುಪೇರು, ತಲೆನೋವು, ಉಸಿರಾಟದ ತೊಂದರೆ, ತಲೆ ತಿರುಗುವಿಕೆ, ಹಸಿವಾಗದೆ ಇರುವುದು ಹೀಗೆ ಅನೇಕ ಆರೋಗ್ಯ (health ) ಸಮಸ್ಯೆಗಳು (problems) ಕಂಡುಬರಲು ಪ್ರಮುಖ ಕಾರಣ ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾದಾಗ ರಕ್ತ ಹೀನತೆ ಉಂಟಾಗುವುದಾಗಿದೆ. ಇಂತಹ ಸಮಸ್ಯೆಯನ್ನು ಕೆಲವು ನೈಸರ್ಗಿಕ ಆರೈಕೆಯಿಂದಲೇ ನಿವಾರಿಸಬಹುದು. ಮುಖ್ಯವಾಗಿ ಸ್ಥಿರವಾದ ಹಿಮೋಗ್ಲೋಬಿನ್ (Red blood cell) ಪ್ರಮಾಣವು ದೇಹವನ್ನು ಆರೋಗ್ಯಯುತವಾಗಿ ಇರುವಂತೆ ಮಾಡುತ್ತದೆ.
ಅನಿಮಿಯ ಅಥವಾ ರಕ್ತಹೀನತೆ ಸಮಸ್ಯೆ ಎಂದರೆ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ. ಇದಕ್ಕೆ ಪರಿಹಾರವಾಗಿ ಕೆಲವು ಆಹಾರ ಪದಾರ್ಥಗಳ ಬಗ್ಗೆ ಪೌಷ್ಟಿಕ ತಜ್ಞರು ತಿಳಿಸಿರುತ್ತಾರೆ.
ತಜ್ಞರ ಪ್ರಕಾರ ಹಿಮೋಗ್ಲೋಬಿನ್ ಹೆಚ್ಚಿಸುವ (increase ) ಆಹಾರಗಳು (food ) ಇಂತಿವೆ :
ಎಳ್ಳು ಬೀಜಗಳು :
ಎಳ್ಳು ತಿಂದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳ ಬಹುದು ಮತ್ತು ದೇಹದಲ್ಲಿ ಕಬ್ಬಿಣದ ಅಂಶದ ಕೊರತೆಯನ್ನು ಹೋಗಲಾಡಿಸಿಕೊಳ್ಳಬಹುದು. ಅದಲ್ಲದೆ ಅನಿಮಿಯ ಸಮಸ್ಯೆಯಿಂದ ಹೊರಬರಬಹುದು. ಏಕೆಂದರೆ ಎಳ್ಳಿನಲ್ಲಿ ಕಂಡು ಬರುವ ಫೋಲೆಟ್, ಫ್ಲೇವೋನಾಯ್ಡ್, ಕಾಪರ್ ಈ ವಿಚಾರದಲ್ಲಿ ಸಹಕಾರಿ ಯಾಗಿ ಕೆಲಸ ಮಾಡುತ್ತದೆ.
ಬೀಟ್‌ರೂಟ್:
ಬೀಟ್‌ರೂಟ್ ಸೇವನೆಯಿಂದ ಹಿಮೋಗ್ಲೋಬಿನ್ ಅಂಶ ಹೆಚ್ಚಾಗುತ್ತದೆ. ಇದು ಅಧಿಕ ಕಬ್ಬಿಣಾಂಶ, ಫೊಲಿಕ್ ಆ್ಯಸಿಡ್ , ಪೊಟ್ಯಾಷಿಯಂ ಮತ್ತು ಫೈಬರ್ ಅಂಶಗಳನ್ನು ಪೂರೈಸುತ್ತದೆ. ಇದರ ಜ್ಯೂಸ್ (juice ) ಸೇವನೆಯಿಂದ ಆರೋಗ್ಯಕರ ಕೆಂಪು ರಕ್ತಕಣಗಳು ವೃದ್ಧಿ ಸುತ್ತವೆ.
ಸೇಬು ( Apple ) ಮತ್ತು ದಾಳಿಂಬೆ:
ನಿತ್ಯವೂ ಒಂದು ದಾಳಿಂಬೆ ಅಥವಾ ಸೇಬು ಹಣ್ಣನ್ನು ತಿನ್ನುವುದರಿಂದ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುವುದು. ಸೇಬು ಮತ್ತು ದಾಳಿಂಬೆ ಹಣ್ಣಿನಲ್ಲಿ ಕಬ್ಬಿಣಾಂಶ ಸಮೃದ್ಧವಾಗಿರುತ್ತದೆ. ದಿನಕ್ಕೆ ಒಂದು ಗ್ಲಾಸ್ ಸೇಬು ರಸ ಅಥವಾ ದಾಳಿಂಬೆ ರಸವನ್ನು ಕುಡಿಯಬಹುದು.ದಾಳಿಂಬೆ ಹಣ್ಣಿನಲ್ಲಿ ಅಧಿಕ ಪ್ರಮಾಣದ ಕ್ಯಾಲ್ಸಿಯಂ, ಫೈಬರ್, ಪ್ರೋಟೀನ್ ಅನ್ನು ಒಳಗೊಂಡಿರುತ್ತದೆ. ಇದರ ಪೌಷ್ಟಿಕಾಂಶದ ಮೌಲ್ಯವು ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯ ಮಾಡುವುದು. ಅಲ್ಲದೆ ಆರೋಗ್ಯಕರ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುವುದು.
