Ceiling Fan: ಫ್ಯಾನ್​​ಗೆ ಎಷ್ಟು ರೆಕ್ಕೆ ಇದ್ರೆ ಕರೆಂಟ್​ ಕಡಿಮೆ ಎಳೆಯುತ್ತೆ ಗೊತ್ತಾ? ಇಲ್ಲಿದೆ ಉತ್ತರ!

Ceiling fan :ಈಗಾಗಲೇ ಬಿಸಿಲಿನ ಪರಿಣಾಮ ನಮ್ಮೆಲ್ಲರ ಮೇಲೆ ಹಲವಾರು ರೀತಿಯಲ್ಲಿ ಬೀರುತ್ತಿದೆ. ಇನ್ನು ಬೇಸಿಗೆ ಕಾಲದ ವಾತಾವರಣದಲ್ಲಿ ಕಿಟಕಿ ತೆರೆದರೆ, ಶಾಖವೇ ಹೆಚ್ಚಾಗಿದೆ. ಬೇಸಿಗೆಯ ಆರಂಭದಲ್ಲೇ ಜನರು ಸೆಕೆ ಸೆಕೆ ಎಂದು ಕಂಗಾಲಾಗಿದ್ದಾರೆ. ದಿನದಿಂದ ದಿನಕ್ಕೆ ಬಿಸಿಲು ಮಾತ್ರ ಹೆಚ್ಚಾಗುತ್ತಲೇ ಇದೆ. ಸದ್ಯ 24ಗಂಟೆ ಯು ಫ್ಯಾನ್ ಆನ್ ಆಗಿರುತ್ತದೆ. ಅಲ್ಲದೇ ಬಿಸಿಲಿನ ಬೇಗೆಗೆ ಫ್ಯಾನ್(ceiling fan) ಆನ್ ಮಾಡಿದರೆ ಬಿಸಿ ಗಾಳಿ ಬೀಸುತ್ತಿದೆ. ಫ್ಯಾನ್ ಇಲ್ಲ ಅಂದರೆ ಸೆಕೆ ತಡೊಯೋಕೆ ಆಗಲ್ಲ. ಹಾಗಿದ್ದರೆ ಯಾವ ಫ್ಯಾನ್ ಬೆಸ್ಟ್ (best )ಅನ್ನೋದು ಇಲ್ಲಿ ಮಾಹಿತಿ ನೀಡಲಾಗಿದೆ.

ಸಾಮಾನ್ಯವಾಗಿ ಎಸಿ ಉಪಕರಣ ದುಬಾರಿ ಅನ್ನೋ ಕಾರಣಕ್ಕೆ ಭಾರತದಲ್ಲಿ (india )ಫ್ಯಾನ್‌ಗಳನ್ನು ಹೆಚ್ಚು ಬಳಸುತ್ತಾರೆ. ಅದರಲ್ಲಿಯೂ 3 ರೆಕ್ಕೆಯ ಫ್ಯಾನ್​ಗಳನ್ನು ಹೆಚ್ಚಾಗಿ ಬಳಸಳಾಗುತ್ತದೆ . ಆದರೆ ಎಷ್ಟು ರೆಕ್ಕೆಯ ಫ್ಯಾನ್​ ಇದ್ರೆ ಉತ್ತಮ ಎಂದು ನೀವು ತಿಳಿದುಕೊಳ್ಳಬೇಕು.

ಮುಖ್ಯವಾಗಿ ಒಂದು ರೆಕ್ಕೆಯ ಫ್ಯಾನ್​ ವಿರಳವಾಗಿದೆ. ಇದು ಸಾಮಾನ್ಯವಾಗಿ ಒಂದೇ ಸ್ಥಳಕ್ಕೆ ಗಾಳಿಯನ್ನು ನಿರ್ದೇಶಿಸುತ್ತವೆ. ಆದ್ದರಿಂದ ಅವುಗಳನ್ನು ಕೈಗಾರಿಕಾ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

ಇನ್ನು ಎರಡು-ರೆಕ್ಕೆಯ ಫ್ಯಾನ್​ಗಳನ್ನು ಮನೆ ಅಥವಾ ಕಚೇರಿಗಳಲ್ಲಿ ಬಳಸಲಾಗುತ್ತದೆ. ಇವುಗಳನ್ನು ಸಣ್ಣ ಕೋಣೆಗಳಿಗೆ ಮಾತ್ರ ಬಳಸಲಾಗುತ್ತೆ. ಇವು ಹೆಚ್ಚು ಗಾಳಿಯನ್ನು ನೀಡುವುದಿಲ್ಲ.

