ಇನ್ಮುಂದೆ ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ದೊರೆಯುತ್ತೆ ರೈತ ವಿದ್ಯಾನಿಧಿ ಯೋಜನೆಯಡಿ ಶಿಷ್ಯ ವೇತನ!
Raitha Vidyanidhi scheme :ರೈತ ಮಕ್ಕಳಿಗೆ ನೆರವಾಗುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳ ಮೂಲಕ ನೆರವಾಗುತ್ತಲೇ ಬಂದಿದೆ. ಅದರಂತೆ ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆಯಡಿ (Raitha Vidyanidhi scheme) ಶಿಷ್ಯ ವೇತನವನ್ನು ನೀಡುತ್ತಾ ಬಂದಿದೆ. ಇದೀಗ ಈ ಶಿಷ್ಯ ವೇತನವನ್ನು ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಣೆ ಮಾಡುವ ಮೂಲಕ ಸಿಹಿ ಸುದ್ದಿ ನೀಡಿದೆ.
ಭೂರಹಿತ ಕೃಷಿ ಕಾರ್ಮಿಕರ ಮಕ್ಕಳು ರೈತ ವಿದ್ಯಾ ನಿಧಿ ವಿದ್ಯಾರ್ಥಿ ವೇತನ ಪಡೆಯಲು FID without land ಹಾಗೂ ನರೇಗಾ ಗುರುತಿನ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. ಅರ್ಹ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಂಟಿಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ.
08 ರಿಂದ 10 ನೇ ತರಗತಿ ವರೆಗಿನ ವಿದ್ಯಾರ್ಥಿನಿಯರಿಗೆ ಮಾತ್ರ ವಾರ್ಷಿಕ 2000 ರೂ. ವಾರ್ಷಿಕ ಶಿಷ್ಯ ವೇತನ ನೀಡಲಾಗುವುದು. ಪಿಯುಸಿ, ಐಟಿಐ, ಡಿಪ್ಲೋಮಾ ಮುಂತಾದ ಪದವಿಗೂ ಮುನ್ನ ಪಡೆಯುವ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ರೂ. 2500 ಹಾಗೂ ವಿದ್ಯಾರ್ಥಿನಿಯರಿಗೆ ರೂ. 3000. ಬಿಎ, ಬಿಎಸ್‍ಸಿ, ಬಿಕಾಂ ಮುಂತಾದ ಪದವಿ ವ್ಯಾಸಂಗ ಮಾಡುವ (ಎಂಬಿಬಿಎಸ್, ಬಿಇ, ಬಿಟೆಕ್ ಮತ್ತು ವೃತ್ತಿಪರ ಕೋರ್ಸ್‍ಗಳನ್ನು ಹೊರತುಪಡಿಸಿ) ವಿದ್ಯಾರ್ಥಿಗಳಿಗೆ ರೂ. 5000, ವಿದ್ಯಾರ್ಥಿನಿಯರಿಗೆ ರೂ. 5500 ನೀಡಲಾಗುತ್ತದೆ.
ಎಲ್.ಎಲ್.ಬಿ, ಪ್ಯಾರಾಮೆಡಿಕಲ್, ಬಿ.ಫಾರ್ಮ್, ನರ್ಸರಿ ಇತ್ಯಾದಿ ವೃತ್ತಿಪರ ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ ರೂ. 7500, ವಿದ್ಯಾರ್ಥಿನಿಯರಿಗೆ ರೂ. 8000. ಎಂ.ಬಿ.ಬಿ.ಎಸ್ / ಬಿ.ಇ / ಬಿ.ಟೆಕ್ ಮತ್ತುಎಲ್ಲಾ ಸ್ನಾತಕೋತ್ತರ ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ ರೂ. 10,000, ವಿದ್ಯಾರ್ಥಿನಿಯರಿಗೆ ರೂ. 11,000 ಗಳ ವಾರ್ಷಿಕ ಶಿಷ್ಯ ವೇತನ ನೀಡಲಾಗುತ್ತದೆ.
ಅಧಿಕೃತ ವೆಬ್ ಸೈಟ್ :
ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳು: https://ssp.karnataka.gov.in/ssp2223/homeNew.ಆಸ್ಪಕ್ಸ್
ಮೆಟ್ರಿಕ್ ನಂತರದ ವಿದ್ಯಾರ್ಥಿಗಳು: https://ssp.postmatric.karnataka.gov.in/homepage.aspx