Government Employees Salary: ಶೇಕಡಾ 17ರಷ್ಟು ಸಂಬಳ ಏರಿಕೆ: ಯಾರಿಗೆಷ್ಟು ಸಿಗಲಿದೆ?

Government Employees Salary: 7ನೇ ವೇತನ ಆಯೋಗ (7th Pay Commission)ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಫಲ ಲಭಿಸಿದ್ದು,ರಾಜ್ಯ ಸರ್ಕಾರ (state government) ಮಧ್ಯಂತರ ಪರಿಹಾರದ ಆದೇಶ ನೀಡಿದೆ.

ಸರ್ಕಾರಿ ನೌಕರರ (state government employees) ಹೋರಾಟಕ್ಕೆ ಯಾರಿಗೂ ಹೆಚ್ಚು – ಕಡಿಮೆ ಎನ್ನದೇ ರಾಜ್ಯ 7ನೇ ವೇತನ ಆಯೋಗದ ಸರ್ಕಾರಿ ನೌಕರರ ಸಂಬಳ ಜಾಸ್ತಿ (Salary Hike) ಮಾಡುವ ಬೇಡಿಕೆಗೆ ರಾಜ್ಯ ಸರ್ಕಾರ ಮಧ್ಯಂತರ ಪರಿಹಾರ ಆದೇಶ ಹೊರಡಿಸಿದೆ. ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ನಡೆಸಿದ ಮಾತುಕತೆ ಹೆಚ್ಚು ಫಲಪ್ರದವಾಗಿಲ್ಲ. ಇದರಿಂದಾಗಿ ರಾಜ್ಯಾದ್ಯಂತ ಸರ್ಕಾರಿ ನೌಕರರು ಮುಷ್ಕರಕ್ಕೆ ಬೆಂಬಲ ನೀಡಿದ ಹಿನ್ನೆಲೆ ನೌಕರರ ಮನವೊಲಿಕೆ ಮಾಡಲು ಮುಂದಾಗಿದೆ. ಹೀಗಾಗಿ, ರಾಜ್ಯ ಸರ್ಕಾರಿ ನೌಕರರಿಗೆ ಮೂಲ ವೇತನದ (Basic Salary) ಶೇಕಡಾ 17ರಷ್ಟು ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರಿ ನೌಕರರು ಶೇ. 20ರಷ್ಟು ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದು, ಆದರೆ ಸರ್ಕಾರ ಶೇ.17ರಷ್ಟು ವೇತನ ಹೆಚ್ಚಿಸಿ ಆದೇಶ ಹೊರಡಿಸಿದೆ (Government Employees Salary). ಹಾಗಾದರೆ ಯಾರ ಸಂಬಳ ಎಷ್ಟು ಹೆಚ್ಚಾಗಲಿದೆ? ಶೇಕಡಾ 17ರಷ್ಟು ಏರಿಕೆಯ ಲೆಕ್ಕಾಚಾರ ಹೇಗಿರಲಿದೆ? ಎಂಬ ಅನುಮಾನಗಳಿಗೆ ಉತ್ತರ ಇಲ್ಲಿದೆ ನೋಡಿ!

ಸರಕಾರಿ ನೌಕರರಿಗೆ ಸಂಬಳ ಏರಿಕೆಯಾದರೂ ಕೆಲವು ಷರತ್ತುಗಳು ಅನ್ವಯವಾಗಲಿದೆ ಎನ್ನಲಾಗಿದೆ. 2023 ಏಪ್ರಿಲ್ 1 ರಿಂದ ಮೂಲ ವೇತನದಲ್ಲಿ ಶೇ.17ರಷ್ಟು ಹೆಚ್ಚಳವಾಗಲಿದ್ದು, 2018ರ ಪರಿಷ್ಕೃತ ವೇತನ ಶ್ರೇಣಿ ಆಧರಿಸಿ ಮಧ್ಯಂತರ ಪರಿಹಾರ ದೊರೆಯಲಿದೆ.ರಾಜ್ಯ ಸರ್ಕಾರಿ, ಸ್ಥಳೀಯ ಸಂಸ್ಥೆ, ಅನುದಾನಿತ ಶಿಕ್ಷಣ ಸಂಸ್ಥೆ, ವಿವಿಗಳ ಬೋಧಕೇತರ ಸಿಬ್ಬಂದಿಗೆ ಅನ್ವಯವಾಗಲಿದ್ದು, ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ,ಇದು ತಾತ್ಕಾಲಿಕ ಪರಿಹಾರ ಮೊತ್ತವಾಗಿದ್ದು, ಇದು ವಿಶಿಷ್ಟ ಸಂಭಾವನೆಯಾಗಿದೆ.

