ಮಂಗಳೂರು : ಹಳಿ ದ್ವಿಗುಣ ಕಾಮಗಾರಿ ,ಹಲವು ರೈಲು ಸೇವೆಯಲ್ಲಿ ವ್ಯತ್ಯಯ
Double track work : ಮಂಗಳೂರು: ಪಡೀಲ್-ಜೋಕಟ್ಟೆ ನಡುವೆ ಹಳಿ ದ್ವಿಗುಣ ಕಾಮಗಾರಿ (Double track work) ಹಿನ್ನೆಲೆಯಲ್ಲಿ ಮಾ. 4ರಂದು ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿದು ಬಂದಿದೆ.
ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ನಡುವಿನ ನಂ.06489 ಕಾದಿರಿಸದ ಎಕ್ಸ್‌ಪ್ರೆಸ್ ವಿಶೇಷ ರೈಲು ಮತ್ತು ಸುಬ್ರಹ್ಮಣ್ಯ ರೋಡ್- ಮಂಗಳೂರು ಸೆಂಟ್ರಲ್ ನಡುವಿನ ನಂ.06488 ಕಾದಿರಿಸದ ಎಕ್ಸ್‌ಪ್ರೆಸ್ ವಿಶೇಷ ರೈಲು ರದ್ದುಗೊಂಡಿದೆ.
ಮಂಗಳೂರು ಸೆಂಟ್ರಲ್- ಕಬಕ ಪುತ್ತೂರು ನಂ.06487 ಕಾದಿರಿಸದ ಎಕ್ಸ್‌ಪ್ರೆಸ್ ವಿಶೇಷ ರೈಲು ಮತ್ತು ಕಬಕ ಪುತ್ತೂರು -ಮಂಗಳೂರು ಸೆಂಟ್ರಲ್ ನಂ. 06486 ಕಾದಿರಿಸದ ಎಕ್ಸ್ ಪ್ರಸ್ ವಿಶೇಷ ರೈಲು ಮಾ. 4ರಂದು ರದ್ದಾಗಿದೆ.
ಮಡಗಾಂವ್ ಜಂಕ್ಷನ್-ಮಂಗಳೂರು ಸೆಂಟ್ರಲ್ ನಡುವೆ ಸಂಚರಿಸುವ ನಂ.10107 ಮೆಮು ಎಕ್ಸ್‌ಪ್ರೆಸ್ ರೈಲು ತೋಕೂರು ಮತ್ತು ಮಂಗಳೂರು ಸೆಂಟ್ರಲ್ ನಡುವೆ ಭಾಗಶಃ ರದ್ದಾಗಲಿದೆ.
ಮಂಗಳೂರು ಸೆಂಟ್ರಲ್- ಮಡಗಾಂವ್ ಜಂಕ್ಷನ್ ನಂ.10108 ರೈಲು ಮಂಗಳೂರು ಸೆಂಟ್ರಲ್ ಮತ್ತು ತೋಕೂರು ನಡುವೆ ಭಾಗಶಃ ರದ್ದಾಗಲಿದ್ದು, ರೈಲು ಮಾ.4ರಂದು ಸಂಜೆ 3.40ಕ್ಕೆ ತೋಕೂರಿನಿಂದ ಪ್ರಯಾಣ ಆರಂಭಿಸಲಿದೆ.
ಸಿಎಸ್‌ಎಂಟಿ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ನಂ.12133 ರೈಲು ಸುರತ್ಕಲ್-ಮಂಗಳೂರು ಜಂಕ್ಷನ್ ನಡುವೆ ಭಾಗಶಃ ರದ್ದಾಗಲಿದೆ. ಮಾ. 4ರಂದು ಸಂಚರಿಸಲಿರುವ ಮಂಗಳೂರು ಜಂಕ್ಷನ್- ಮುಂಬಯಿ ಸಿಎಸ್‌ಎಂಟಿ ಎಕ್ಸ್‌ಪ್ರೆಸ್ ನಂ. 12134 ರೈಲು ಮಂಗಳೂರು ಜಂಕ್ಷನ್ ಮತ್ತು ಸುರತ್ಕಲ್ ನಡುವೆ ಭಾಗಶಃ ರದ್ದಾಗಲಿದೆ.
ಯಶವಂತಪುರ -ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ (ವಯಾ- ಶ್ರವಣಬೆಳಗೊಳ) ನಂ.16539 ಕಬಕ ಪುತ್ತೂರು-ಮಂಗಳೂರು ಜಂಕ್ಷನ್ ನಡುವೆ ಮಾ. 4ರಂದು ಭಾಗಶಃ ರದ್ದಾಗಲಿದೆ.
ಮಾ.3ರಂದು ಹೊರಡಲಿರುವ ವಿಜಯಪುರ -ಮಂಗಳೂರು ಜಂಕ್ಷನ್ ಡೈಲಿ ಎಕ್ಸ್‌ಪ್ರಸ್ ನಂ.07377 ವಿಶೇಷ ರೈಲು ಸುಬ್ರಹ್ಮಣ್ಯ ರೋಡ್ -ಮಂಗಳೂರು ಜಂಕ್ಷನ್ ನಡುವೆ ಭಾಗಶಃ ರದ್ದಾಗಲಿದೆ. ಮಾ. 4ರಂದು ಹೊರಡಲಿರುವ ಮಂಗಳೂರು ಜಂಕ್ಷನ್-ವಿಜಯಪುರ ಡೈಲಿ ಎಕ್ಸ್‌ಪ್ರಸ್ ನಂ.07378 ರೈಲು ಮಂಗಳೂರು ಜಂಕ್ಷನ್-ಸುಬ್ರಹ್ಮಣ್ಯ ರೋಡ್ ನಿಲ್ದಾಣದ ನಡುವೆ ಭಾಗಶಃ ರದ್ದಾಗಲಿದೆ ಎಂದು ಪ್ರಕಟನೆ ತಿಳಿಸಿದೆ.