ವಿದ್ಯುತ್ ಬಳಕೆಯೂ ಕಡಿಮೆಯಾಗಿರುವ ಮೂರು-ರೆಕ್ಕೆಯ ಫ್ಯಾನ್​​ ಮನೆ ಬಳಕೆಗೆ ಸೂಕ್ತವಾಗಿರುತ್ತದೆ. ಇದು ಎಲ್ಲಾ ಕಡೆಗಳಲ್ಲಿ ಸಮವಾಗಿ ಗಾಳಿಯನ್ನು ನೀಡುತ್ತದೆ. ತುಂಬಾ ಚಿಕ್ಕದಲ್ಲದ ಕೋಣೆಗಳಿಗೆ ಈ ಫ್ಯಾನ್‌ಗಳು ಉತ್ತಮವಾಗಿವೆ.

ವಿದ್ಯುತ್ ಬಳಕೆಯೂ ಹೆಚ್ಚಿರುವ ನಾಲ್ಕು ರೆಕ್ಕೆಯ ಫ್ಯಾನ್ ಬಳಕೆ ಇತ್ತೀಚೆಗೆ ಭಾರತದಲ್ಲಿ ಬಳಕೆಗೆ ಬಂದಿದೆ . ದೊಡ್ಡ ಕೋಣೆಗಳಿಗೆ ಅಥವಾ ಸಭಾ ಕೊಠಡಿಗಳಿಗೆ ಇವುಗಳನ್ನು ಬಳಸಲಾಗುತ್ತೆ. ಇವು ಹೆಚ್ಚು ಗಾಳಿಯನ್ನು ನೀಡುತ್ತವೆ.

ಒಟ್ಟಿನಲ್ಲಿ ಸಣ್ಣ ಮೋಟಾರ್‌ಗಳು ಮತ್ತು ಕಡಿಮೆ RPM ಹೊಂದಿರುವ ಫ್ಯಾನ್​ ಕಡಿಮೆ ಕರೆಂಟ್ ಅನ್ನು ಬಳಸುತ್ತೆ. ಮುಖ್ಯವಾಗಿ ಕಡಿಮೆ ಕರೆಂಟ್ ಬಳಸುವ ಫ್ಯಾನ್ ಗಳನ್ನು ಖರೀದಿಸಿ. ಅಂದರೆ ಯಾವಾಗಲೂ ಅವಶ್ಯಕತೆಗೆ ಅನುಗುಣವಾಗಿ ಎಷ್ಟು ರೆಕ್ಕೆಗಳ ಫ್ಯಾನ್​ ಬಳಸಬೇಕು ಎಂಬುದನ್ನು ನಿರ್ಧರಿಸುವುದು ನಿಮ್ಮ ಆಯ್ಕೆ. ಅಲ್ಲದೆ ದೊಡ್ಡ ರೆಕ್ಕೆಗಳಿಗೆ ಹೆಚ್ಚು ವಿದ್ಯುತ್ ಮತ್ತು ಸಣ್ಣ ರೆಕ್ಕೆಗಳು ಕಡಿಮೆ ವೆಚ್ಚವಾಗುತ್ತವೆ. ಒಟ್ಟಿನಲ್ಲಿ ಫ್ಯಾನ್‌ನ ಮೋಟರ್ ಅನ್ನು ಅವಲಂಬಿಸಿ, ಎಷ್ಟು ವಿದ್ಯುತ್ ಬಳಸಲಾಗಿದೆ ಎಂಬುದನ್ನು ನಿರ್ಧರಿಸಲಾಗುತ್ತದೆ.

Leave A Reply

Your email address will not be published.