Noise Buds X ಇಯರ್‌ಬಡ್ ಇಷ್ಟೊಂದು ಕಡಿಮೆ ಬೆಲೆಯಲ್ಲಿ! ನೀವು ಈಗಲೇ ಹೋಗಿ ತಗೊಳ್ಳೋದು ಖಂಡಿತ!

Noise Buds X earbuds: ಹೊಸ ಇಯರ್‌ಬಡ್‌ಗಳನ್ನು ಖರೀದಿಸಲು ಇದೊಂದು ಸುವರ್ಣ ಅವಕಾಶ ಆಗಿದೆ. ಟೆಕ್ನಾಲಜಿ ಮಾರುಕಟ್ಟೆಗೆ(technology market )ಹೊಸ ಇಯರ್ ಬಡ್ಸ್ ಬಿಡುಗಡೆಯಾಗಿದ್ದು. ಇದು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸದ್ಯ ಬಳಕೆದಾರರ ಡಿವೈಸ್​ಗಳಿಗೆ(divice )ವೇಗವಾಗಿ ಕನೆಕ್ಟ್​(connect )ಆಗುವಂತಹ ಫೀಚರ್ಸ್​ ಅನ್ನು ಹೊಂದಿರುವ ಜೊತೆಗೆ ಬ್ಲೂಟೂತ್‌ (Bluetooth )ಆವೃತ್ತಿ ಒಳಗೊಂಡಿದೆ. ಅಲ್ಲದೆ ಇದು ಕರೆಯಲ್ಲಿರುವಾಗ ಅಥವಾ ಯಾವುದಾದರೂ ಮೀಟಿಂಗ್‌ನಲ್ಲಿ ಇದ್ದಾಗ ಯಾವುದೇ ಅಡೆತಡೆಯ ಶಬ್ಧ ಇಲ್ಲದೆ ಸ್ಪಷ್ಟವಾಗಿ ಸಂವಹನ ಪ್ರಕ್ರಿಯೆ ನಡೆಸಲು ಅನುಮತಿಸುತ್ತದೆ.

ಮುಖ್ಯವಾಗಿ Noise ಇದು ಭಾರತದಲ್ಲಿ ಬಹು ಬೇಡಿಕೆಯ ಇಯರ್‌ಬಡ್ಸ್ ಬ್ರ್ಯಾಂಡ್ ಆಗಿದೆ. ಸದ್ಯ Noise ದೇಶದಲ್ಲಿ ತನ್ನ ಮತ್ತೊಂದು ಬಜೆಟ್ ಬೆಲೆಯ Noise Buds X ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಹೊಸ ಇಯರ್‌ಬಡ್ಸ್ ಡಿವೈಸ್ ಪರಿಚಯಿಸಿದೆ. ಸದ್ಯ Noise Buds X earbuds ಡಿವೈಸ್ ದೇಶದಲ್ಲಿ 1,999 ರೂ. ಬೆಲೆಯಲ್ಲಿ ಬಿಡುಗಡೆಯಾಗಿದ್ದು, ಗ್ರಾಹಕರು ಇಂದಿನಿಂದಲೇ ಅಮೆಜಾನ್ ಮತ್ತು ಕಂಪೆನಿಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ Noise Buds X ಇಯರ್‌ಬಡ್ಸ್ ಡಿವೈಸ್ ಅನ್ನು ಕಾರ್ಬನ್ ಬ್ಲಾಕ್ ಮತ್ತು ಸ್ನೋ ವೈಟ್ ಎರಡು ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

ಇನ್ನು Noise ಕಂಪೆನಿಯ ಸಹ-ಸಂಸ್ಥಾಪಕ ಅಮಿತ್ ಖಾತ್ರಿ ಪ್ರಕಾರ, ಉತ್ತಮ ಆಡಿಯೊ ಗುಣಮಟ್ಟ ಮತ್ತು ಬಳಕೆದಾರರ ಅನುಭವವನ್ನು ಮಹತ್ವಾಕಾಂಕ್ಷೆಯ ಬೆಲೆಯಲ್ಲಿ ಪ್ಯಾಕ್ ಮಾಡುವುದರ ಮೇಲೆ ಅಚಲವಾದ ಗಮನವನ್ನು ಹೊಂದಿರುವ, Noise Buds X ನಿಜವಾದ ವೈರ್‌ಲೆಸ್ ಜಗತ್ತಿನಲ್ಲಿ ಉತ್ತಮ ತಂತ್ರಜ್ಞಾನ ಆಗಿದೆ ಎಂದಿದ್ದಾರೆ.

