ಮಾರ್ಡನ್‌ ಲೀವ್‌ ಲೆಟರ್‌ ಗೆ ಬಿದ್ದು ಬಿದ್ದು ನಕ್ಕ ಜನ ! ಅಂತದ್ದೇನಿದೆ ಈ ಲೆಟರ್‌ನಲ್ಲಿ ಗೊತ್ತಾ?

Share the Article

Viral Leave Letter: ನಾವೆಲ್ಲ ಬಾಲ್ಯದಲ್ಲಿ ಶಾಲೆಗಳಲ್ಲಿ ರಜೆ ಮಾಡಿದಾಗ ಏನೇನೋ ಸುಳ್ಳು ನೆಪಗಳನ್ನು ಹೇಳಿ ಲೀವ್ ಲೆಟರ್ ಬರೆಯುತ್ತಿದ್ದ ದಿನಗಳನ್ನು ನೆನೆದರೆ ಸಣ್ಣ ನಗುವೊಂದು ನಮಗರಿವಿಲ್ಲದೆ ಮುಖದಲ್ಲಿ ಮೂಡುತ್ತದೆ. ಶಾಲೆಗಳಲ್ಲಿ (School), ಆಫೀಸ್ ಗಳಲ್ಲಿ ರಜೆ ಬೇಕಾದ ಮನವಿ ಮಾಡುವ ಜೊತೆಗೆ ಶಿಸ್ತು ಬದ್ದವಾಗಿ ರಜೆ ಅರ್ಜಿ ಬರೆಯೋದು ಸಹಜ. ಆದರೆ, ಸೋಷಿಯಲ್ ಮೀಡಿಯಾದಲ್ಲಿ (Social Media) ಹಾಸ್ಯಾಸ್ಪದ (Comedy) ಮಾಡರ್ನ್ ಲೀವ್ ಲೆಟರ್ Modern Leave Letter) ಜೋರು ಸದ್ದು ಮಾಡುತ್ತಿದೆ. ಅಷ್ಟಕ್ಕೂ ಈ ಲೆಟರ್ ನೋಡಿದವರೆಲ್ಲ ಬಿದ್ದು ಬಿದ್ದು ನಗುತ್ತಿದ್ದಾರೆ. ಹಾಗಿದ್ರೆ, ಅಂತಹದ್ದೇನು ಬರೆದಿದ್ದಾರೆ ಅಂತೀರಾ?

ನಿಮಗೆಲ್ಲ ನೆನಪಿರಬಹುದು.ನಾಳೆ ಏನಾದ್ರು ನಿಮಗೆ ರಜೆ ಬೇಕು ಎಂದಾದರೆ ಇಂದೇ ಶಾಲೆಗಳಲ್ಲಿ ಶಿಕ್ಷಕರ ಬಳಿ ಮನವಿ ಮಾಡಿ ರಜೆ ಮಾಡಿದ ಮರುದಿನ ರಜೆ ಅರ್ಜಿ ಕೊಡುವ ಪರಿಪಾಠ ಈ ಹಿಂದೆಲ್ಲ ನಾವೆಲ್ಲ ಅನುಸರಿಸಿದ್ದೇವೆ. ನೋಡಿ ಸರ್, ನೀವೂ ಏನು ಮಾಡುತ್ತೀರೋ ನಂಗೊತ್ತಿಲ್ಲ. ನಂಗೆ ರಜೆ ಬೇಕು ಅಂದ್ರೆ ಬೇಕು ಅಷ್ಟೇ!! ಎಂದು ಹಾಸ್ಯಕ್ಕಾಗಿ ಬರೆದಿರುವ ಮಾಡರ್ನ್ ಲೀವ್‌ಲೆಟರ್‌ನ್ನು ಇನ್‌ಸ್ಟಾಗ್ರಾಮ್ ಹಂಚಿಕೊಂಡಿದ್ದು, ಈ ಲೀವ್ ಲೇಟರ್​ (Viral Leave Letter) ಹೇಗಿತ್ತು? ಅನ್ನೋ ಕುತೂಹಲ ನಿಮಗೂ ಮೂಡಿರಬಹುದು ಅಲ್ವಾ!

ಮಾಡರ್ನ್ ಲೀವ್ ಲೆಟರ್ ಹೀಗಿದೆ ನೋಡಿ:

ರಿಗೆ,
ಹೆಡ್ ಮಾಸ್ಟರ್, ನಮ್ ಸ್ಕೂಲು, ನಮ್ಮ ಊರು

ಇಂದ,
ನಾನು, ನಿಮ್ ಸ್ಕೂಲು, ಇದೇ ಊರು
ವಿಷಯ: ರಜಾ ಬೇಕಂದ್ರೆ ಬೇಕಷ್ಟೆ, ನೋಡಿ ಸರ್ ನೀವು ಏನ್ ಮಾಡ್ಕೋತೀರೋ ಮಾಡ್ಕೊಳಿ, ನನಗೆ ಸ್ವಲ್ಪ ಕೆಲಸ ಇದೆ. ಇವತ್ತು ಬರೋದಿಲ್ಲ ಅಷ್ಟೆ.

