ತೆಂಗಿನೆಣ್ಣೆಗೆ ಈ ಒಂದು ವಸ್ತುವನ್ನು ಹಾಕಿ ನೋಡಿ, ನಿಮ್ಮ ಕೂದಲೂ ಹೇಗೆ ಬೆಳೆಯುತ್ತೆ ಅಂತ!
Hair growth : ಆರೋಗ್ಯವೇ ಭಾಗ್ಯ ಎಂಬಂತೆ ಪ್ರತಿಯೊಬ್ಬರು ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಾನಾ ರೀತಿಯ ಪ್ರಯೋಗಗಳನ್ನ ಮಾಡೋದು ಕಾಮನ್. ಮೀರಿ ಮಿರಿ ಮಿಂಚುವ ಕೇಶರಾಶಿ ಬೇಕೆಂದು ಯಾರು ತಾನೇ ಬಯಸಲ್ಲ ಹೇಳಿ!! ಹೌದು!! ನೋಡುಗರ ನೋಟ ಸೆಳೆಯುವಲ್ಲಿ ಕೂದಲು(Hair) ಕೂಡಾ ಮಹತ್ತರ ಪಾತ್ರ ವಹಿಸುತ್ತದೆ. ಅಷ್ಟೇ ಅಲ್ಲದೆ, ಕೇಶರಾಶಿ ಸೌಂದರ್ಯವನ್ನು(Beauty) ಕೂಡ ಹೆಚ್ಚಿಸುತ್ತದೆ. ಇಂದು ಹೆಚ್ಚಿನವರು ಅದು ಸ್ತ್ರೀಯರಾಗಿರಲಿ (Women) ಇಲ್ಲವೇ ಪುರುಷರಲ್ಲಿ(Men) ಕೂದಲು ಉದುರುವಿಕೆ(Hair fall) ಸಮಸ್ಯೆ(Problem) ಹೆಚ್ಚು ಕಂಡುಬರುತ್ತಿದೆ.
ಹೀಗೆ ಕೂದಲು ಉದುರಲು ಅನೇಕ ಕಾರಣಗಳಿದ್ದು(Reason)ಒತ್ತಡ ಮತ್ತು ಪೋಷಕಾಂಶಗಳ ಕೊರತೆಯು ಬಹು ಮುಖ್ಯ ಕಾರಣವಾಗಿದೆ. ಇದಲ್ಲದೆ ಹಾರ್ಮೋನ್(Hormon) ಅಸಮತೋಲನ, ಥೈರಾಯ್ಡ ಗ್ರಂಥಿಯ ನಿಷ್ಕ್ರಿಯತೆ, ಪೋಷಕಾಂಶಗಳ ಕೊರತೆ ಇಲ್ಲವೇ ವಂಶವಾಹಿ ಮೂಲಕ ಕೂಡ ಕೂದಲು ಉದುರುತ್ತದೆ. ಆದರೆ, ಈ ಸಮಸ್ಯೆಗೆ ನಾನಾ ಬಗೆಯ ಪ್ರಯೋಗ ನಡೆಸಿ ಪರಿಹಾರ ಮಾತ್ರ ಸಿಕ್ಕಿಲ್ಲ ಅಂತೀರಾ? ಹಾಗಿದ್ರೆ, ಕೂದಲು ಬೆಳೆಯಲು (Hair growth) ಸರಳ ಸಲಹೆ ( Hair growth Tips) ಅನುಸರಿಸಿ ರಿಸಲ್ಟ್ ನೀವೇ ಕಂಡುಕೊಳ್ಳಿ.
ಹೆಚ್ಚಿನವರಿಗೆ ಸಣ್ಣ ಪುಟ್ಟ ವಿಚಾರಕ್ಕೂ ಯೋಚಿಸಿ ಚಿಂತಿಸಿ ಏನು ಮಾಡೋದು ಎಂದು ತೋಚದೆ ಕೊರಗುವವರಿದ್ದಾರೆ. ನಾವು ಹೇಳುವ ಸರಳ ವಿಧಾನ ಅನುಸರಿಸಲು ನೀವೇನು ಹೆಚ್ಚು ವಸ್ತುಗಳನ್ನು ಬಳಕೆ ಮಾಡಬೇಕಾಗಿಲ್ಲ. ಕೇವಲ ತೆಂಗಿನೆಣ್ಣೆಯೊಂದಿಗೆ ಒಂದು ವಸ್ತುವನ್ನು ಬಳಕೆ ಮಾಡಿದರೆ ಸಾಕು ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಜೊತೆಗೆ ಕೂದಲು ಉದುರಿದ ಜಾಗದಲ್ಲಿ ಮತ್ತೆ ಕೂದಲು ಬೆಳೆಯುವಂತಾಗಿ ಸುಂದರ ಕೇಶರಾಶಿ ನಿಮ್ಮದಾಗಿಸಿಕೊಳ್ಳಬಹುದು.
