ಅಂಚೆಕಚೇರಿಯಲ್ಲಿ ಇನ್ನು ಮುಂದೆ ಸಿಗಲಿದೆ ರೈತರಿಗೆ ಸಾಲ, ಮರುಪಾವತಿ!

Post Office Scheme : ಸಾಮಾನ್ಯವಾಗಿ ಪ್ರತಿಯೊಬ್ಬರು ಯಾವುದಾದರೂ ಒಂದು ಕ್ಷೇತ್ರದಲ್ಲಿ ಉಳಿತಾಯ ಮಾಡೋದು ಸಹಜ. ಸರ್ಕಾರಿ (Governament) ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು (Private Bank) ಖಾತೆಗಳ ಇಲ್ಲವೇ ಪೋಸ್ಟ್ ಆಫೀಸ್(Post Office), ಇನ್ಸೂರೆನ್ಸ್ ಕಂಪನಿಗಳಲ್ಲಿ ಇಲ್ಲವೇ ಇನ್ನಿತರ ಹಣಕಾಸಿನ ವ್ಯವಹಾರಗಳಲ್ಲಿ ಠೇವಣಿ(Deposit) ಇಟ್ಟು ನಿಶ್ಚಿತ ಲಾಭ ಪಡೆಯುವ ಸೌಲಭ್ಯ ಪಡೆಯಬಹುದಾಗಿದೆ. ಇದರ ಜೊತೆಗೆ, ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಹೊಸ ಯೋಜನೆಯನ್ನು ಪೋಸ್ಟ್ ಆಫೀಸ್ (Post Office Scheme) ರೂಪಿಸಿದ್ದು, ವಿವಿಧ ಸಾಲಗಳನ್ನು ಪಡೆಯಬಹುದಾಗಿದೆ.

ಕರ್ನಾಟಕದ ಅಂಚೆ ವೃತ್ತ ಕಾರ್ಯಕ್ರಮವೊಂದನ್ನು ರೂಪಿಸಿದೆ. ಹೆಚ್‌ಡಿಎಫ್‌ಸಿ ಬ್ಯಾಂಕ್(HDFC Bank) ಜೊತೆ ಕೈ ಜೋಡಿಸಿ ರೈತರಿಗೆ ನೆರವು ನೀಡಲು ಮುಂದಾಗಿದೆ. ರಾಜ್ಯದ ಅಂಚೆ ಇಲಾಖೆಯಿಂದ ಇದು ಮೊದಲ ಪ್ರಯತ್ನವಾಗಿದ್ದು, ಈ ಕ್ರಮದಿಂದ ರೈತರಿಗೆ, ಬ್ಯಾಂಕ್ ಹಾಗೂ ಅಂಚೆ ಇಲಾಖೆಗೆ ಅನುಕೂಲವಾಗುವ ನಿರೀಕ್ಷೆಯಿದೆ. ಹೆಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಮೀಣ ಕ್ಷೇತ್ರದ ರೈತರಿಗಾಗಿ ಹಲವು ಯೋಜನೆಗಳನ್ನು ರೂಪಿಸಲಾಗಿದ್ದು, ಸದ್ಯ ಅಂಚೆ ಕಚೇರಿ ಮೂಲಕ ರೈತರಿಗೆ(Post Office Scheme Benifits) ಹೆಚ್ಚಿನ ಪ್ರಯೋಜನ ಲಭ್ಯವಾಗಲಿವೆ. ಎಚ್ಡಿಎಫ್ಸಿ ಬ್ಯಾಂಕ್ನೊಂದಿಗೆ ಪಾಲುದಾರಿಕೆ ಮೂಲಕ ಆರ್ಥಿಕ ಸಹಾಯ (Financial Services) ಅಗತ್ಯವಿರುವ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ವಿಶಾಲವಾದ ಅಂಚೆ ಜಾಲವನ್ನು ಶೀಘ್ರದಲ್ಲೇ ಭಾರತ ಅಂಚೆ ಬಳಕೆ ಮಾಡಿಕೊಳ್ಳಲಿದೆ. ಬ್ಯಾಂಕ್ ಸಾಲ ಪಡೆದವರು ಸಮೀಪದ ಅಂಚೆ ಕಚೇರಿಯಲ್ಲಿಯೇ ಬ್ಯಾಂಕ್ ಸಾಲದ ಇಎಂಐಯನ್ನು ಇ-ಪೇಮೆಂಟ್ (E- Payment) ಮೂಲಕ ಕಟ್ಟಬಹುದಾಗಿದೆ. ಅಂಚೆ ಕಚೇರಿಯಲ್ಲಿಯೂ ಬ್ಯಾಂಕ್ ಮಾದರಿಯಲ್ಲಿಯೇ ಪಾವತಿ ಮಾಡಲು ಪೂರಕ ವ್ಯವಸ್ಥೆ ಕಲ್ಪಿಸಾಗುತ್ತದೆ.

