BSF Recruitment 2023 : ಬಿಎಸ್‌ಎಫ್‌ನಲ್ಲಿ 1284 ಉದ್ಯೋಗವಕಾಶ! ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ, ವೇತನ ಮಾಸಿಕ ರೂ.69ಸಾವಿರ

BSF Recruitment 2023 :ಅದೆಷ್ಟೋ ವಿದ್ಯಾವಂತರು ಉದ್ಯೋಗವಿಲ್ಲದೆ ಮನೆಯಲ್ಲೇ ಕೈಚೆಲ್ಲಿ ಕೂತಿದ್ದಾರೆ. ಇನ್ನೂ ಕೆಲವರು ತಮ್ಮ ಕನಸಿನ ಉದ್ಯೋಗ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಅದರಲ್ಲಿ, ಲಕ್ಷಾಂತರ ಜನರು ಗಡಿ ಭದ್ರತಾ ಪಡೆ (BSF)ಯಂತಹ ಉದ್ಯೋಗಕ್ಕೆ ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ವಿವಿಧ ರೀತಿಯಲ್ಲಿ ದೇಶದ ಭದ್ರತಾ ಪಡೆಗೆ ಸೇರಲು ತಯಾರಿ ನಡೆಸುತ್ತಾರೆ. ಕಠಿಣ ಶ್ರಮದ ಬಳಿಕ ಇಚ್ಛಿಸಿದ ಕೆಲಸ ಸಿಗುತ್ತದೆ. ಇನ್ನೂ ಕೆಲವರಿಗೆ ಸಿಕ್ಕಿರುವುದಿಲ್ಲ. ಅಂತಹವರಿಗೆ ಅದ್ಭುತ ಅವಕಾಶ ಇಲ್ಲಿದೆ.

 

ಭದ್ರತಾ ಪಡೆಗೆ ಸೇರಬೇಕೆಂಬ ಕನಸು ಹೊತ್ತವರಿಗೆ ಸಿಹಿ ಸುದ್ದಿ ಇಲ್ಲಿದೆ. ನಿರುದ್ಯೋಗಿಗಳಿಗೂ ಇದು ಉತ್ತಮ ಅವಕಾಶವಾಗಿದೆ. ಇದೀಗ ಗಡಿ ಭದ್ರತಾ ಪಡೆ (BSF) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (BSF Recruitment 2023). ಒಟ್ಟು 1284 ಕಾನ್ಸ್‌ಟೇಬಲ್ ಟ್ರೇಡ್ಸ್‌ಮ್ಯಾನ್ ಹುದ್ದೆ ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್(online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು BSFನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ಹುದ್ದೆಯ ಬಗ್ಗೆ ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.

ಹುದ್ದೆಯ ವಿವರ:
ಹುದ್ದೆಯ ಹೆಸರು: ಕಾನ್ಸ್‌ಟೇಬಲ್ (ಟ್ರೇಡ್ಸ್‌ಮ್ಯಾನ್)
ಹುದ್ದೆಗಳ ಸಂಖ್ಯೆ : ಒಟ್ಟು ಹುದ್ದೆಗಳ ಸಂಖ್ಯೆ- 1284
ಪುರುಷ ಅಭ್ಯರ್ಥಿಗಳು – 1220
ಮಹಿಳಾ ಅಭ್ಯರ್ಥಿಗಳು – 64

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 27/3/ 2023

ಅರ್ಹತಾ ಮಾನದಂಡ :
• ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
• ನೇಮಕಾತಿ ಮಂಡಳಿ ನಡೆಸುವ ಸಂಬಂಧಿತ ವ್ಯಾಪಾರದಲ್ಲಿ ಟ್ರೇಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
• ಕಾನ್‌ಸ್ಟೆಬಲ್ (ಅಡುಗೆ), ಕಾನ್ಸ್‌ಟೇಬಲ್ (ವಾಟರ್ ಕ್ಯಾರಿಯರ್) ಮತ್ತು ಕಾನ್ಸ್‌ಟೇಬಲ್ (ವೇಟರ್) ಟ್ರೇಡ್‌ಗಳಿಗೆ: ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
• ಆಹಾರದಲ್ಲಿ ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟಿನ ಹಂತ-1 ಕೋರ್ಸ್‌ನ ಪ್ರಮಾಣಪತ್ರ ಇರಬೇಕು.

ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. CBT (ಕಂಪ್ಯೂಟರ್ ಆಧಾರಿತ ಪರೀಕ್ಷೆ) ಅಥವಾ OMR ಆಧಾರಿತ ವಸ್ತುನಿಷ್ಠ ಮಾದರಿಯ ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುವ 100 ಅಂಕಗಳ ಪರೀಕ್ಷೆ ಇರಲಿದೆ. ಲಿಖಿತ ಪರೀಕ್ಷೆಯು ಇಂಗ್ಲಿಷ್ ಮತ್ತು ಹಿಂದಿಯಲ್ಲಿರುತ್ತದೆ.

ವಯೋಮಿತಿ: 18 ರಿಂದ 25 ವರ್ಷಗಳ ನಡುವೆ ಇರಬೇಕು.
ವೇತನ : ಪೇ ಮ್ಯಾಟ್ರಿಕ್ಸ್ ಲೆವೆಲ್-3 ಅಡಿಯಲ್ಲಿ 21,700 ದಿಂದ 69,100 ರೂ. ವೇತನ ಇರಲಿದೆ.

ಹೆಚ್ಚಿನ ಮಾಹಿತಿಗಾಗಿ BSFನ ಅಧಿಕೃತ ವೆಬ್ ಸೈಟ್ rectt.bsf.gov.in ಗೆ ಭೇಟಿ ನೀಡಿ.

Leave A Reply

Your email address will not be published.