Cloud 3 Cooling Fan : ಎಸಿ ಕೆಟ್ಟಿದೆ ಎಂಬ ಟೆನ್ಶನ್‌ ಬೇಡ, ಇಲ್ಲಿದೆ ಕ್ಲೌಡ್‌ ಕೂಲಿಂಗ್‌ ಫ್ಯಾನ್‌!

Cloud 3 Cooling Fan : ಬೇಸಿಗೆಯಲ್ಲಿ ಎಸಿ ಉಪಕರಣ ಮಾತ್ರ ತಂಪಾದ ವಾತಾವರಣ ನೀಡುತ್ತದೆ ಎಂದು ನೀವು ಭಾವಿಸಿದ್ದಲ್ಲಿ ಅದು ತಪ್ಪು ಕಲ್ಪನೆ. ಸದ್ಯ ಇಲ್ಲಿ ತಂಪಾದ ಗಾಳಿಯನ್ನು ನೀಡುವ, ಜೊತೆಗೆ ಜಾಗವನ್ನು ತಂಪಾಗಿಸಲು, ವರ್ಷಪೂರ್ತಿ ಬಿಸಿಯಾದ ತಾಪಮಾನ ಎದುರಿಸುತ್ತಿರುವ ಭಾರತೀಯ ಕುಟುಂಬಗಳಿಗೆ ಹೊಸ ಟೆಕ್ನಾಲಜಿ ಫ್ಯಾನ್ (technology fan )ಅನ್ನು ಪರಿಚಯಿಸಲಾಗಿದೆ.

 

ಹೌದು ಟೆಕ್ನಾಲಜಿ ಫ್ಯಾನ್ ಇದ್ದರೆ ಏರ್​ಕೂಲರ್​ನ ಅಗತ್ಯನೇ ಇರಲ್ಲ. ಇದೀಗ ಇಂತಹದೇ ಫ್ಯಾನ್​ ಒಂದು ಮಾರುಕಟ್ಟೆಯಲ್ಲಿ ತನ್ನ ಹವಾ ಎಬ್ಬಿಸಿದೆ. ಸದ್ಯ ಓರಿಯಂಟ್ ಎಲೆಕ್ಟ್ರಿಕ್ ಕಂಪನಿಯು ಕ್ಲೌಡ್ 3 ಕೂಲಿಂಗ್ ಫ್ಯಾನ್ ಅನ್ನು ಬಿಡುಗಡೆ ಮಾಡಿದೆ.

ಕ್ಲೌಡ್ 3 ಕೂಲಿಂಗ್ ಫ್ಯಾನ್ (cloud 3 cooling fan) ವಿಶೇಷತೆ ಇಂತಿವೆ :

ಓರಿಯಂಟ್ ಎಲೆಕ್ಟ್ರಿಕ್ ಕಂಪೆನಿಯ ಮಾಹಿತಿ ಪ್ರಕಾರ, ಇದು ಮೂರು ಹಂತದ ಕೂಲಿಂಗ್ (cooling ) ಹೊಂದಿದೆ. ಆದ್ದರಿಂದ ನಮ್ಮ ಅವಶ್ಯಕತೆಗೆ ಅನುಗುಣವಾಗಿ ನಮಗೆ ಎಷ್ಟು ಕೂಲಿಂಗ್ ಬೇಕು ಎಂದು ನಾವು ಈ ಟೆಕ್ನಾಲಜಿ ಮೂಲಕ ನಿರ್ಧರಿಸಬಹುದು. ಈ ಫ್ಯಾನ್‌ನ ಬ್ಲೇಡ್‌ಗಳು ಕೋಣೆಯಲ್ಲಿ (room ) ತಂಪಾದ ಗಾಳಿಯನ್ನು ಪ್ರಸಾರ ಮಾಡುತ್ತದೆ.

ಮುಖ್ಯವಾಗಿ ಸುಗಂಧ ವಿತರಕವನ್ನು ಸಹ ಹೊಂದಿದೆ. ಆದ್ದರಿಂದ ಡಿಸ್ಪೆನ್ಸರ್‌ನಲ್ಲಿರುವ ಸುಗಂಧ ದ್ರವ್ಯವನ್ನು ನೀರಿನೊಂದಿಗೆ ಬೆರೆಸಬಹುದು. ಅದಲ್ಲದೆ ಈ ಫ್ಯಾನ್‌ನಲ್ಲಿ ಬ್ರೀಜ್ ಮೋಡ್ ಅನ್ನು ಸಹ ನೀಡಲಾಗಿದೆ. ಇದು ಅಲ್ಗಾರಿದಮ್‌ಗಳ ಸಹಾಯದಿಂದ ಫ್ಯಾನ್ ವೇಗವನ್ನು ಬದಲಾಯಿಸುತ್ತದೆ.

