Royal Enfield Shotgun 650 : ನೂತನ ಮಾದರಿಯ ವಿಶೇಷತೆಗಳೊಂದಿಗೆ ಬಿಡುಗಡೆಯಾಗಲಿದೆ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650!!!
Royal Enfield Shotgun 650 : ಪ್ರಸ್ತುತ ಈ ನಡುವೆ ದ್ವಿಚಕ್ರ ತಯಾರಿಕ ಕಂಪನಿಗಳು (company )ತಾನು ಹೆಚ್ಚು ನಾನು ಹೆಚ್ಚು ಎಂದು ಹಲವಾರು ಆಫರ್ಗಳನ್ನು (offers )ತರುತ್ತಲೇ ಇದೆ. ಅಲ್ಲದೆ ಹೊಸ ಹೊಸ ಬೈಕುಗಳು(new bike )ಮಾರುಕಟ್ಟೆಗೆ ಬರುತ್ತಿದೆ. ಇದೀಗ ರಾಯಲ್ ಎನ್‌ಫೀಲ್ಡ್ ಮತ್ತೊಂದು ಬೈಕ್‌ನೊಂದಿಗೆ ಭಾರತದ ಮಾರುಕಟ್ಟೆಯಲ್ಲಿ ಸದ್ದು ಮಾಡಲು ರೆಡಿ ಆಗಿದೆ. ಹೌದು ಅತ್ಯಂತ ಆಕರ್ಷಕ ಬೈಕ್ ರಾಯಲ್ ಎನ್‌ಫೀಲ್ಡ್ (Royal Enfield )ಶಾಟ್‌ಗನ್ 650 (Royal Enfield Shotgun 650) ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಸದ್ಯ ಟೆಸ್ಟ್ ರೈಡ್ ಸೇರಿದಂತೆ ಹಲವು ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿರುವ ಶಾಟ್‌ಗನ್ 650 ಇದೀಗ ಚೆನ್ನೈನ ಉತ್ಪಾದನೆ ಘಟಕದಲ್ಲಿ ಅಂತಿಮ ರೂಪ ಪಡೆದುಕೊಳ್ಳುತ್ತಿದೆ.
ಇತ್ತೀಚೆಗೆ ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೋರ್ 650 ಬೈಕ್ ಬಿಡುಗಡೆ ಮಾಡಿದೆ. ಇದರ ಬೆಲೆ 3.59 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಹೀಗಾಗಿ ಹೊಚ್ಚ ಹೊಸ ಶಾಟ್‌ಗನ್ 650 ಬೈಕ್ ಬೆಲೆ ಸರಿಸುಮೂರು 3 ರಿಂದ 4 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಇರುವ ಸಾಧ್ಯತೆ ಇದೆ. ಅಲ್ಲದೆ ಕಳೆದ ವರ್ಷ EICMA ಈವೆಂಟ್‌ನಲ್ಲಿ ಇದೇ ಶಾಟ್‌ಗನ್ 650 ಕಾನ್ಸೆಪ್ಟ್ ಬೈಕ್ ಪರಿಚಯಿಸಲಾಗಿತ್ತು. ಇದೀಗ ಅಂತಿಮ ಹಂತದಲ್ಲಿರುವ ಶಾಟ್‌ಗನ್ 650 ನವೆಂಬರ್ ತಿಂಗಳಲ್ಲಿ ವಿಶ್ವದ ಇತರ ಭಾಗಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಭಾರತದಲ್ಲಿ ಈ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಇತರೆ ಮಾಹಿತಿ :
• ನೂತನ ಶಾಟ್‌ಗನ್ 650 ಬೈಕ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ. ಇನ್ನು ಡಿಸ್ಕ್ ಬ್ರೇಕ್ ಗಾತ್ರ ಹೆಚ್ಚಿಸಲಾಗಿದೆ. ಈ ಮೂಲಕ ಬೈಕ್ ಸುರಕ್ಷತೆ ಹಾಗೂ ಬ್ರೇಕಿಂಗ್ ಕುರಿತು ಹೆಚ್ಚಿನ ಗಮನಕೇಂದ್ರೀಕರಿಸಲಾಗಿದೆ.
• ಶಾಟ್‌ಗನ್ 650 ಬೈಕ್ ಡ್ಯುಯೆಲ್ ಎಕ್ಸ್‌ಹಾಸ್ಟ್ ಯುನಿಟ್ ಹೊಂದಿದೆ.ಇನ್ನು 648 cc ಟ್ವಿನ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದರಿಂದ ಈ ಬೈಕ್ 47 PS ಪವರ್ ಹಾಗೂ 52 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
• 6 ಸ್ಪೀಡ್ ಗೇರ್‌ಬಾಕ್ಸ್ ಜೊತೆಗೆ ಸ್ಲಿಪ್ಪರ್ ಕ್ಲಚ್ ಹೊಂದಿದೆ
• ಇದರ ಹೆಡ್‌ಲೈಟ್ ರೌಂಡ್ ಶೇಪ್ ಹೊಂದಿದೆ. ಸ್ಪ್ಲಿಟ್ ಸೀಟ್ ಹೊಂದಿದೆ.
• ಸ್ಪೀಡೋಮೀಟರ್, ಟ್ರಿಪ್ ಮೀಟರ್, ಒಡೋ ಮೀಟರ್ ಡಿಜಿಟಲ್ ಇನ್ಸೆಟ್ ಗಾತ್ರ ಹೆಚ್ಚಾಗಿದೆ.
• ಫ್ಯೂಯೆಲ್ ರೀಡಿಂಗ್ ಸೇರಿದಂತೆ ಇತರ ಫೀಚರ್ಸ್ ಇದರಲ್ಲಿದೆ .
• ಅಲ್ಲದೆ USD ಫ್ರಂಟ್ ಫೋರ್ಕ್ಸ್, ಟ್ವಿನ್ ರೇರ್ ಶಾಕ್ಸ್ ಹೊಂದಿದೆ.
• ಎಬಿಎಸ್ ಬ್ರೇಕ್, ಮೌಂಟೆಡ್ ಅಲೋಯ್ ವ್ಹೀಲ್ಸ್ ಹೊಂದಿದೆ. ಟೈಯರ್ ಗಾತ್ರ ಮುಂಭಾಗ 19 ಇಂಚು ಹಾಗೂ ರೇರ್ ಟೈಯರ್ 16 ಇಂಚು ಹೊಂದಿರುವ ಸಾಧ್ಯತೆ ಇದೆ. ಸೂಪರ್ ಮಿಟಿಯೋರ್ 650 ಬೈಕ್‌ನಲ್ಲಿ ಇದೇ ಗಾತ್ರದ ಟೈಯರ್ ಬಳಸಲಾಗಿದೆ.
ಒಟ್ಟಿನಲ್ಲಿ ಶಾಟ್‌ಗನ್ 650 ಬೈಕ್ ಇತ್ತೀಚೆಗೆ ಭಾರತದದಲ್ಲಿ ಟೆಸ್ಟಿಂಗ್ ವೇಳೆ ಪತ್ತೆಯಾಗಿದ್ದು, ಶಾಟ್‌ಗನ್ ರೆಟ್ರೋ ಥೀಮ್ ಮೂಲಕ ಆಕರ್ಷಕ ಲುಕ್ ಹೊಂದಿದೆ ಎಂದು ತಿಳಿದು ಬಂದಿದೆ .