ನಿವೃತ್ತಿ ಸೌಲಭ್ಯ/ತುಟ್ಟಿ ಭತ್ಯೆ ನಿರ್ಧರಿಸುವಾಗ ಇದನ್ನು ಪರಿಗಣನೆ ಮಾಡುವುದಿಲ್ಲ. ಮೂಲ ವೇತನಕ್ಕೆ ಬೇರೆ ಯಾವುದೇ ಉಪಲಬ್ಧ ಸೇರಿಸುವುದಿಲ್ಲ ಎಂಬುದನ್ನು ಗಮನಿಸಬೇಕು.ರಾಜ್ಯ ಸರ್ಕಾರದ ನಿವೃತ್ತ ನೌಕರರು/ಕುಟುಂಬ ನಿವೃತ್ತಿದಾರರಿಗೆ ಮೂಲ ನಿವೃತ್ತಿ ವೇತನದಲ್ಲಿ ಶೇ.17ರಷ್ಟು ಹೆಚ್ಚಳವಾಗಲಿದೆ. ಯುಜಿಸಿ/ಎಐಸಿಟಿಇ/ಎನ್‍ಜೆಪಿಸಿ ವೇತನ ಶ್ರೇಣಿಯ ನೌಕರರಿಗೆ ಈ ವೇತನ ಹೆಚ್ಚಳ ಅನ್ವಯವಾಗುವುದಿಲ್ಲ.

ರಾಜ್ಯ ಸರ್ಕಾರಿ ನೌಕರರಿಗೆ 2023ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಮೂಲ ವೇತನದ ಶೇಕಡಾ 17ರಷ್ಟು ವೇತನ ಏರಿಕೆಯಾಗಲಿದೆ. ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲನೆ ನಡೆಸಲು 19.11.2022ರ 7ನೇ ರಾಜ್ಯವೇತನ ಆಯೋಗವನ್ನು ರಚಿಸಿ ಆದೇಶಗಳನ್ನು ಹೊರಡಿಸಲಾಗಿರುತ್ತದೆ.

ವೇತನ ಎಷ್ಟು ಏರಿಕೆಯಾಗಲಿದೆ?
ಮೂಲ ವೇತನ ಪ್ರಸ್ತುತ ತುಟ್ಟಿ ಭತ್ಯೆ 31% ಮಧ್ಯಂತರ ಪರಿಹಾರ 17%
17000 5270 2890
17400 5394 2958
17800 5518 3026
18200 5642 3094
18600 5766 3162
19050 5906 3239
19500 6045 3315
19950 6185 3392
20400 6324 3468

ರಾಜ್ಯ ಸರ್ಕಾರಿ ನೌಕರರಿಗೆ 2023ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ 2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ಮೂಲವೇತನದ ಶೇಕಡಾ 17ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ.
123300 38223 20961
126100 39091 21437
128900 39959 21913
132000 40920 22440
135100 41881 22967
138200 42842 23494
141300 43803 24021
144400 44764 24548
147500 45725 25075
150600 46686 25602

ರಾಜ್ಯ ಸರ್ಕಾರಿ ನೌಕರರ ಸಂಬಳ ಏರಿಕೆಗೆ ಕೊನೆಗೂ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಸರ್ಕಾರಿ ನೌಕರರ ಶೇಕಡಾ 20ರಷ್ಟು ಸಂಬಳ ಏರಿಕೆ ಬಗ್ಗೆ ನೌಕರರ ಬೇಡಿಕೆಗೆ ರಾಜ್ಯ ಸರ್ಕಾರ, ಶೇಕಡಾ 17ರಷ್ಟು ಸಂಬಳ ಏರಿಕೆಗೆ ಆದೇಶ ನೀಡಿದ್ದಾರೆ.

Leave A Reply

Your email address will not be published.