ನಾಯಿ ಅಂತ ಸತತ ಎರಡು ವರ್ಷದಿಂದ ಕರಡಿ ಸಾಕಿದವರ ಕಥೆ!
Pets : ಸೋಷಿಯಲ್ ಮೀಡಿಯಾದಲ್ಲಿ ಅದೆಷ್ಟೋ ವಿಡಿಯೋಗಳು ದಿನಂಪ್ರತಿ ವೈರಲ್ ಆಗುತ್ತಿರುತ್ತದೆ. ಅವುಗಳಲ್ಲಿ ಕೆಲವು ನಮ್ಮನ್ನು ಅಚ್ಚರಿಗೆ ತಳ್ಳಿದರೆ ಮತ್ತೆ ಕೆಲವು ನಮ್ಮನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ. ಸದ್ಯ ವೈರಲ್ (Viral News)ಆಗುತ್ತಿರುವ ಸುದ್ದಿಯ ಫೋಟೋ ನೆಟ್ಟಿಗರನ್ನು ಅಚ್ಚರಿ ಮೂಡಿಸಿದೆ. ಹೀಗೂ ಉಂಟೇ ಎಂಬ ಪ್ರಶ್ನೆ ಮೂಡುವಂತಹ ವೀಡಿಯೋ ವೈರಲ್ ಆಗಿದೆ. ಹಾಗಿದ್ರೆ, ಅಂತಹದ್ದೇನು ಕಹಾನಿ ಅನ್ನೋ ಕುತೂಹಲ ನಿಮಗೂ ಇದ್ದರೆ ನೀವೂ ಇಂಟರೆಸ್ಟಿಂಗ್ ವಿಷಯ ಕೇಳಲೇಬೇಕು.
ಸಾಕು ಪ್ರಾಣಿ (pets) ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ!! ನಾಯಿ ( Dog), ಬೆಕ್ಕು ( Cat) ಪ್ರೀತಿಯಿಂದ ಮನೆ ಸದಸ್ಯನ ಹಾಗೆ ನೋಡಿಕೊಳ್ಳುವ ಹವ್ಯಾಸ ಹೆಚ್ಚಿನವರಿಗೆ ಇದೆ. ಒಂದು ವೇಳೆ, ನೀವು ಪ್ರೀತಿಯಿಂದ ನಾಯಿ ಎಂದು ಸಾಕಿದ ಪ್ರಾಣಿ (pets) ಬೇರಾವುದೋ ಪ್ರಾಣಿಯಾಗಿದ್ದರೆ?? ಹೇಗಿರಬಹುದು ನಿಮ್ಮ ಪರಿಸ್ಥಿತಿ? ಅರೇ, ಇದೇನಿದು? ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮಗೆ ಕಾಡಬಹುದು.ನಿಮ್ಮ ಗೊಂದಲವನ್ನೂ ನಾವು ಬಗೆ ಹರಿಸ್ತೀವಿ. ನಿಮಗೆ ಕೇಳಿದಾಗ ಅಚ್ಚರಿ ಎಂದೆನಿಸಿದರೂ ಈ ರೀತಿಯ ವಿಚಿತ್ರ ಅನುಭವವಾದ ಪ್ರಕರಣ ಬೆಳಕಿಗೆ ಬಂದಿದೆ.
ಹೌದು!! ನ್ಯೂಯಾರ್ಕ್ (New York) ಪೋಸ್ಟ್ ನಲ್ಲಿ ಪ್ರಕಟವಾದ ವರದಿಯ ಅನುಸಾರ, ಚೀನಾ (China)ದಲ್ಲಿ ಈ ರೀತಿಯ ಘಟನೆ ಮುನ್ನಲೆಗೆ ಬಂದಿದ್ದು, ಇಲ್ಲಿನ ಯುನ್ನಾನ್ (Yunnan) ಪ್ರಾಂತ್ಯದ ಹಳ್ಳಿಯೊಂದರಲ್ಲಿ ವಾಸಿಸುವ ಸು ಯುನ್ ಮನೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಸು ಯುನ್ ಕುಟುಂಬದವರು 2016 ರ ರಜೆಯ ದಿನಗಳಲ್ಲಿ ನಾಯಿ (Dog) ಯೊಂದನ್ನು ಕೊಂಡುಕೊಂಡಿದ್ದಾರೆ. ನಾಯಿ ನೋಡಲು ಟಿಬೆಟಿಯನ್ ಮ್ಯಾಸ್ಟಿಫ್ ನಾಯಿ (Tibetan Mastiff Dog) ರೀತಿ ಕಂಡುಬಂದ ಹಿನ್ನೆಲೆ ಇದೇ ಜಾತಿಗೆ ಸೇರಿದ್ದು ಎಂದೇ ಭಾವಿಸಿದ್ದರಂತೆ. ಅಷ್ಟೆ ಅಲ್ಲದೇ, ಕಳೆದೆರಡು ವರ್ಷಗಳಿಂದ ಪ್ರೀತಿಯಿಂದ ನಾಯಿಯೆಂದು ಸಾಕುತ್ತಿದ್ದರು. ಆದರೆ, ನಾವು ಸಾಕಿದ ಪ್ರಾಣಿ ನಾಯಿಯೇ ಅಲ್ಲ ಎಂಬ ಸತ್ಯ ತಿಳಿದಾಗ ಮನೆಯವರೆಲ್ಲ ಗಾಬರಿಗೊಂಡಿದ್ದು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ. .
