Earbuds : ಬಜೆಟ್ ಫ್ರೆಂಡ್ಲಿ ಇಯರ್‌ಬಡ್ಸ್ ಮಾರುಕಟ್ಟೆಗೆ! ಡಿಸ್ಕೌಂಟ್‌ಗಳ ಸುರಿಮಳೆ!!
Truke Buds A1 : ಮೊಬೈಲ್(Mobile) ಎಂಬ ಮಾಯಾವಿ ಬಹುತೇಕ ಹೆಚ್ಚಿನವರ ಪಾಲಿನ ಅವಿಭಾಜ್ಯ ಅಂಗವಾಗಿ ಬಿಟ್ಟಿವೆ. ಅದರಲ್ಲಿಯೂ ಹೊಸ ಹೊಸ ವೈಶಿಷ್ಟ್ಯತೆ ಮೂಲಕ ಸ್ಮಾರ್ಟ್ ಫೋನ್ (Smart Phone ) ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಸ್ಮಾರ್ಟ್ ಫೋನ್ ಬಳಕೆ ಮಾಡುವಾಗ ಎಲ್ಲರ ನೆಚ್ಚಿನ ಇಯರ್‌ಬಡ್ಸ್( Earbuds), ಹೆಡ್ ಫೋನ್ಸ್( Head Phones) ಇಯರ್ ಫೋನ್ ( Earphones) ಆಡಿಯೋ ಡಿವೈಸ್‌ಗಳಿಗೆ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಡಿಮ್ಯಾಂಡ್!! ಇದಕ್ಕೆ ನಿದರ್ಶನ ಎಂಬಂತೆ ಯಾರನ್ನೇ ನೋಡಿದರೂ ಅವರ ಕುತ್ತಿಗೆ, ಕಿವಿಯಲ್ಲಿ ಆಡಿಯೋ ಡಿವೈಸ್ ಗಳು ನೇತಾಡುತ್ತಿರುವುದನ್ನು ಗಮನಿಸಿರಬಹುದು. ಜನರ ಬೇಡಿಕೆಗೆ ಅನುಗುಣವಾಗಿ ಕಂಪನಿಗಳು ಕೈಗೆಟಕುವ ದರದಲ್ಲಿ ಇಯರ್ ಬಡ್ಸ್ (Earbuds) ಗಳನ್ನ ಬಿಡುಗಡೆ ಮಾಡುತ್ತಿವೆ.
ಟ್ರೂಕ್ (Truke )ಸಂಸ್ಥೆಯು ಹೊಸದಾಗಿ ಪರಿಚಯಿಸಿರುವ ಬಡ್ಸ್( A1 TWS new Buds A1 TWS)ಡಿವೈಸ್ ಆಗಿದ್ದು, ಇದು ಅಂಡಾಕಾರದ-ಆಕಾರದ ವಿನ್ಯಾಸದ ಕ್ಲಾಸಿಕ್ ಕೇಸ್ ವಿನ್ಯಾಸ ಹೊಂದಿದ್ದು, 30dB ವರೆಗಿನ ಹೈಬ್ರಿಡ್ ವಾಯ್ಸ್ ಕ್ಯಾನ್ಸ(ANC) ಬೆಂಬಲ ಆಕರ್ಷಣೀಯವಾಗಿದೆ. ಇದು ಒಳಗೆ ನ ಇತರ ಬ್ರ್ಯಾಂಡ್ ಡಿವೈಸ್‌ಗಳಿಗೆ ಸುಮಾರು 2,000ರೂಪಾಯಿಗಳಿಗೆ ಪೈಪೋಟಿ ನೀಡುತ್ತದೆ.
ಟ್ರೂಕ್ ಎ1 ಫೀಚರ್ಸ್: (Truke Buds A1: Specs and Features):
ನೂತನ ಟ್ರೂಕ್ ಬಡ್ಸ್ A1 ಡಿವೈಸ್ ಇನ್-ಇಯರ್ ಶೈಲಿಯ ಟ್ರೂ ವೈರ್‌ಲೆಸ್ ಇಯರ್‌ಬಡ್‌ಗಳಾಗಿವೆ. ಟ್ರೂಕ್ ಬಡ್ಸ್ A1 ಡಿವೈಸ್ ಇಯರ್‌ಬಡ್‌ಗಳು 10mm ರಿಯಲ್ ಟೈಟಾನಿಯಂ ಸ್ಪೀಕರ್ ಡ್ರೈವರ್‌ಗಳನ್ನು ಹೊಂದಿವೆ. ಟ್ರೂಕ್ ಬಡ್ಸ್ A1 ಡಿವೈಸ್ ಬ್ಲೂಟೂತ್ ಆವೃತ್ತಿ 5.3 ನೊಂದಿಗೆ ಕೆಲ್ಸ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು, ಈ ಮೂಲಕ ಇತರೆ ಡಿವೈಸ್‌ಗಳಿಗೆ ಬೇಗನೆ ಪೇರಿಂಗ್ ಕೂಡ ಆಗುತ್ತವೆ. ಕಡಿಮೆ ಲ್ಯಾಗ್‌ಗಳಿಗಾಗಿ 50ms ಕಡಿಮೆ ಲೇಟೆನ್ಸಿ ಗೇಮಿಂಗ್ ಮೋಡ್ ಕೂಡ ಇದ್ದು, ಇಯರ್‌ಬಡ್‌ಗಳು 48 ಗಂಟೆಗಳವರೆಗೆ ಒಟ್ಟು ಪ್ಲೇಬ್ಯಾಕ್ ಸಮಯವನ್ನು ನೀಡುತ್ತವೆ.