Noise Buds X ಇಯರ್‌ಬಡ್ಸ್ ಡಿವೈಸ್ ಸಂಪೂರ್ಣ ವೈಶಿಷ್ಟ್ಯಗಳು ಇಲ್ಲಿದೆ :

ನೂತನ Noise Buds X ಇಯರ್‌ಬಡ್ಸ್ ಡಿವೈಸ್ ಸಿಲಿಕೋನ್ ಇನ್ ಇಯರ್ ರೀತಿಯಲ್ಲಿ ಕಿವಿಗಳಿಗೆ ಸರಿಯಾಗಿ ಹೊಂದಿಕೆಯಾಗುವಂತಹ ವಿನ್ಯಾಸದಲ್ಲಿ ಬಿಡುಗಡೆಯಾಗಿದೆ. IPX5 ರೇಟಿಂಗ್‌ ವಾಟರ್‌ ರೆಸಿಸ್ಟೆಂಟ್ ಹೊಂದಿರುವ ಇಯರ್‌ಬಡ್‌ಗಳ ಮೇಲೆಯೆ ಸ್ಪರ್ಷ ನಿಯಂತ್ರಣ ನೀಡಲಾಗಿದ್ದು, ಕರೆ, ಸಂಗೀತವನ್ನು ನಿಯಂತ್ರಿಸಲು ಅವಕಾಶವಿದೆ. ಈ Noise Buds X ಇಯರ್‌ಬಡ್‌ಗಳಲ್ಲಿ 12mm ಸಾಮರ್ಥ್ಯದ ಡ್ರೈವರ್‌ಗಳಿದ್ದು, ಇವು ಸ್ಪಷ್ಟವಾದ ಧ್ವನಿ ಹಾಗೂ ಇಂಪಾದ ಬೇಸ್‌ ಆಡಿಯೋ ಒದಗಿಸಲಿವೆ.

Noise Buds X ಇಯರ್‌ಬಡ್‌ಗಳು ಹೈಪರ್‌ ಸಿಂಕ್‌ ತಂತ್ರಜ್ಞಾನ ಹೊಂದಿದ್ದು, ಚಾರ್ಜಿಂಗ್ ಕೇಸ್‌ನಿಂದ ಹೊರತೆಗೆದ ತಕ್ಷಣ ಸಂಬಂಧಿತ ಡಿವೈಸ್‌ಗಳಿಗೆ ಸಂಪರ್ಕಗೊಳ್ಳುತ್ತವೆ. ನೀವು ಚಾರ್ಜಿಂಗ್ (charging ) ಕೇಸ್‌ಗೆ ಬಡ್ಸ್‌ಗಳನ್ನು ಹಾಕಿ ಮುಚ್ಚಿದ ತಕ್ಷಣವೇ ಆಟೋಮ್ಯಾಟಿಕ್‌ ಆಗಿ ಆಫ್‌ ಆಗುತ್ತದೆ. ಇದರಿಂದ ಇದರ ಬ್ಯಾಟರಿ ಸಾಮರ್ಥ್ಯ ಹೆಚ್ಚಲಿದೆ. ಈ ಇಯರ್‌ಬಡ್ಸ್ ಬರೋಬ್ಬರಿ 35 ಗಂಟೆಗಳ ಬ್ಯಾಟರಿ ಬ್ಯಾಕಪ್‌ ಹೊಂದಿದ್ದು, 10 ನಿಮಿಷಗಳ ಚಾರ್ಜ್‌ ಮಾಡಿದರೆ 120 ನಿಮಿಷಗಳ ಪ್ಲೇಟೈಮ್ ಒದಗಿಸಲಿದೆ ಎಂದು ಕಂಪೆನಿ ಹೇಳಿದೆ.

ಮುಖ್ಯವಾಗಿ Noise Buds X ಇಯರ್‌ಬಡ್ ಇದು ಕರೆಯಲ್ಲಿರುವಾಗ ಅಥವಾ ಯಾವುದಾದರೂ ಮೀಟಿಂಗ್‌ನಲ್ಲಿ ಇದ್ದಾಗ ಯಾವುದೇ ಅಡೆತಡೆಯ ಶಬ್ಧ ಇಲ್ಲದೆ ಸ್ಪಷ್ಟವಾಗಿ ಸಂವಹನ ಪ್ರಕ್ರಿಯೆ ನಡೆಸಲು ಅನುಮತಿಸುತ್ತದೆ. ಇದರೊಂದಿಗೆ ಟ್ರಾನ್ಸ್ಪರೆಂಟ್ ಮೋಡ್‌ ಸಹ ಇದ್ದು, ಇಯರ್‌ಬಡ್‌ಗಳು ಕಿವಿಯಲ್ಲಿದ್ದಾಗಲೂ ಸಹ ಹೊರಗಿನ ಶಬ್ದಗಳನ್ನು ಸುಗಮವಾಗಿ ಕೇಳಲು ಸಾಧ್ಯವಾಗುವುದು ಇದರ ವಿಶೇಷತೆ ಆಗಿದೆ.

Leave A Reply

Your email address will not be published.