ವರ್ಷಗಳು ಉರುಳಿದಂತೆ ನಾಯಿಯಲ್ಲಿ ಬೆಳವಣಿಗೆಯಾಗಿ ಅಹಾರ ಸೇವನೆ ಅದರ ನಡೆ ಕಂಡು ಮನೆಯವರಿಗೆ ಗಾಬರಿಯಾಗಿದ್ದರು. ನಾಯಿಯ ತೂಕ, ಆಹಾರ ಸೇವನೆಯ ಕ್ರಮ , ಬೆಳವಣಿಗೆಯಾದಾಗ ನಾಯಿ ಎಂದುಕೊಂಡಿದ್ದ ಪ್ರಾಣಿಯ ದೇಹ ಸಿರಿ ಕರಡಿಗೆ ಹೋಲಿಕೆಯಾಗುತ್ತಿತ್ತು. ಸು ಯುನ್ ಮತ್ತು ಸು ಯುನ್ ಅವರ ಮನೆಯವರಿಗೆ ನಾಯಿ ಆಹಾರ ಸೇವಿಸುವುದನ್ನು ಕಂಡು ಶಾಕ್ ಆಗಿತ್ತು. ಯಾಕೆ ಗೊತ್ತಾ? ಉಳಿದ ನಾಯಿಗಳಂತೆ ಈ ನಾಯಿಗೆ ಒಂದೋ ಎರಡೋ ಬ್ರೆಡ್ ಸಾಕಾಗುತ್ತಿರಲಿಲ್ಲ. ದಿನನಿತ್ಯ ಒಂದು ಪೆಟ್ಟಿಗೆಯಲ್ಲಿ ಹಣ್ಣುಗಳು ಜೊತೆಗೆ ಎರಡು ಬಕೆಟ್ ನೂಡಲ್ಸ್ ಕೂಡ ಬೇಕಾಗಿತ್ತಂತೆ.
ಇಷ್ಟೇ ಆಗಿದ್ದರೆ ಪರವಾಗಿಲ್ಲ ಅನ್ನಬಹುದೇನೋ! ಆದ್ರೆ, ನಾಲ್ಕು ಕಾಲಿನ ಬದಲು 2 ಕಾಲಿನಲ್ಲಿ ನಡೆಯಲು ಶುರು ಮಾಡಿದನ್ನು ಕಂಡ ಮೇಲಂತೂ ಅನುಮಾನ ಹೆಚ್ಚಾಗಿದೆ. ಮನೆಯವರಿಗೆ ಇದು ನಾಯಿ ಹೌದೋ ಅಲ್ಲವೋ ಎಂಬ ಪ್ರಶ್ನೆ ಕಾಡಿದ್ದು, ಇದಕ್ಕೆ ಇಂಬು ನೀಡುವಂತೆ, ಇವರು ನಾಯಿ ಎಂದುಕೊಂಡಿದ್ದ ಪ್ರಾಣಿಯ 250 ಪೌಂಡ್ ಎಂದರೆ ಸರಿ ಸುಮಾರು 114 ಕೆಜಿ ತೂಕ ಹೊಂದಿತ್ತು ಎನ್ನಲಾಗಿದೆ. ಹೀಗಾಗಿ, ಸರಿಯಾಗಿ ಪರೀಕ್ಷೆ ನಡೆಸಿದ ನಂತರ ಸು ಯುನ್ ಕುಟುಂಬಕ್ಕೆ ಇದು ಟಿಬೆಟಿಯನ್ ಮ್ಯಾಸ್ಟಿಫ್ ನಾಯಿಯಲ್ಲ ಬದಲಿಗೆ ಏಷ್ಯಾದ ಕಪ್ಪು ಕರಡಿ (Black Bear) ಎಂಬ ಸತ್ಯ ಬಯಲಾಗಿದೆ.
