ಶಾಪಿಂಗ್‌ಗೆ ಹಣ ನೀಡದ ಗಂಡ, ರೆಬೆಲ್‌ ಆದ ಪತ್ನಿ, ಪ್ರಿಯಕರನನ್ನು ಕರೆಸಿ ಹಲ್ಲೆ ಮಾಡಿಸಿದ ಹೆಂಡತಿ!!!

Shopping :ಶಾಪಿಂಗ್ ಹುಚ್ಚು ಕೆಲವರಿಗೆ ಎಷ್ಟರ ಮಟ್ಟಿಗೆ ಇರುತ್ತದೆ ಅನ್ನಲು ಊಹಿಸಲು ಸಾಧ್ಯವಿಲ್ಲ. ಅದರಲ್ಲೂ ಹೆಣ್ಣು ಮಕ್ಕಳು ಶಾಪಿಂಗ್ ಮಾಡುವುದರಲ್ಲಿ ಎತ್ತಿದ ಕೈ. ಗಂಟೆ ಗಟ್ಟಲೆ, ದಿನ ಗಟ್ಟಲೆ ಬೇಕಾದರೂ ಶಾಪಿಂಗ್ ಮಾಡಲು ಸೈ ಅನ್ನುತ್ತಾರೆ. ಹಾಗೆಯೇ ಶಾಪಿಂಗ್ (shopping )ಹುಚ್ಚಿನಲ್ಲಿ ಇಲ್ಲೊಬ್ಬಳು ತನ್ನ ಗಂಡ ಶಾಪಿಂಗ್ ಮಾಡಲು ಹಣ ನೀಡಿಲ್ಲ ಎಂದು ಏನು ಮಾಡಿದ್ದಾಳೆಂದು ನೀವೇ ನೋಡಿ.

ಗಂಡ (Husband) ಶಾಪಿಂಗ್‌ಗೆ ದುಡ್ಡು ಕೊಟ್ಟಿಲ್ಲಾಂದ್ರೆ ಹೆಂಡತಿಗೆ (Wife) ಬೇಜಾರು ಆಗೋದು ಸಹಜ. ಅದರ ಕೋಪದಲ್ಲಿ ಎರಡು ದಿವಸ ಕೋಪದಲ್ಲಿ ಮಾತನಾಡದೇ ಇರಬಹುದು. ಆದರೆ ಇಲ್ಲೊಬ್ಬಳು ಪತಿ ಶಾಪಿಂಗ್​ಗೆ ಹಣ ಕೊಟ್ಟಿಲ್ಲ ಅಂತ ಪತ್ನಿಯೊಬ್ಬಳು ತನ್ನ ಪ್ರಿಯಕರನನ್ನು (Lover) ಕರೆಸಿ ಗಂಡನಿಗೇ ಹೊಡೆಸಿದ ಪ್ರಕರಣ ಜಬಲ್‌ಪುರದಲ್ಲಿ ನಡೆದಿದೆ.

ವಿಜಯನಗರ ಪ್ರದೇಶದಲ್ಲಿ ವಾಸಿಸುತ್ತಿರುವ ದಂಪತಿಯ (Couple) ಮಧ್ಯ ಜಗಳ ನಡೆದಿದ್ದು, ಕಾಜಲ್ ಎಂಬಾಕೆ ತನ್ನ ಗಂಡನಾದ ಶುಭಂ ಗಿರನಿಯನ್ ಶಾಪಿಂಗ್​ಗೆ ಹಣ ಕೊಟ್ಟಿಲ್ಲ ಎಂದು ಪ್ರಿಯಕರ ರಿಂಕು ಝರಿಯಾ ನನ್ನು ಕರೆಸಿ ಹೊಡೆಸಿದ ಪರಿಣಾಮ ಗಾಯಗೊಂಡಿರುವ ಪತಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಳಿಕ ಗಾಯಾಳು ಶುಭಂ ಗಿರನಿಯನ್ ಪೊಲೀಸರಿಗೆ ದೂರು (Complaint) ನೀಡಿದ್ದು, ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಶುಭಂ ಗಿರನಿಯನ್ ಪೊಲೀಸರಿಗೆ ದೂರು ನೀಡಿರುವ ಮಾಹಿತಿ ಪ್ರಕಾರ, ರಿಂಕು ಎಂಬಾತನ ಜತೆ ನನ್ನ ಪತ್ನಿ ಕಾಜಲ್ ಅಕ್ರಮವಾಗಿ ವಾಸಿಸುತ್ತಿದ್ದಾಳೆ. ನಾನು ಇಂದು ಕೆಲಸದಿಂದ ಮನೆಗೆ ಬರುವಾಗ ನನ್ನನ್ನು ಅಡ್ಡಗಟ್ಟಿದ್ದ ಪತ್ನಿ, ಶಾಪಿಂಗ್​ಗಾಗಿ 5 ಸಾವಿರ ರೂ. ಕೇಳಿದಳು. ಹಣ ಕೊಡಲು ನಾನು ನಿರಾಕರಿಸಿದಾಗ ಆಕೆ ತನ್ನ ಪ್ರಿಯಕರ ರಿಂಕುವನ್ನು ಕರೆಸಿಕೊಂಡು ನನಗೆ ಹೊಡೆಸಿದ್ದಾಳೆ. ಅಲ್ಲದೆ ಆತ ತನ್ನ ಗೆಳೆಯರೊಂದಿಗೆ ಬಂದಿದ್ದು, ಬೇಸ್​ಬಾಲ್ ಬ್ಯಾಟ್​ ಮತ್ತು ಸ್ಟಿಕ್​ಗಳಿಂದ ಹಲ್ಲೆ ನಡೆಸಿದ್ದಾನೆ. ಪತ್ನಿಯೂ ನನಗೆ ಹೊಡೆದಿದ್ದಾಳೆ ಎಂದು ತಿಳಿಸಿದ್ದಾನೆ.

ಒಟ್ಟಿನಲ್ಲಿ ಈಕೆಯ ಶಾಪಿಂಗ್ ಗೀಳಿನಲ್ಲಿ ಅಮಾಯಕ ಗಂಡ ಎಲ್ಲವನ್ನು ಸಹಿಸುವಷ್ಟು ಸಹಿಸಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲು ಏರಿರುವುದು ಆಶ್ಚರ್ಯ ವೇ ಸರಿ.

Leave A Reply

Your email address will not be published.