ನಿಮ್ಮ ಶಿಷ್ಯ
ದಿನಾಂಕ: ಇವತ್ತೇ
ಊರು: ಇದೇ ಊರು

ಈ ಹಾಸ್ಯಾಸ್ಪದ ಲೀವ್ ಲೆಟರ್ ನೋಡಿ ಮಕ್ಕಳು ಶಾಲೆಗೆ ರಜೆ ಅರ್ಜಿ ಕೇಳಲು ಪ್ರಯೋಗ ಮಾಡಿದರು ಅಚ್ಚರಿಯಿಲ್ಲ. ಆದರೆ, ಈ ರೀತಿ ರಜೆ ಅರ್ಜಿ ಬರೆದರೆ ಬೆನ್ನಿಗೆ ಬಾಸುಂಡೆ ಬೀಳೋದು ಗ್ಯಾರಂಟಿಯಾದರು ಅಚ್ಚರಿಯಿಲ್ಲ. ಏನೇ ಹೇಳಿ!!ಈ ಮಾಡ್ರನ್ ಲೆಟರ್ ನೋಡಿದವರಿಗೆ ಮುಖದಲ್ಲಿ ನಗು ತರಿಸುವುದಂತು ಸುಳ್ಳಲ್ಲ.

ವೈರಲ್ ಆಗಿರುವ ಈ ವೀಡಿಯೋ ಗೆ ತರಹೇವಾರಿ ಕಾಮೆಂಟ್(Comments) ಗಳು ಬಂದಿದ್ದು, ಬಳಕೆದಾರರೊಬ್ಬರು ಈ ರೀತಿಯ ರಜಾರ್ಜಿಯನ್ನು ಬರೆಯುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು ಎಂದು ಹೇಳಿಕೊಂಡಿದ್ದು, ಮತ್ತೊಬ್ಬ ಬಳಕೆದಾರರು ಇದ್ದಪ್ಪ ಲೆಟರ್ ಅಂದ್ರೆ, ಉಡಾಲ್ ಶಿಷ್ಯ ಎಂದು ಹೊಗಳಿದ್ದಾರೆ.

ಇನ್ನೊಬ್ಬ ಬಳಕೆದಾರರು, ಇಂತಹದ್ದೊಂದು ಪತ್ರ ಬರೆಯಬೇಕು. ಪೆನ್ ಕೊಡ್ರೋ! ಇಂತಹ ಪತ್ರ ಬರೆಯಬೇಕೆಂದರೆ ಒಂದು ಗತ್ತು ಇರಬೇಕೆಂದು ಹಾಸ್ಯಸ್ಪದವಾಗಿ ಕಮೆಂಟ್ ಮಾಡಿದ್ದಾರೆ. ಈ ವೈರಲ್ ಲೀವ್ ಲೆಟರ್ ವೀಡಿಯೋವನ್ನು (Viral Leave Letter)ಇನ್‌ಸ್ಟಾಗ್ರಾಮ್‌ನಲ್ಲಿ(Instagram) 1.8 ಮಿಲಿಯನ್ ಮಂದಿ ವೀಕ್ಷಿಸಿದ್ದು, ಹೆಚ್ಚಿನ ಸಂಖ್ಯೆಯ ಲೈಕ್ಸ್ ಮತ್ತು ಕಮೆಂಟ್ಸ್​​ಗಳನ್ನು ಗಳಿಸಿದೆ. ಏನೇ ಆದರೂ ಈ ರೀತಿ ಶಿಕ್ಷಕರಿಗೆ ಆವಾಜ್ ಹಾಕುವ ಹಾಗೆ ಯಾರೆಲ್ಲ ಲೀವ್ ಲೆಟರ್ ಬರೆಯಬೇಕು ಅಂದುಕೊಂಡಿದ್ದೀರಿ!! ನೀವು ಕೂಡ ಈ ಪ್ರಯೋಗ ಮಾಡಬಹುದೇನೋ!! ಆದರೆ ಮುಂದಾಗುವ ಪರಿಣಾಮ ಎದುರಿಸಲು ರೆಡಿ ಇದ್ದರೆ ಮಾತ್ರ!!

 

Leave A Reply