Lionel Messi : ಭರ್ಜರಿ 35 ಚಿನ್ನದ ಐಫೋನ್‌ ಖರೀದಿ ಮಾಡಿದ ಫುಟ್ಬಾಲ್ ಮಾಂತ್ರಿಕ ಮೆಸ್ಸಿ! ಯಾರಿಗೆ ಗೊತ್ತಾ?

Lionel Messi : ಫುಟ್ ಬಾಲ್(Football) ಎಂದಾಕ್ಷಣ ನೆನಪಿಗೆ ಬರುವುದು ಅರ್ಜೆಂಟೀನ(Argentina)ದ ಲಿಯೋನೆಲ್ ಮೆಸ್ಸಿ(Lionel Messi). ಹೌದು ಪ್ರಪಂಚದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಮೆಸ್ಸಿ ಫುಟ್ ಬಾಲಿನ ದಂತಕಥೆ ಇದ್ದಂತೆ. ಆ ಲೋಕದ ಮಿನುಗು ತಾರೆ ಅವರು. ಇತ್ತೀಚೆಗಷ್ಟೆ ಕತಾರ್‌(Kataar)ನಲ್ಲಿ ನಡೆದ ಫಿಫಾ ವಿಶ್ವಕಪ್(Fifa World cup)ಫೈನಲ್‌ನಲ್ಲಿ ಫ್ರಾನ್ಸ್(france) ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿ, ಕನಸಿನ ಗುರಿಯನ್ನು ನನಸಾಗಿಸಿಕೊಂಡ ನೆಮ್ಮದಿಯಲ್ದಿದ್ದಾರೆ. ಆದರೀಗ ಮೆಸ್ಸಿಯವರು ಬರೋಬ್ಬರಿ 35 ಚಿನ್ನದ ಐಫೋನ್​(Golden iPhone) ಖರೀದಿಸಿದ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ.ಆದರೆ ಇಷ್ಟು ಫೋನ್ ಗಳನ್ನು ಯಾರಿಗೆ ಅನ್ನೋ ಕುತೂಹಲ ಎಲ್ಲರಿಗೂ ಮೂಡಿದೆ. ಅವರು ಫೋನ್ ಗಳನ್ನು ಯಾರಿಗಾಗಿ ಕೊಂಡಿದ್ದಾರೆ ಗೊತ್ತಾ? ಹಾಗಿದ್ರೆ ಈ ಸ್ಟೋರಿ ನೋಡಿ.

 

ಕಳೆದ ವರ್ಷ ಕತಾರ್​(Kataar)ನಲ್ಲಿ ನಡೆದ ಫಿಫಾ ವಿಶ್ವಕಪ್​ ನಲ್ಲಿ, ಮೆಸ್ಸಿ ನಾಯಕತ್ವದ ಅರ್ಜೇಂಟಿನಾ ತಂಡವು ಪ್ರಾನ್ಸ್​ ವಿರುದ್ಧ ಐತಿಹಾಸಿಕ ಗೆಲುವನ್ನು ಪಡೆದು ಇಡೀ ಜಗತ್ತೇ ಸಂಭ್ರಮಿಸುವಂತೆ ಮಾಡಿತ್ತು. ಈ ಮೂಲಕ ಮೆಸ್ಸಿ ಇನ್ನೂ ತನ್ನ ಅಭಿಮಾನಿಗಳ ಮನಗೆದ್ದಿದ್ದರು. ತಂಡದ ಸಾಧನೆಯನ್ನು ಇಡೀ ಜಗತ್ತೇ ಕೊಂಡಾಡಿತ್ತು. ಅಂತೆಯೇ ಇದೀಗ ಮೆಸ್ಸಿ ತೆಗೆದುಕೊಂಡಿರುವ ನಿರ್ಧಾರ ಮತ್ತೊಮ್ಮೆ ಇಡೀ ಜಗತ್ತೇ ಬೆರಗಾಗುವಂತೆ ಮಾಡಿದೆ.

ಹೌದು, ಲಿಯೋನೆಲ್ ಮೆಸ್ಸಿ ತನ್ನ ತಂಡದ ಪ್ರತಿಯೊಬ್ಬ ಸದಸ್ಯ ಮತ್ತು ಸಿಬ್ಬಂದಿಗೆ ವಿಶೇಷ ಉಡುಗೊರೆಯನ್ನು ನೀಡಲು ಮುಂದಾಗಿದ್ದಾರೆ. ಇದ್ರಲ್ಲೇನು ವಿಶೇಷ ಎಂದು ನೀವು ಕೇಳಬಹುದು. ಆದರೆ ಗಿಫ್ಟ್ ಯಾವುದೆಂದು ನೀವು ತಿಳಿದರೆ ಖಂಡಿತಾ ಶಾಕ್ ಆಗ್ತೀರಾ! ಯಾಕಂದ್ರೆ ಮೆಸ್ಸಿ ಕೊಡಲು ಮುಂದಾಗಿರುವ ಗಿಫ್ಟ್ ಬಂಗಾರದ ಐಫೋನ್ ಗಳು! ಯಸ್, ತಮ್ಮ ತಂಡದ ಎಲ್ಲಾ ಸದಸ್ಯರಿಗೆ, ಸಿಬ್ಬಂದಿಗಳಿಗೆ ಚಿನ್ನದ ಫೋನ್ ನೀಡಲು ಮೆಸ್ಸಿ ಮುಂದಾಗಿದ್ದಾರೆ!