ಭಾರತದ ಅಂಚೆ ಇಲಾಖೆಯ ಜಾಲವು ಬ್ಯಾಂಕ್ ಸೇವೆ( Bank Service’s) ಎಟುಕದವರಿಗೆ ಮತ್ತು ಬ್ಯಾಂಕಿಂಗ್ ಮಾಡದವರಿಗೆ ಉಪಯುಕ್ತ ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳನ್ನು ತಲುಪಲು ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಬ್ಯಾಂಕಿನ ಅರ್ಹತೆಯ ಆಧಾರದಲ್ಲಿ ಅಂಚೆ ಕಚೇರಿಯಲ್ಲಿಯೇ ಸಾಲ ನೀಡಲಾಗಲಿದ್ದೂ, ಯಾರಿಗೆ ಸಾಲ ನೀಡಬೇಕು ಎಂಬುದನ್ನು ಬ್ಯಾಂಕ್ ತೀರ್ಮಾನ ಮಾಡುವ ಬಗ್ಗೆ ಅಂಚೆ ಇಲಾಖೆ ಸಿಪಿಎಂಜೆ ರಾಜೇಂದ್ರ ಎಸ್. ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ರೈತರಿಗೆ ಪಶುಸಂಗೋಪನೆ ಸಾಲ, ತೋಟಗಾರಿಕೆ ಸಾಲ, ಕೃಷಿ ಸಾಲ, ಫೌಲ್ಟ್ರಿಂ ಫಾರಂ ಸಾಲ ಸೇರಿದಂತೆ ವಿವಿಧ ಸಾಲಗಳು ಹೆಚ್‌ಡಿಎಫ್‌ಸಿ ಬ್ಯಾಂಕ್‌ ಒದಗಿಸುತ್ತಿದ್ದು, ಈ ಬಗ್ಗೆ ರೈತರಿಗೆ(Farmers) ಮಾಹಿತಿ ಇಲ್ಲದೆ ಇರುವ ಹಿನ್ನೆಲೆ ಈ ಪ್ರಯೋಜನಗಳು ರೈತರಿಗೆ ಲಭ್ಯವಾಗುತ್ತಿಲ್ಲ. ಇದಲ್ಲದೆ, ಅಂಚೆ ಕಚೇರಿಯಲ್ಲಿ ಸ್ಥಳೀಯ ಭಾಷೆಯಲ್ಲಿಯೇ ಇಂತಹ ಮಾಹಿತಿ ಸಿಗುವ ವ್ಯವಸ್ಥೆ ಮೂಲಕ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಂಚೆ ಕಚೇರಿಯಲ್ಲಿ ರೈತರಿಗೆ ಸಾಲ( Loan) ನೀಡುವ ಜೊತೆಗೆ ಬ್ಯಾಂಕಿನ ಸಾಲವನ್ನು ರೈತರು ಪಾವತಿ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಬ್ಯಾಂಕಿನ ಕೃಷಿ ಸಾಲ ಪಡೆಯಲು ಅರ್ಜಿಗಳನ್ನು ಸಹ ಅಂಚೆ ಕಚೇರಿಯಲ್ಲಿ ಪಡೆಯಬಹುದಾಗಿದ್ದು, ರೈತರ ಸಮಯ ಹಾಗೂ ಓಡಾಟದ ತಾಪತ್ರಯ ತಪ್ಪಲಿದೆ.

Leave A Reply

Your email address will not be published.