Suzuki : ಜಿಮ್ಮಿ ಸ್ಪೆಷಲ್‌ ಹೆರಿಟೇಜ್‌ ಎಡಿಷನ್‌ ಪರಿಚಯ ಮಾಡಿಕೊಟ್ಟ ಸುಜುಕಿ!

Maruti Suzuki Jimny :ಇಂದಿನ ದಿನಗಳಲ್ಲಿ ಓಡಾಟ ನಡೆಸಲು ವಾಹನಗಳು ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರ ಮನೆಯಲ್ಲಿ ಕೂಡ ವಾಹನಗಳು ಇರೋದು ಸಾಮಾನ್ಯವಾಗಿ ಬಿಟ್ಟಿದೆ.ಕೆಲ ಬ್ರಾಂಡ್ ಗಳ ಕಾರುಗಳು ಜನರ ಮನದಲ್ಲಿ ವಿಶೇಷ ಸ್ಥಾನ ಪಡೆದುಕೊಂಡು ಬಿಟ್ಟಿವೆ. ಈ ನಡುವೆ ಕೆಲ ಕಾರು ತಯಾರಿಕಾ ಕಂಪನಿಗಳು ಆಗಾಗ ಹೊಸ ಮಾದರಿಗಳನ್ನು ಪರಿಚಯಿಸಿ ಜನರ ಗಮನ ಸೆಳೆಯುವತ್ತ ಲಕ್ಷ್ಯ ವಹಿಸುತ್ತವೆ.

2023ರ ಆಟೋ ಎಕ್ಸ್‌ಪೋದಲ್ಲಿ ಸುಜುಕಿ ಜಿಮ್ನಿ ಮಾದರಿಯು ಕಂಡುಬಂದು ಜನರಲ್ಲಿ ಹೆಚ್ಚಿನ ನಿರೀಕ್ಷೆ ಹುಟ್ಟು ಹಾಕಿದೆ. ಭಾರತಿಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದುಕೊಂಡಿರುವ ಸುಜುಕಿ ಜಿಮ್ನಿ ಎಸ್‍ಯುವಿ (Maruti Suzuki Jimny ) ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ದಾಖಲೆಯ ಮಟ್ಟದಲ್ಲಿ ಮಾರಾಟವಾಗಿ ಹೊಸ ಸಂಚಲನ ಮೂಡಿಸಿದೆ. ಸುಜುಕಿ ಇತ್ತೀಚೆಗೆ ಆಸ್ಟ್ರೇಲಿಯಾದ ಮಾರುಕಟ್ಟೆಯಲ್ಲಿ ಜಿಮ್ನಿ ಸ್ಪೆಷಲ್ ಹೆರಿಟೇಜ್ ಎಡಿಷನ್ ಅನ್ನು 33,490 ಆಸಿ ಡಾಲರ್‌ (ಸುಮಾರು ರೂ.18 ಲಕ್ಷ) ಬೆಲೆಗೆ ಪರಿಚಯಿಸಲಾಗಿದೆ. ಭಾರತದ ಮಾರುಕಟ್ಟೆಯಲ್ಲಿ ವಿಶ್ವದಲ್ಲಿ ಮೊತ್ತ ಮೊದಲ ಬಾರಿಗೆ 5 ಡೋರ್ ಹೊಂದಿರುವ ಜಿಮ್ನಿ ಎಸ್‍ಯುವಿ ಬಿಡುಗಡೆಯಾಗಲಿರುವುದು ವಿಶೇಷ.ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾಗೆ ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿಯು ಬಿಡುಗಡೆಯಾದ ಬಳಿಕ ಪೈಪೋಟಿ ನೀಡುವ ಲಕ್ಷಣಗಳು ದಟ್ಟವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಜಿಮ್ನಿ (Maruti Suzuki Jimny)ಎಸ್‍ಯುವಿಯು ಝೀಟಾ ಮತ್ತು ಆಲ್ಫಾ ಎಂಬ ಎರಡು ಟ್ರಿಮ್‌ಗಳಲ್ಲಿ ಲಭ್ಯವಿರಲಿದೆ. ಬಹು ನಿರೀಕ್ಷಿತ ಸುಜುಕಿ ಜಿಮ್ನಿ ಮುಂದಿನ 2-3 ತಿಂಗಳುಗಳಲ್ಲಿ ರಸ್ತೆಗಿಳಿಯುವ ಸಾಧ್ಯತೆ ದಟ್ಟವಾಗಿದೆ. ಇದರ ವಿಶೇಷತೆ ಕಡೆ ಗಮನ ಹರಿಸಿದರೆ,ಈ ಹೊಸ ಸುಜುಕಿ ಜಿಮ್ನಿ ಎಸ್‍ಯುವಿಯಲ್ಲಿ Arkamys ಸರೌಂಡ್ ಸೆನ್ಸ್‌ನೊಂದಿಗೆ 9-ಇಂಚಿನ SmartPlay Pro+ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿದೆ. ಇದರ ಜೊತೆಗೆ ಈ ಮಾರುತಿ ಜಿಮ್ನಿ 5 ಡೋರ್ ಎಸ್‍ಯುವಿಯಲ್ಲಿ ಇತ್ತೀಚಿನ ಸ್ಮಾರ್ಟ್‌ಫೋನ್ ಸಂಪರ್ಕ, ಲೆದರ್ ಸುತ್ತುವ ಸ್ಟೀರಿಂಗ್ ವೀಲ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪುಶ್ ಸ್ಟಾರ್ಟ್/ಸ್ಟಾಪ್, ಎಲೆಕ್ಟ್ರಿಕಲ್ ಅಡ್ಜಸ್ಟ್ ಮಾಡಬಹುದಾದ ಗ್ಲಾಸ್ ಅನ್ನು ಒಳಗೊಂಡಿದೆ.