ಈ ಆಡಿಯೋ ಟ್ರೂಕ್ ಬಡ್ಸ್ A1 (Truke Buds A1)ಡಿವೈಸ್ ಆಂಬಿಯೆಂಟ್ ಟ್ರಾನ್ಸ್ಪರೆನ್ಸಿ ಮೋಡ್ ಅವಶ್ಯಕತೆ ಇದ್ದಾಗ ಶಬ್ದಗಳನ್ನು ಅನುಮತಿಸಲು ನೆರವಾಗುತ್ತವೆ. ಅಷ್ಟೇ ಅಲ್ಲದೆ, ಕ್ವಾಡ್-ಮೈಕ್ ಸೆಟಪ್ ಸಹ ಇದ್ದು, ಸ್ಪಷ್ಟವಾದ ಕರೆಗಳಿಗಾಗಿ ENC ಸೌಲಭ್ಯ ಅನ್ನು ಬೆಂಬಲಿಸುತ್ತದೆ.ENC (environmental noise cancellation) ವಿಶೇಷತೆಯನ್ನು ಕೂಡ ಒಳಗೊಂಡಿದೆ. ಇನ್ನೂ ಇದರ ಬೆಲೆ ಎಷ್ಟು?
ಬೆಲೆ ಮತ್ತು ಲಭ್ಯತೆ(Price and Availability):
ಟ್ರೂಕ್ ಬಡ್ಸ್ A1 ಡಿವೈಸ್ ರಿಟೇಲ್ ಸ್ಟೋರ್ ಬೆಲೆಯು 1,499 ರೂಪಾಯಿ ಹೊಂದಿದ್ದು, ಆದರೆ ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಆರಂಭಿಕವಾಗಿ 1,299 ರೂಪಾಯಿಯ ಲಭ್ಯವಿರಲಿದೆ. ಅಷ್ಟೆ ಅಲ್ಲ ಕಣ್ರೀ!ನೀವು ಈ ಡಿವೈಸ್ ಖರೀದಿ ಮಾಡಬೇಕು ಅಂದುಕೊಂಡರೆ ಇದೇ ಮಾರ್ಚ್ 3 ರಿಂದ ಖರೀದಿಗೆ ಕೂಡ ಲಭ್ಯವಾಗಲಿದೆ. ಕಪ್ಪು ಮತ್ತು ನೀಲಿ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದ್ದು, ಖರೀದಿದಾರರು ಅಮೆಜಾನ್ ಇಂಡಿಯಾ ಮೂಲಕ ಪ್ರೀ ಆರ್ಡರ್ ಮಾಡಬಹುದಾಗಿದೆ.
ಟ್ರೂಕ್ ಬಡ್ಸ್ A1( Truke Buds A1)ಡಿವೈಸ್ ಯುಎಸ್ಬಿ ಟೈಪ್ ಸಿ ಆಧಾರಿತ ಫಾಸ್ಟ್ ಚಾರ್ಜಿಂಗ್ ವಿಶೇಷತೆ ಹೊಂದಿದ್ದು, ಕೇವಲ ಇದು 10 ನಿಮಿಷಗಳಷ್ಟು ಚಾರ್ಜ್ ಮಾಡಿದರೆ, ಈ ಸಾಧನವು ಸುಮಾರು 10 ಗಂಟೆಗಳವರೆಗೆ ಪ್ಲೇ ಬ್ಯಾಕ್ ಸಮಯವನ್ನು ಒದಗಿಸುತ್ತದೆ. ಈ ಸಾಧನವು ಡೈನಾಮಿಕ್ ಆಡಿಯೊ, ಬಾಸ್ ಬೂಸ್ಟ್ ಮೋಡ್, ಮೂವೀ ಮೋಡ್ ಇದರೊಂದಿಗೆ ಡೀಫಾಲ್ಟ್ ಬ್ಯಾಲೆನ್ಸ್‌ಡ್ ಮೋಡ್ ಅಂತಹ ನಾಲ್ಕು EQ ಮೋಡ್‌ಗಳಿಗೆ ಬೆಂಬಲವನ್ನು ಕೂಡ ಹೊಂದಿದೆ.