ಇತ್ತೀಚಿನ ದಿನಗಳಲ್ಲಿ ಬಹುತೇಕ ಹೆಚ್ಚಿನವರು ಎದುರಿಸುತ್ತಿರುವ ಸಮಸ್ಯೆಯೆಂದರೆ ಕೂದಲು ಉದುರುವುದು. ಒಮ್ಮೆ ಕೂದಲು ಉದುರಲು ಆರಂಭವಾದರೆ, ಕೂದಲು ತೆಳ್ಳಗಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಕೂದಲು ಉದುರಿದ ಜಾಗದಲ್ಲಿ ಮತ್ತೆ ಕೂದಲು ಬೆಳೆಯದೆ ಬೋಳು ತಲೆಯ ಸಮಸ್ಯೆ ಕೂಡ ಉಂಟಾಗುತ್ತದೆ. ಆದರೆ ಈಗ ಕೂದಲು ಉದುರುವ ( Hair Fall) ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.ತೆಂಗಿನ ಎಣ್ಣೆ ಮತ್ತು ಅಲೋವೆರಾದ ಮಿಶ್ರಣವನ್ನು ಕೂದಲಿಗೆ ಹಚ್ಚುವ ಮೂಲಕ ಕೂದಲು ಉದುರುವ ಸಮಸ್ಯೆಯಿಂದ ಪಾರಾಗಬಹುದು.
ಅಲೋವೆರಾ ಜೆಲ್ ಮತ್ತು ತೆಂಗಿನ ಎಣ್ಣೆಯ ಮಿಶ್ರಣ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಇದಕ್ಕೆ ನೀವು ಮಾಡಬೇಕಾದ ಸರಳ ವಿಧಾನ ಹೀಗಿದೆ.
ಮೊದಲಿಗೆ 1 ಕಪ್ ನಲ್ಲಿ ತೆಂಗಿನ ಎಣ್ಣೆಯನ್ನು ಹಾಕಿಕೊಂಡು ಅದಕ್ಕೆ 4 ಚಮಚ ಅಲೋವೆರಾ ಜೆಲ್ ಸೇರಿಸಬೇಕು. ನಂತರ ಇದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಹೀಗೆ ತಯಾರಿಸಿಕೊಂಡ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿಕೊಳ್ಳಬೇಕು.ಕೂದಲಿಗೆ ಹಚ್ಚಿದ ಮಿಶ್ರಣವನ್ನು ರಾತ್ರಿಯಿಡೀ ಹಾಗೆಯೇ ಬಿಡಬೇಕು. ಹೀಗೆ ವಾರಕ್ಕೆ 3 ಬಾರಿ ಮಾಡಬೇಕು. ಮಾರನೇ ದಿನ ಬೆಳಗ್ಗೆ ಎದ್ದು ಮೈಲ್ಡ್ ಶಾಂಪೂವಿನ ಸಹಾಯದಿಂದ ಕೂದಲನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.
ಅಲೋವೆರಾ(Aloe vera)ತೆಂಗಿನ ಎಣ್ಣೆ ಕೂದಲಿಗೆ ಹೇಗೆ ಪ್ರಯೋಜನ ನೀಡುತ್ತದೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಇದಕ್ಕೆ ಉತ್ತರ ಇಲ್ಲಿದೆ ನೋಡಿ. ಅಲೋವೆರಾ ಮತ್ತು ತೆಂಗಿನ ಎಣ್ಣೆಯು ಆಂಟಿ ಬ್ಯಾಕ್ಟೀರಿಯಾ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಒಳಗೊಂಡಿದೆ. ಅಲೋವೆರಾ ಮತ್ತು ತೆಂಗಿನ ಎಣ್ಣೆಯ ಮಿಶ್ರಣ ಕೂದಲು ಕಿರುಚೀಲಗಳಿಗೆ ಪೋಷಣೆಯನ್ನು ನೀಡುತ್ತದೆ. ಆಮ್ಲಜನಕ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವ ರಕ್ತವು ಕೂದಲಿನ ಕಿರುಚೀಲಗಳನ್ನು ತಲುಪಲು ಅವಕಾಶ ಕಲ್ಪಿಸುತ್ತದೆ.ಹೀಗಾಗಿ, ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಣೆ ಕಂಡು ಹೀಗಾಗಿ ಕೂದಲು ಸದೃಢವಾಗಿ ಬೆಳೆಯುವ ಜೊತೆಗೆ ಕೂದಲಿಗೆ ಹೊಳಪು ಕೂಡ ಹೆಚ್ಚುತ್ತದೆ. ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಅಲೋವೆರಾ(Aloe vera) ಹೊಂದಿರುವ ಕಾರಣ ನೆತ್ತಿಯಿಂದ ಡೆಡ್ ಸೆಲ್ ಗಳನ್ನು ತೊಡೆದು ಹಾಕಲು ಸಾಧ್ಯವಾಗುತ್ತದೆ. ಇದಲ್ಲದೆ, ಎಣ್ಣೆಯ ಮೂಲಕ ಕೂದಲು ಬೇರಿನಿಂದ ಸ್ವಚ್ಛಗೊಳಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ, ಚರ್ಮದಲ್ಲಿ ತೇವಾಂಶವನ್ನು ರಕ್ಷಿಸಿ ಕೂದಲಿನಿಂದ ತಲೆಹೊಟ್ಟು, ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.