ಈಗಾಗಲೇ ,ಮೆಸ್ಸಿ ಬರೋಬ್ಬರಿ 35 ಚಿನ್ನದ ಐಫೋನ್‌ಗಳನ್ನು ಆರ್ಡರ್(Order) ಮಾಡಿದ್ದಾರಂತೆ. ಲಿಯೋನೆಲ್ ಅವರು ತಮ್ಮ ಐತಿಹಾಸಿಕ ಹೆಮ್ಮೆಯ ಕ್ಷಣವನ್ನು ಆಚರಿಸಲು ಎಲ್ಲರಿಗೂ ಈ ವಿಶೇಷವಾದ ಈ ಗಿಫ್ಟ್​ ನೀಡುತ್ತಿದ್ದಾರೆ ಎನ್ನಲಾಗಿದೆ. ವರದಿಯ ಪ್ರಕಾರ ಒಂದು ಮೊಬೈಲ್​ನ ಬೆಲೆ 1.73 ಕೋಟಿ ರೂಪಾಯಿ! ಅಲ್ಲದೆ ಇದು 24 ಕ್ಯಾರೆಟ್ ಚಿನ್ನದಿಂದ ಮಾಡಿದ ಮೊಬೈಲ್​ ಆಗಿವೆ. ಇದರೊಂದಿಗೆ ಈ ಮೊಬೈಲ್​ ಮೇಲೆ ಆಟಗಾರನ ಹೆಸರುಗಳು, ಸಂಖ್ಯೆಗಳು ಮತ್ತು ಅರ್ಜೆಂಟೀನಾದ ಲೋಗೋವನ್ನು ಪ್ರಿಂಟ್​ ಮಾಡಿಸಲಾಗಿದೆಯಂತೆ!

ಇನ್ನು ಇದರ ಬಗ್ಗೆ ಮಾತನಾಡಿರುವ ಐಡಿಸೈನ್ ಗೋಲ್ಡ್​ನ(Idesign)ಸಿಇಓ ಬೆನ್(Ben), ಮೆಸ್ಸಿ ಅವರು ವಿಶ್ವಕಪ್​ ಮುಗಿದ ಬಳಿಕ ನನ್ನ ಬಳಿ ಬಂದು ತಂಡದ ಸದ್ಯರಿಗೆ ಏನಾದರೂ ವಿಶೇಷ ಉಡುಗೊರೆ ನೀಡಬೇಕು ಎಂದು ಹೇಳಿದರು. ನಾನಾಗ ವಾಚ್(Watch) ನೀಡಿ ಎಂದು ಸಲಹೆ ನೀಡಿದೆ. ಆದರೆ ಅವರು ಕೇವಲ ವಾಚ್​ ನೀಡಲು ಒಪ್ಪಲಿಲ್ಲ. ಬದಲಿಗೆ ವಿನೂತನವಾಗಿ ಏನಾದರೂ ಗಿಫ್ಟ್ ನೀಡಬೇಕೆಂದು ಹೇಳಿದರು. ಹೀಗಾಗಿ ನಾನು ಕೆಲ ದಿನಗಳನ್ನು ತೆಗೆದುಕೊಂಡು ಅವರ ಬಳಿ ಚಿನ್ನದ ಐಫೋನ್​ ನೀಡುವಂತೆ ಸಲಹೆ ನೀಡಿದೆ. ಅದರ ಮೇಲೆ ಪ್ರತಿಯೊಬ್ಬ ಆಟಗಾರನ ಹೆಸರು ಕೆತ್ತಿಸುವಂತೆ ಸಲಹೆ ನೀಡಿದೆ. ಇದನ್ನು ಮೆಸ್ಸಿ ಸಂತೋಷದಿಂದ ಒಪ್ಪಿಕೊಂಡರು. ಇದೀಗ ಅವುಗಳಿಗಾಗಿ ಆರ್ಡರ್ ನೀಡಿದ್ದಾರೆ’ ಎಂದು ಹೇಳಿದ್ದಾರೆ.

Leave A Reply

Your email address will not be published.