Matka AC : ಎಸಿ ಇನ್ನು ಮಣ್ಣಿನ ಮಡಕೆಯಲ್ಲೇ ಮಾಡಿ.! ಹಣ ರೂ.500ಗಿಂತ ಕಡಿಮೆ, ಹೇಗೆ? ಇಲ್ಲಿದೆ ವಿವರ
Matka AC : ಫೆಬ್ರವರಿ ತಿಂಗಳು ಮುಗಿಯುತ್ತಿದ್ದಂತೆ ಸೆಕೆಯ ಬೇಗೆ ಜನರನ್ನು ಹೈರಾಣಾಗಿ ಹೋಗುವಂತೆ ಮಾಡುತ್ತದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಮಧ್ಯಾಹ್ನದ ಉರಿಬಿಸಿಲಿನ ಬೇಗೆಯ ಬಗ್ಗೆ ವಿವರಿಸಬೇಕಾಗಿಲ್ಲ. ಹೀಗಾಗಿ, ಮಾರ್ಚ್ ಆರಂಭದಲ್ಲೇ ಜನರು ಮನೆಯಲ್ಲಿ ಫ್ಯಾನ್ ಹಾಕಿಕೊಳ್ಳಲಾರಂಭಿಸೋದು ಕಾಮನ್. ತಾಪಮಾನ ಹೆಚ್ಚಾದಂತೆ ಜನರು ಫ್ಯಾನ್(Fan) , ಕೂಲರ್ (cooler), ಎಸಿಗಳನ್ನು(AC) ಚಲಾಯಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದರೆ, ಬೇಸಿಗೆ ಕಾಲ ಶುರುವಾಗುವ ಮೊದಲೇ ಉತ್ತಮ ವೈಶಿಷ್ಟ್ಯತೆ ಹೊಂದಿರುವ ಎಸಿ ಮಾರುಕಟ್ಟೆಗಳಲ್ಲಿ ಲಗ್ಗೆ ಇಡುತ್ತಿವೆ. ಆದರೂ ನೀವು ದುಬಾರಿ ಎಂದು ಚಿಂತಿತರಾಗಿದ್ದೀರಾ? ಹಾಗಿದ್ರೆ, ನೀವು ಹೀಗೆ ಬಿಸಿಲಿನ ತಾಪದಿಂದ ಪರಿಹಾರ ಪಡೆಯಲು ಸರಳ ಸುಲಭ ವಿಧಾನ ನಾವು ಹೇಳ್ತೀವಿ ಕೇಳಿ!!
ಈಗಾಗಲೇ ಬೇಸಿಗೆ ಆರಂಭವಾಗಿದ್ದು ಜನರು ಬಿಸಿಲಿನ ತಾಪ ತಡೆಯಲಾಗದೆ ತಂತ್ರಜ್ಞಾನ ಮೊರೆ ಹೋಗುತ್ತಿದ್ದು, ದಿನದ 24ಗಂಟೆಯಲ್ಲಿ ಎಸಿ, ಕೂಲರ್ (cooler) ಇಲ್ಲದೆ ಇರಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಸಾಮಾನ್ಯವಾಗಿ ಬೇಸಿಗೆ ಸಮೀಪಿಸುತ್ತಿದ್ದಂತೆಯೇ ಎಸಿ ಬೆಲೆ ಗಣನೀಯವಾಗಿ ಹೆಚ್ಚಾಗುತ್ತದೆ. ಈ ಕಾರಣಕ್ಕಾಗಿ ಬಹಳಷ್ಟು ಮಂದಿ ಎಸಿ ಬದಲಿಗೆ ಕೂಲರ್ ಆಯ್ಕೆ ಮಾಡುತ್ತಾರೆ. ಸಾಮಾನ್ಯವಾಗಿ ಎಸಿ (AC) ಅಥವಾ ಹವಾನಿಯಂತ್ರಣಗಳಿಗೆ ಕಡಿಮೆ ಎಂದರೂ 40,000 ರಿಂದ 60,000 ರೂ. ವೆಚ್ಚ ಭರಿಸಬೇಕು. ಈ ದುಬಾರಿ ವೆಚ್ಚಕ್ಕೆ ಕಡಿವಾಣ ಹಾಕಿ ಕಡಿಮೆ ಅಗ್ಗದ ಬೆಲೆಯಲ್ಲಿ ಮನೆಯಲ್ಲೆ ಹವಾ ನಿಯಂತ್ರಣ(Home Made AC) ತಯಾರಿಕೆಯಲ್ಲಿ ಈಗಾಗಲೆ ಕೆಲವರು ತೊಡಗಿಸಿಕೊಂಡು ಪ್ರಯೋಜನ ಪಡೆಯುತ್ತಿದ್ದಾರೆ. ಅರೇ, ಇದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಬೇಸಿಗೆಯ ಕಾವು ಇಳಿಸಿಕೊಳ್ಳಲು ಹೊಟ್ಟೆ ತಂಪು ಮಾಡಲು ಮಡಕೆಯ ನೀರನ್ನು ಕುಡಿಯುವ ಅಭ್ಯಾಸ ಹೆಚ್ಚಿನವರಿಗೆ ಇದೆ. ಆದರೆ, ಮಡಕೆಯನ್ನು ಹವಾ ನಿಯಂತ್ರಣದ (Matka AC ) ರೀತಿಯಲ್ಲಿ ಬಳಕೆ ಮಾಡಬಹುದು ಎಂದು ಕೇಳಿದಾಗ ನಿಮಗೆ ಅಚ್ಚರಿ ಎನಿಸಬಹುದು. ಆದರೂ ಹವಾ ನಿಯಂತ್ರಣ ಎಂದರೆ ದುಬಾರಿ ವೆಚ್ಚ ಭರಿಸಬೇಕು ಎಂದು ನೀವು ಅಂದುಕೊಳ್ಳಬಹುದು. ಇದಕ್ಕೆ ನಿಮಗೆ ತಗಲುವ ವೆಚ್ಚ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ!! ಕೇವಲ 500 ರೂಪಾಯಿಯಲ್ಲಿ ಸುಲಭವಾಗಿ ಹವಾ ನಿಯಂತ್ರಣ ತಯಾರಿಸಬಹುದು. ಹಾಗಿದ್ರೆ, ಮಡಕೆಯನ್ನು ಹವಾ ನಿಯಂತ್ರಣವಾಗಿ ಬದಲಾಯಿಸುವುದು ಹೇಗೆ ಅಂತೀರಾ?
