ಕೇವಲ 48 ಗಂಟೆಯೊಳಗೆ ಹೆದ್ದಾರಿ ಟನೆಲ್‌ ಕಾಮಗಾರಿ ಫಿನಿಶ್‌- ಆನಂದ್‌ ಮಹೀಂದ್ರ ಪೋಸ್ಟ್‌ ಸಖತ್‌ ವೈರಲ್‌

Anand Mahindra: ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ(Anand Mahindra) ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ. ಹೌದು, ಈ ಹಿಂದೆ ತಮ್ಮ ಟ್ವಿಟರ್(Twitter) ಖಾತೆಯಲ್ಲಿ, ಟ್ರಾಫಿಕ್ ಸಿಗ್ನಲ್(traffic signal) ಗಳಿಲ್ಲದೆ ಸಂಚಾರವನ್ನು ಸಂಪೂರ್ಣವಾಗಿ ನಿರ್ವಹಿಸುವ ಅದ್ಭುತ ರಸ್ತೆ ವಿನ್ಯಾಸದ ವೀಡಿಯೋವೊಂದನ್ನು ಹಂಚಿಕೊಂಡಿದ್ದರು. ಈ ಪೋಸ್ಟ್ ಸಖತ್ ವೈರಲ್ ಆಗಿತ್ತು. ಅಂತೆಯೇ ಇದೀಗ ಆನಂದ್ ಮಹೀಂದ್ರಾ ಅವರು ಮತ್ತೊಂದು ಪೋಸ್ಟ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್(viral) ಆಗಿದೆ.

ಆನಂದ್ ಮಹೀಂದ್ರಾ ಪೋಸ್ಟ್ ಮಾಡಿರುವ ವಿಡಿಯೋ ಭಾರತ(india) ದೇಶದ್ದಲ್ಲ, ಬದಲಾಗಿ ಅದು ಯುರೋಪ್ ದ್ದಾಗಿದೆ. ವಿಡಿಯೋದಲ್ಲಿ, ನೆದರ್‌ಲ್ಯಾಂಡ್ಸ್‌ನಲ್ಲಿ 230 ಅಡಿ ಸುರಂಗವನ್ನು ಜೋಡಿಸುವ ಕೆಲಸವನ್ನು ಕೇವಲ ವಾರಾಂತ್ಯದ 48 ಗಂಟೆಯಲ್ಲಿ ಮಾಡಿ ಮುಗಿಸಲಾಗಿದ್ದು, ಆ ರಸ್ತೆಯನ್ನು ಮೊದಲಿನ ಹಾಗೇ ಸಂಚಾರಕ್ಕೆ ಮುಕ್ತ ಮಾಡಿದೆ.

ವಿಡಿಯೋದ ಜೊತೆಗೆ ಮಹೀಂದ್ರಾ ಅವರು ಕೆಲವು ಸಾಲುಗಳನ್ನೂ ಬರೆದುಕೊಂಡಿದ್ದಾರೆ. ‘ಡಚ್ಚರು ಒಂದೇ ವಾರಾಂತ್ಯದಲ್ಲಿ ಹೆದ್ದಾರಿಯ ಕೆಳಗೆ ಸುರಂಗವನ್ನು ನಿರ್ಮಿಸಿದ್ದಾರೆ. ಇದು ಕೆಲಸಗಾರರ ಶ್ರಮದ ಉಳಿತಾಯದ ಬಗ್ಗೆಯಲ್ಲ’ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ವಿಭಿನ್ನ ಕಾಮೆಂಟ್ ಗಳು ಹರಿದುಬಂದಿವೆ.

ಈ ಟ್ವಿಟ್ ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ‘ಭಾರತದಲ್ಲಿ ಅಪರೂಪವಾಗಿ ಸಾಧ್ಯ’ ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು, ‘ಇದನ್ನು ನಾವು ವರ್ಷಗಳಲ್ಲಿ ಮಾಡುತ್ತೇವೆ. ಇದು ಮುಗಿಯುವಾಗ ಈ ಕಾಮಗಾರಿಗೆ ಸಹಕರಿಸುವ ಪ್ರತಿಯೊಬ್ಬರು ಶ್ರೀಮಂತರಾಗುತ್ತಾರೆ’ ಅಂದ್ರೆ ಈ ಕೆಲಸ ಮುಗಿಯೋದೇ ಇಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಒಟ್ಟಾರೆ ಈ ಟ್ವಿಟ್ ಸಖತ್ ವೈರಲ್ ಆಗಿದೆ.

Leave A Reply

Your email address will not be published.