ಒಂದು ನಯಾ ಪೈಸೆ ಖರ್ಚಿಲ್ಲದೆ ಪ್ರೇಮಿಕಾಳಿಗೆ ಗಿಫ್ಟ್ ಕೊಟ್ಟ ಯುವಕ! ಸಿಂಪ್ಲಿಸೂಪರ್ ಅಲ್ವೇ?
Necklace :ಸಂಗಾತಿಗಳಾಗಲಿ ಅಥವಾ ಪ್ರೇಮಿಗಳಾಗಲಿ ಪರಸ್ಪರ ಪ್ರೀತಿ ಹಂಚುವ ಜೊತೆಗೆ, ನೆನಪುಗಳನ್ನು(memory )ಉಳಿಸಿಕೊಳ್ಳಲು, ಕೆಲವು ಭಾವನೆಗಳನ್ನು (feelings )ತೊರ್ಪಡಿಸಿಕೊಳ್ಳಲು ಸಣ್ಣ ಪುಟ್ಟ ಉಡುಗೊರೆಗಳನ್ನು(gift )ನೀಡುವುದು ಸಹಜ. ಆದರೆ ದುಬಾರಿ ಉಡುಗೊರೆ(costly gift )ನೀಡಲು ಕೈ ತುಂಬಾ ಹಣ ಇರಬೇಕು ತಾನೇ. ಸದ್ಯ ಇಲ್ಲೊಬ್ಬ ಚಾಣಕ್ಯ ಖರ್ಚಿಲ್ಲದೇ ತನ್ನ ಸಂಗಾತಿಗೆ ಆಕರ್ಷಕ ಹೊಳೆಯುವ ನೆಕ್ಲೇಸ್ ಒಂದನ್ನು ಗಿಫ್ಟ್ ಮಾಡಿದ್ದಾನೆ.
ಹೇಗೆಂದು ನಿಮಗೆ ಕುತೂಹಲ ಇದ್ದೇ ಇರುತ್ತದೆ.
ಹೌದು ಉಡುಗೊರೆ ಎಂದರೆ ಕೇವಲ ಹಣ, ಒಡವೆ, ಮುಂತಾದವು ಅಲ್ಲ, ಮನಸ್ಸು ಇಷ್ಟಪಡುವ ರೀತಿ ಖುಷಿ ಪಡಿಸಬಹುದು.
ಸದ್ಯ ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದ ಜಾಂಗ್ ಎಂಬಾತ ತನ್ನ ಗೆಳತಿಗೆ ಬೆಳಕಿನ ಮೂಲಕ ಪ್ರತಿಬಿಂಬದಲ್ಲಿ ಕಾಣುವ ಸುಂದರ ವಿನ್ಯಾಸದ ನೆಕ್ಲೇಸ್ (Necklace) ಗಿಫ್ಟ್ ಮಾಡಿದ್ದು, ಇದೀಗಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈತ ತನ್ನ ಸಂಗಾತಿಗೆ ಒಂದು ಪೆಟ್ಟಿಗೆಯಲ್ಲಿ ಬಿಳಿ ಕಾಗದದ ತುಂಡನ್ನು ಇಟ್ಟು ಉಡುಗೊರೆಯಾಗಿ ನೀಡಿದ್ದಾನೆ. ಇದಾದ ಬಳಿಕ ಆಕೆಯನ್ನು ಹೊರಗಡೆ ಸೂರ್ಯನ ಬೆಳಕಿಗೆ ಕರೆದುಕೊಂಡು ಹೋಗಿ ತಾನು ಕ್ರಿಯಾತ್ಮಕವಾಗಿ ವಿನ್ಯಾಸಗಗೊಳಿಸಿದ ಬೆಳಕಿನ ಹಾರವನ್ನು ಬಿಳಿ ಕಾಗದದ ಪ್ರತಿಬಿಂಬದ ಮೂಲಕ ಆಕೆಗೆ ತೊಡಿಸಿದ್ದಾನೆ. ಸದ್ಯ ಸೂರ್ಯನ ಬಿಸಿಲಿಗೆ ಈ ಹಾರವು ಆಕೆಯ ಕೊರಳಲ್ಲಿ ವಜ್ರದ ಹೊಳಪಿಗಿಂತ ಕಮ್ಮಿ ಇಲ್ಲ ಅನ್ನೋ ಹಾಗಿತ್ತು. ಆಕೆ ಸಹ ಇದರಿಂದ ಅಪಾರ ಖುಷಿಗೊಂಡಿದ್ದಾಳೆ.
ಈ ಸುಂದರ ಬೆಳಕಿನ ಪ್ರತಿಬಿಂಬಕದ ಹಾರವನ್ನು ಬಿಳಿ ಹಾಳೆಯ ಮೇಲೆ ವಿನ್ಯಾಸಗೊಳಿಸಲು ಆತ ಎರಡು ದಿನಗಳನ್ನು ತೆಗೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಡೌಯಿನ್‌ನಲ್ಲಿ ಜಾಂಗ್ ಅಪ್‌ಲೋಡ್ ಮಾಡಿದ ನೆಕ್ಲೇಸ್‌ನ ವೀಡಿಯೊವನ್ನು ಹಲವಾರು ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಣೆಗೊಂಡಿದೆ. ಜೊತೆಗೆ ಸಾವಿರಾರು ಕಾಮೆಂಟ್ಗಳನ್ನು ಮಾಡಲಾಗಿದೆ.
ಈತ ಕಳೆದ ವರ್ಷ ತನ್ನ ಸ್ನೇಹಿತೆಗಾಗಿ ಕಾಗದದ ಕೊರೆಯಚ್ಚು ಬಳಸಿ ಹಗುರವಾದ “ಡೈಮಂಡ್ ರಿಂಗ್” ನೀಡಿದ್ದರು ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಪ್ರೀತಿಗೆ ಪ್ರೀತಿಯೇ ಸಾಟಿ. ಕಲ್ಪನೆಯಲ್ಲೂ ಕೆಲವೊಮ್ಮೆ ಅಘಾದ ಖುಷಿಯಿದೆ ಅನ್ನೋದು ಈ ಮೂಲಕ ನಾವು ತಿಳಿದುಕೊಳ್ಳಬಹುದು.