ನಿಮ್ಮ ಮನೆಯಲ್ಲಿ ಹಳೆಯ ಮಡಕೆ ಅಥವಾ ಮಡಕೆ ಇಲ್ಲ ಎಂದಾದರೆ, ನೀವು ಹೊಸ ಮಡಕೆಯನ್ನು ಖರೀದಿ ಮಾಡಿ ಹವಾನಿಯಂತ್ರಣವನ್ನು ತಯಾರಿಸಬಹುದು. ಹವಾನಿಯಂತ್ರಣವನ್ನು ತಯಾರಿಸಲು ನೀವು ಮೊದಲು ಮಡಕೆಯ ಕೆಳಭಾಗದಲ್ಲಿ ಕೆಲವು ರಂಧ್ರಗಳನ್ನು ಮಾಡಿಕೊಳ್ಳಬೇಕು. ಇದರ ಬಳಿಕ ನೀವು ಈ ಮಡಕೆಯ ಬಾಯಿಯ ಮೇಲೆ ಹೆಚ್ಚಿನ ಶಕ್ತಿಯ ಫ್ಯಾನ್ ಅನ್ನು ಹಾಕಬೇಕಾಗುತ್ತದೆ. ಈ ಹೆಚ್ಚಿನ ಶಕ್ತಿಯ ಫ್ಯಾನ್‌ನಿಂದ ಹೊರಗಿನ ಗಾಳಿಯನ್ನು ಒಳಗೆ ಎಳೆಯಲಾಗುತ್ತದೆ. ಈ ಪ್ರಕ್ರಿಯೆ ಬಳಿಕ ಅದನ್ನು ನೀವು ಕೆಳಭಾಗದಲ್ಲಿ ಮಾಡಿದ ರಂಧ್ರಗಳ ಮೂಲಕ ಹೊರತೆಗೆಯಲಾಗುತ್ತದೆ. ಇದಕ್ಕಾಗಿ ನೀವು ಈ ಪಾತ್ರೆಯಲ್ಲಿ ಐಸ್ ಅನ್ನು ಇಡಬೇಕು. ಇದರ ನಂತರ, ಫ್ಯಾನ್‌ಗೆ ವಿದ್ಯುತ್ ಸಂಪರ್ಕ ನೀಡಿದ ಕೂಡಲೇ ಈ ಏರ್ ಕಂಡಿಷನರ್ ಕೆಲಸ ಮಾಡಲು ಆರಂಭಿಸುತ್ತದೆ.
ಮಡಕೆಯಿಂದ ಮಾಡಿದ ಈ ಹವಾನಿಯಂತ್ರಣವು ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿದ್ದು, ಈ ಹವಾ ನಿಯಂತ್ರಣ(Home Made AC) ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ನೀವು ಕೆಲವೇ ಗಂಟೆಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದಾಗಿದ್ದು, ಇದಕ್ಕಾಗಿ ಮಡಕೆಯಲ್ಲಿ ಕೆಲವು ಸಾಧನಗಳನ್ನು ಅಳವಡಿಸಬೇಕಾಗಿದ್ದು, ಅದೇ ರೀತಿ, ಮಡಕೆಯಲ್ಲಿ ಗಾಳಿ ವ್ಯವಸ್ಥೆ ಮಾಡಬೇಕಾಗುತ್ತದೆ. ಅಗ್ಗದ ಬೆಲೆಯಲ್ಲಿ ಬಿಸಿಲಿನ ತಾಪದಿಂದ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಹೊಸ ಪ್ರಯತ್ನ ನಡೆಸಿ ಪ್ರಯೋಜನ ನೀವೇ ಕಂಡುಕೊಳ್ಳಿ.