ಖರ್ಜೂರ:
ಖರ್ಜೂರ ತನ್ನಲ್ಲಿ ದೇಹಕ್ಕೆ ಅವಶ್ಯಕವಾದ ಕಬ್ಬಿಣದ ಪ್ರಮಾಣ, ವಿಟಮಿನ್ ಸಿ, ವಿಟಮಿನ್ ಬಿ ಕಾಂಪ್ಲೆಕ್ಸ್, ಪೋಲಿಕ್ ಆಮ್ಲ ಇತ್ಯಾದಿಗಳನ್ನು ಹೆಚ್ಚಾಗಿ ಹೊಂದಿದ್ದು, ಕೆಂಪು ರಕ್ತಕಣಗಳ ಸಂಖ್ಯೆಯನ್ನು ದೇಹದಲ್ಲಿ ಹೆಚ್ಚಿಸುತ್ತದೆ.
ನಿಮ್ಮ ದೇಹದಲ್ಲಿ ಒಂದು ವೇಳೆ ಅನಿಮಿಯಾ ಅಥವಾ ರಕ್ತಹೀನತೆ ಸಮಸ್ಯೆಯಿದ್ದರೆ ಅದನ್ನು ಸುಲಭವಾಗಿ ಪರಿಹಾರ ಮಾಡುತ್ತದೆ.
ಹರಿವೆ ಸೊಪ್ಪು:
ಹಚ್ಚ ಹಸಿರಾದ ಹರಿವೆ ಸೊಪ್ಪುಗಳು ತಮ್ಮಲ್ಲಿ ಅಪಾರ ಪ್ರಮಾಣದ ಕಬ್ಬಿಣದ ಅಂಶವನ್ನು ಹೊಂದಿದ್ದು, ದೇಹದಲ್ಲಿ ಹಿಮೋಗ್ಲೋಬಿನ್ ಅಥವಾ ಕೆಂಪು ರಕ್ತಕಣಗಳ ಸಂಖ್ಯೆಯನ್ನು ವೃದ್ಧಿಸುತ್ತವೆ
ಒಣದ್ರಾಕ್ಷಿ:
ಕಬ್ಬಿಣ ಮತ್ತು ಕಾಪರ್ ಹೆಚ್ಚಾಗಿರುವ ಒಣದ್ರಾಕ್ಷಿ ನಿಮ್ಮ ದೇಹದಲ್ಲಿ ಕೆಂಪು ರಕ್ತಕಣಗಳನ್ನು ಮತ್ತು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಹೀಗಾಗಿ ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ಮಾತ್ರ ವಲ್ಲದೆ ಸಂಜೆಯ ಸ್ನ್ಯಾಕ್ಸ್ ರೂಪದಲ್ಲಿ ಸಹ ಒಣದ್ರಾಕ್ಷಿ ಸೇವಿಸಬಹುದು.
ರಾಗಿ:
ರಾಗಿ ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ವನ್ನು ಹೆಚ್ಚಿಸುತ್ತದೆ ಮತ್ತು ಕಬ್ಬಿಣದ ಕೊರತೆಯನ್ನು ನೀಗಿಸುತ್ತದೆ. ಅನಿಮಿಯ ಸಮಸ್ಯೆ ದೂರವಾಗುವಂತೆ ರಾಗಿ ದೇಹದಲ್ಲಿ ಕೆಲಸ ಮಾಡುತ್ತದೆ.
ಪಾಲಕ್ ಸೊಪ್ಪು :
ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಕಬ್ಬಿಣವು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಹಾಗೇ ಹಿಮೋಗ್ಲೋಬಿನ್ ಅಂಶ ಮತ್ತು ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸಲು ಸಹಾಯಕಾರಿಯಾಗಿದೆ
ಮುಖ್ಯವಾಗಿ ಹಿಮೋಗ್ಲೋಬಿನ್, ಕೆಂಪು ರಕ್ತ ಕಣಗಳಲ್ಲಿ ಕಂಡು ಬರುವ ಪ್ರೋಟೀನ್ ಆಗಿದ್ದು ಇದು ದೇಹದ ಅಂಗಾಂಶಗಳಿಗೆ ಆಮ್ಲಜನಕವನ್ನು ಪೂರೈಸುತ್ತದೆ. ಆದರೆ ಕಡಿಮೆ ಹಿಮೋಗ್ಲೋಬಿನ್ ಹೊಂದಿರುವವರಲ್ಲಿ ರಕ್ತಹೀನತೆ ಕೊರತೆ ಉಂಟಾಗುತ್ತದೆ. ಇದರಿಂದ ನೀವು ಹಲವು ಸಮಸ್ಯೆಗಳನ್ನು ಎದುರಿಸಬಹುದು. ಆದ್ದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಈ ಮೇಲಿನ ಆಹಾರಗಳು ನಿಮಗೆ ಸಹಾಯ ಮಾಡುತ್ತವೆ.