EPFO: ನಿವೃತ್ತಿ ಬಳಿಕ 18,857 ರೂಪಾಯಿ ಪಿಂಚಣಿ ದೊರಕುವಂತೆ ಮಾಡುವುದು ಹೇಗೆ?

EPFO :ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO) ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ. ಉದ್ಯೋಗಿಗಳ ಪಾಲಿಗೆ ಪಿಎಫ್ (PF) ಮೊತ್ತವು ಸಂಕಷ್ಟದ ಸಂದರ್ಭಗಳಲ್ಲಿ ಆರ್ಥಿಕ ನೆರವನ್ನು ನೀಡುತ್ತದೆ. ಕುಟುಂಬದ ಸದಸ್ಯರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ ಎಂದೇ ಹೇಳಬಹುದು. ಸದ್ಯ EPFO ಯೋಜನೆಯಡಿ ನಿವೃತ್ತಿ ಬಳಿಕ 18,857 ರೂಪಾಯಿ ಪಿಂಚಣಿ(pension) ಪಡೆಯುವುದು ಹೇಗೆ? ಎಂಬುದರ ಮಾಹಿತಿ ಇಲ್ಲಿ ನೀಡಲಾಗಿದೆ.

ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ ಸಂಸ್ಥೆಯ (EPFO) ಸದಸ್ಯರು ನಿವೃತ್ತಿಯ ಬಳಿಕ ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಅಧಿಕ ಪಿಂಚಣಿಯನ್ನು ಪಡೆಯಲು ಎಲ್ಲಾ ಅರ್ಹ ಅಭ್ಯರ್ಥಿಗಳು ಅರ್ಜಿ(application) ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 3, 2023 ರವರೆಗೆ ಅವಕಾಶವಿದೆ.

ಪ್ರಸ್ತುತ, ಉದ್ಯೋಗಿಗಳ ಶೇಕಡ 12ರಷ್ಟು ಮೂಲ ಆದಾಯ ಮತ್ತು ತುಟ್ಟಿಭತ್ಯೆ ಇಪಿಎಫ್‌ಗೆ ನೀಡಬೇಕಾಗುತ್ತದೆ. ಶೇಕಡ 12ರಲ್ಲಿ ಶೇಕಡ 8.33ರಷ್ಟು ಉದ್ಯೋಗಿಗಳ ಪಿಂಚಣಿ ಯೋಜನೆಯಲ್ಲಿ (ಇಪಿಎಸ್) ಉದ್ಯೋಗಿಗಳು ಕೊಡುಗೆ ನೀಡಿದರೆ, ಇಪಿಎಫ್‌ಗೆ ಶೇಕಡ 3.67ರಷ್ಟು ಉದ್ಯೋಗಿದಾತರು ನೀಡುತ್ತಾರೆ.

ಸರ್ಕಾರ 1995ರಲ್ಲಿನ ಇಪಿಎಫ್ ಕಾಯ್ದೆಯ ಸೆಕ್ಷನ್ 6A ಅಡಿಯಲ್ಲಿ , ಪಿಂಚಣಿ ಯೋಜನೆಗೆ ಉದ್ಯೋಗಿಗಳ ಕೊಡುಗೆ ಶೇಕಡ 8.33ರಷ್ಟು ಹಾಗೂ ಇಪಿಎಸ್-95 ಅಡಿಯಲ್ಲಿ 5-6 ಸಾವಿರ ಪಿಂಚಣಿ ಪಡೆಯಬಹುದು.

ನೀವು ಇಪಿಎಫ್‌ಒಗೆ ಪ್ರತಿ ತಿಂಗಳು 40,000 ರೂಪಾಯಿ ಬೇಸಿಕ್ ಪಾವತಿ ಎಂದಾದರೆ, ನೀವು ಮಾಸಿಕವಾಗಿ ಇಪಿಎಫ್‌ಗೆ ಶೇಕಡ 12ರಷ್ಟು ಅಂದ್ರೆ, 4800 ರೂಪಾಯಿ ಹೂಡಿಕೆ ಮಾಡಬೇಕು. ಇನ್ನು, ಉದ್ಯೋಗಿಗಳ ಪಿಂಚಣಿ ಯೋಜನೆಗೆ ಶೇಕಡ 12ರಷ್ಟು ಎಂದಾದರೆ ಉದ್ಯೋಗಿಗಳು 1250 ರೂಪಾಯಿ ಹೂಡಿಕೆ ಮಾಡಬೇಕು. ಉಳಿದಂತೆ 3550 ರೂಪಾಯಿ ಜಮೆಯಾಗುತ್ತದೆ.

ಅಧಿಕ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿದರೆ, ನೀವು ನಿವೃತ್ತಿ ಬಳಿಕ ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಬೇಸಿಕ್ ಸ್ಯಾಲರಿ ಸೇರಿದಂತೆ ತುಟ್ಟಿಭತ್ಯೆ ಅನ್ವಯವಾಗುವುದಾದರೆ, ನಿಮಗೆ 18,857 [(40000 ರೂ*33)/70] ರೂಪಾಯಿ ಪಿಂಚಣಿ ಸಿಗುತ್ತದೆ. ಆದರೆ, ಕಳೆದ 60 ತಿಂಗಳುಗಳಲ್ಲಿ 40,000 ರೂಪಾಯಿ ಆದಾಯವನ್ನು ಹೊಂದಿರಬೇಕಾಗುತ್ತದೆ.

Leave A Reply

Your email address will not be published.