ಕ್ಲೌಡ್​​ 3 ಫ್ಯಾನಿನ ತೂಕ ಕೇವಲ 8.7 ಕೆ.ಜಿ. ರಿಮೋಟ್ ಮೂಲಕ ಇದನ್ನು ಆನ್ ಮತ್ತು ಆಫ್ ಸಹ ಮಾಡಬಹುದು. ಸ್ಪೀಡ್, ಕೂಲ್, ಸ್ವಿಂಗ್, ಬ್ರೀಜ್, ಟೈಮರ್ ಇವೆಲ್ಲ ಫೀಚರ್ಸ್​​ಗಳನ್ನು ಸಹ ರಿಮೋಟ್‌ನೊಂದಿಗೆ ಸೆಟ್​ ಮಾಡಬಹುದು.

ಈ ಫ್ಯಾನ್ ನ್ನು ಅಮೆಜಾನ್ ಇ-ಕಾಮರ್ಸ್ ಸೈಟ್‌ನಿಂದ ಕೇವಲ 11,999 ರೂಪಾಯಿಯ ಆರಂಭಿಕ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಆದರೆ ಈ ಫ್ಯಾನಿನ MRP ರೂ.15,999 ಆಗಿದೆ. ಬಳಕೆದಾರರು ಫ್ಯಾನ್ ಜೊತೆಗೆ 2-ವರ್ಷದ ವಾರಂಟಿಯನ್ನು ಪಡೆಯಬಹುದು. ಸದ್ಯ ಕ್ಲೌಡ್ 3 ಕೂಲಿಂಗ್ ಫ್ಯಾನ್ ಮಾದರಿಯು ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದ್ದು, ಗ್ರಾಹಕರು ಈ ಫ್ಯಾನ್ ಅನ್ನು ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.

ಈ ಫ್ಯಾನ್ ಕೂಲರ್ ನಂತಹ 4.5 ಲೀಟರ್ ಟ್ಯಾಂಕ್ ಹೊಂದಿದೆ. ನೀವು ಅದನ್ನು ನೀರಿನಿಂದ ತುಂಬಿಸಬೇಕು. ಆ ನೀರು ಸುಮಾರು 8 ಗಂಟೆಗಳ ಕಾಲ ಇರುತ್ತದೆ. ಅದೇ ಈ ಫ್ಯಾನ್​​ನ ವಿಶೇಷತೆ. ಒಮ್ಮೆ ನೀರು ತುಂಬಿಕೊಂಡು ಮಲಗಿದರೆ ಮತ್ತೆ ಏಳುವವರೆಗೆ ನೀರು ಹಾಕುವ ಅಗತ್ಯವಿಲ್ಲ. ಆದ್ದರಿಂದ ಚೆನ್ನಾಗಿ ನಿದ್ದೆ ಮಾಡಬಹುದು. ಇದನ್ನು ಕಚೇರಿಗಳಲ್ಲಿ ಸಹ ಬಳಸಬಹುದಾಗಿದೆ.

ಕಂಪೆನಿಯ ಪ್ರಕಾರ, ಈ ಫ್ಯಾನ್ ಕೋಣೆಯ ಉಷ್ಣಾಂಶವನ್ನು 12 ಡಿಗ್ರಿಗಳಷ್ಟು ಕಡಿಮೆ ಮಾಡುತ್ತದೆ. ಈ ಉದ್ದೇಶಕ್ಕಾಗಿ ಈ ಫ್ಯಾನ್ ಕ್ಲೌಡ್‌ಚಿಲ್ ತಂತ್ರಜ್ಞಾನವನ್ನು ಹೊಂದಿದೆ ಎಂದು ಹೇಳಿದೆ. ಇನ್ನು ಈ ಫ್ಯಾನ್ ಕಡಿಮೆ ಕರೆಂಟ್ ಬಳಸುತ್ತದೆ. ಅದಲ್ಲದೆ ಇದು ಕೂಲರ್ ಅಥವಾ ಎಸಿಗಿಂತ ಕಡಿಮೆ ವಿದ್ಯುತ್ ಅನ್ನು ಬಳಸುತ್ತದೆ. 8 ಗಂಟೆಗಳ ಕಾಲ ಫ್ಯಾನ್ ಬಳಸಿದರೆ 1 ಯೂನಿಟ್​ನಷ್ಟು ಕರೆಂಟ್ ಖರ್ಚಾಗುತ್ತದೆ ಎಂದು ಕಂಪೆನಿ ಹೇಳಿದೆ.

ಒಟ್ಟಿನಲ್ಲಿ ಕ್ಲೌಡ್ 3 ಕೂಲಿಂಗ್ ಫ್ಯಾನ್ ನಿಮಗೆ ತಂಪಾದ ವಾತಾವರಣ ನೀಡುವುದರ ಜೊತೆಗೆ ವಿದ್ಯುತ್ ಮತ್ತು ಹಣದ ಉಳಿತಾಯವನ್ನು (savings ) ಮಾಡುತ್ತದೆ.

Leave A Reply

Your email address will not be published.