ಈ ಸುಜುಕಿ ಜಿಮ್ನಿ ಎಸ್‍ಯುವಿಯಲ್ಲಿ ವಾಷರ್, ಫಾಗ್ ಜೊತೆ LED ಆಟೋ ಹೆಡ್‌ಲ್ಯಾಂಪ್‌ಗಳಂತಹ ವೈಶಿಷ್ಟ್ಯಗಳ ಲ್ಯಾಂಪ್‌ಗಳನ್ನು ಒಳಗೊಂಡಿದೆ. ಸ್ಟ್ಯಾಂಡರ್ಡ್ ಫೀಚರ್ ಕಿಟ್ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕದೊಂದಿಗೆ ಸ್ಮಾರ್ಟ್‌ಪ್ಲೇ ಪ್ರೊ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದ ಈ ಎಸ್‍ಯುವಿಯಲ್ಲಿ ಎಂಐಡಿ (ಟಿಎಫ್‌ಟಿ ಕಲರ್ ಡಿಸ್ಪ್ಲೇ) ಮತ್ತು ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಅನ್ನು ಒಳಗೊಂಡಿರುತ್ತದೆ.

ಸುಜುಕಿ ಎಸ್‍ಯುವಿಯ ಎರಡೂ-ಡೋರಿನ ಆವೃತ್ತಿಯಲ್ಲಿ ಆವೃತ್ತಿಯನ್ನು ಪ್ರದರ್ಶಿಸಿದೆ. ಸುಜುಕಿ ಜಿಮ್ನಿ ಸ್ಪೆಷಲ್ ಹೆರಿಟೇಜ್ ಎಡಿಷನ್ ಅನ್ನ್ನು 5-ಡೋರಿನ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆ ಮತ್ತು 4×4 ಆವೃತ್ತಿಯೊಂದಿಗೆ ಮಾತ್ರ ಲಭ್ಯವಾಗಲಿದೆ. ಇದರ ಜೊತೆಗೆ ಹಿಂಭಾಗದ ಮಡ್‌ಫ್ಲ್ಯಾಪ್‌ಗಳ ಮೇಲೆ ‘ಸುಜುಕಿ’ ಎಂಬಾಸಿಂಗ್ ಒಳಗೊಂಡಿದೆ. ಗ್ಲೋಬಲ್ ಸ್ಪೆಕ್ ಜಿಮ್ನಿ, ಅದರ ವಿಶೇಷ ಆವೃತ್ತಿಯಲ್ಲಿ, ಈ ಎಸ್‍ಯುವಿ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಸ್ಪೋರ್ಟ್ಸ್ ರೆಡ್ ಮಡ್‌ಫ್ಲ್ಯಾಪ್‌ಗಳು, ರೆಟ್ರೊ ಥೀಮ್‌ನೊಂದಿಗೆ ಬಣ್ಣದ ಡೆಕಾಲ್‌ಗಳು ಮತ್ತು ಬ್ಲ್ಯಾಕ್ ಪರ್ಲ್, ಜಂಗಲ್ ಗ್ರೀನ್, ವೈಟ್ ಮತ್ತು ಮೀಡಿಯಂ ಗ್ರೇ ಅನ್ನು ಒಳಗೊಂಡಿರುವ ವಿಶಿಷ್ಟವಾದ ಬಾಡಿ ಬಣ್ಣದ ಆಯ್ಕೆಗಳನ್ನು ನೀಡಲಾಗಿದೆ.

ಮಾರುತಿ ಸುಜುಕಿ ಕಂಪನಿಯ ಜಿಮ್ನಿ ಎಸ್‍ಯುವಿಗಾಗಿ 22,000 ಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಗಳಿಸಿದ್ದು, ಆಸಕ್ತ ಗ್ರಾಹಕರು ಅಧಿಕೃತ NEXA ಡೀಲರ್‌ಶಿಪ್‌ಗಳಲ್ಲಿ ರೂ 25,000 ಟೋಕನ್ ಮೊತ್ತವನ್ನು ಪಾವತಿಸಿ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಎಸ್‍ಯುವಿಯ ಫ್ರಂಟ್ ಮತ್ತು ರಿಯರ್ ವೆಲ್ಡ್ ಟೋ ಹುಕ್ಸ್, ಫ್ರಂಟ್ ಮತ್ತು ರಿಯರ್ ಸೀಟ್ ಅಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್ ಅನ್ನು ಒಳಗೊಂಡಿದೆ. ಇದರ ಜೊತೆಗೆ, ಬಾಡಿ ಬಣ್ಣದ ORMVಗಳು, ಅಲಾಯ್ ವ್ಹೀಲ್ ಗಳು ಮತ್ತು ಟಾಪ್-ಎಂಡ್ ಆಲ್ಫಾ ಟ್ರಿಮ್‌ನಲ್ಲಿ ಪ್ರತ್ಯೇಕವಾಗಿ ಒದಗಿಸಲಾಗುತ್ತದೆ. ಸ್ಟೇನ್ ತೆಗೆಯಬಹುದಾದ ಐಪಿ ಫಿನಿಶ್ ಅನ್ನು ಹೊಂದಿದೆ. ಸ್ಟೇನ್ ತೆಗೆಯಬಹುದಾದ ಐಪಿ ಫಿನಿಶ್ ಮತ್ತು ಡ್ರೈವರ್ ಸೈಡ್ ಪವರ್ ವಿಂಡೋವನ್ನು ಒಳಗೊಂಡಿದೆ.

Leave A Reply

Your email address will not be published.