ಸಾಮಾನ್ಯವಾಗಿ ಟಿಬೆಟಿಯನ್ ಮ್ಯಾಸ್ಟಿಫ್ ಏಷ್ಯನ್ ನಾಯಿ ಅಂದರೆ ಟಿಬೆಟಿಯನ್ ಮ್ಯಾಸ್ಟಿಫ್‌ಗಳು ಏಷ್ಯನ್ ಕಪ್ಪು ಕರಡಿಯಂತೆಯೇ ಕಪ್ಪು-ಕಂದು ಬಣ್ಣವನ್ನು ಒಳಗೊಂಡಿರುತ್ತವೆ. ಇದರ ತೂಕವೂ 150 ಪೌಂಡ್‌ಗಳವರೆಗೆ ಎಂದರೆ ಸರಿ ಸುಮಾರು 69 ಕೆಜಿ ಇರುತ್ತದಂತೆ. ಇದು ನಾಯಿಯಲ್ಲ ಎಂಬ ವಿಚಾರ ತಿಳಿದ ನಂತರ, ಸುಯುನ್ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿದ್ದಾಳೆ. ವನ್ಯ ಜೀವಿಗಳನ್ನು ಸಾಕುವುದು ಕಾನೂನು ಬಾಹಿರ ಚಟುವಟಿಕೆ ಎಂದು ಸುಯುನ್ ತಿಳಿದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಗಂಡು ಏಷ್ಯಾಟಿಕ್ ಕರಡಿಯನ್ನು ಹಿಮಾಲಯ ಕರಡಿ ಎಂದೂ ಕರೆಯುತ್ತಾರೆ. ಇದು 400 ಪೌಂಡ್ ವರೆಗೆ ತೂಕ ಹೊಂದಿರುತ್ತದೆ.
ಅಧಿಕಾರಿಗಳು ಇದನ್ನು ಏಷ್ಯಾಟಿಕ್ ಕಪ್ಪು ಕರಡಿ ಎಂದು ಗುರುತಿಸಿದ್ದು, ನ್ಯೂಯಾರ್ಕ್ ಪೋಸ್ಟ್ ಅನುಸಾರ, ಕರಡಿ 400 ಪೌಂಡ್‌ಗಳಿಗಿಂತ ಹೆಚ್ಚು ತೂಕ ಹೊಂದಿತ್ತು. ಸರಿ ಸುಮಾರು 182 ಕೆಜಿಗಿಂತ ಹೆಚ್ಚು ತೂಕವನ್ನು ಒಳಗೊಂಡಿದ್ದು ಅಲ್ಲದೇ ಒಂದು ಮೀಟರ್ ಉದ್ದವಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.ಇಲ್ಲಿಯವರೆಗೆ ನಾಯಿ ಎಂದು ಪ್ರೀತಿಯಿಂದ ಸಾಕುತ್ತಿದ್ದ ಮನೆ ಮಂದಿ ಕರಡಿ ಎಂದು ತಿಳಿದು ಅಚ್ಚರಿಯ ಜೊತೆಗೆ ಬೆದರಿದ್ದು, ಕರಡಿಯನ್ನು ವನ್ಯಜೀವಿಗಳ ಆಶ್ರಯಕ್ಕೆ ಕರೆದೊಯ್ಯುವ ಮೊದಲು ಮಲಗಿಸಿ ಕರೆತರಲಾಗಿದೆ. ಕರಡಿಯನ್ನು ಯುನ್ನಾನ್ ವನ್ಯಜೀವಿ ಪಾರುಗಾಣಿಕಾ ಕೇಂದ್ರಕ್ಕೆ ಕರೆತಂದು, ವೀಕ್ಷಣೆ ನಡೆಸಲಾಗುತ್ತಿದೆಯಂತೆ. ಈ ಸುದ್ದಿ ಸದ್ಯ ಎಲ್ಲೆಡೆ ವೈರಲ್( Viral news) ಆಗಿ ಸಂಚಲನ ಮೂಡಿಸಿದೆ.