SBI Recruitment: ಸ್ಟೇಟ್ ಬ್ಯಾಂಕ್​​ನಲ್ಲಿ ಉದ್ಯೋಗವಕಾಶ ; 40 ಲಕ್ಷದವರೆಗೆ ಸಂಬಳ

SBI Recruitment 2023: ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ(Job) ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲ್ಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಾಗೆಂದ ಮಾತ್ರಕ್ಕೆ ಉದ್ಯೋಗದ (employment) ವಿಷಯದಲ್ಲಿ ಅನೇಕ ಅವಕಾಶದ ಬಾಗಿಲುಗಳು ತೆರೆದಿದ್ದು ಇವುಗಳ ಕುರಿತಂತೆ ಮಾಹಿತಿ ಎಷ್ಟೋ ಮಂದಿಗೆ ತಿಳಿದಿಲ್ಲ ಎನ್ನುವುದು ಅಷ್ಟೆ ಸತ್ಯ. ಸದ್ಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಅರಸುತ್ತಿರುವ ಅಭ್ಯರ್ಥಿಗಳಿಗೆ ಬಹು ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ.

ಭಾರತೀಯ ಸ್ಟೇಟ್ ಬ್ಯಾಂಕ್(State Bank of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾದ(SBI Recruitment 2023) ಒಟ್ಟು 8 ಮ್ಯಾನೇಜರ್(Manager), ಫ್ಯಾಕಲ್ಟಿ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮಾರ್ಚ್​ 15, 2023 ರ ಮೊದಲೇ ಅರ್ಜಿ ಸಲ್ಲಿಸಬಹುದು.

ಅಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಖಾಲಿ ಹುದ್ದೆಗಳು,ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ಈ ಕುರಿತ ಮಾಹಿತಿ ಇಲ್ಲಿ ನೀಡಲಾಗಿದೆ.

ಹುದ್ದೆಗಳು:
ಸಂಸ್ಥೆ – ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾ
ಹುದ್ದೆ – ಮ್ಯಾನೇಜರ್, ಫ್ಯಾಕಲ್ಟಿ
ಒಟ್ಟು – ಹುದ್ದೆ 8

ಹುದ್ದೆಯ ಮಾಹಿತಿ:
ಮ್ಯಾನೇಜರ್ (ರೀಟೈಲ್ ಪ್ರೊಡಕ್ಟ್​) – 5
ಫ್ಯಾಕಲ್ಟಿ (ಎಕ್ಸಿಕ್ಯೂಟಿವ್ ಎಜುಕೇಷನ್)- 2
ಸೀನಿಯರ್ ಎಕ್ಸಿಕ್ಯೂಟಿವ್ (ಸ್ಟ್ಯಾಟಿಸ್ಟಿಕ್ಸ್​)- 1
ಅರ್ಜಿ ಸಲ್ಲಿಸಲು ಕೊನೆಯ ದಿನ – ಮಾರ್ಚ್​​ 15, 2023

ಪ್ರಮುಖ ದಿನಾಂಕಗಳು
ಭಾರತೀಯ ಸ್ಟೇಟ್ ಬ್ಯಾಂಕ್(SBI Recruitment 2023 ) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 23/02/2023 ಆರಂಭಿಕ ದಿನವಾಗಿದ್ದು, ಅರ್ಜಿ ಸಲ್ಲಿಸಲು & ಅರ್ಜಿ ಶುಲ್ಕ ಪಾವತಿಸಲು ಮಾರ್ಚ್​ 15, 2023 ಕೊನೆಯ ದಿನವಾಗಿದೆ.
ವೇತನ – 25 ಲಕ್ಷ-40 ಲಕ್ಷ (ವಾರ್ಷಿಕ ಪ್ಯಾಕೇಜ್)

ಅರ್ಜಿ ಶುಲ್ಕ:
SC/ST/PWD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಸಾಮಾನ್ಯ/ EWS/OBC ಅಭ್ಯರ್ಥಿಗಳು 750 ರೂ. ಪಾವತಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ವಿದ್ಯಾರ್ಹತೆ
ಮ್ಯಾನೇಜರ್ (ರೀಟೈಲ್ ಪ್ರೊಡಕ್ಟ್​) ಹುದ್ದೆಗೆ ಆರ್ಹ ಅಭ್ಯರ್ಥಿಗಳು ಎಂಬಿಎ, ಪಿಜಿಡಿಎಂ, ಪಿಜಿಪಿಎಂ ವಿದ್ಯಾರ್ಹತೆ ಹೊಂದಿರಬೇಕು.
ಫ್ಯಾಕಲ್ಟಿ (ಎಕ್ಸಿಕ್ಯೂಟಿವ್ ಎಜುಕೇಷನ್) ಹುದ್ದೆಗೆ ಎಂಬಿಎ, ಸ್ನಾತಕೋತ್ತರ ಪದವಿ, ಪಿಚ್​.ಡಿ ಪದವಿ ಆಗಿರಬೇಕು.
ಸೀನಿಯರ್ ಎಕ್ಸಿಕ್ಯೂಟಿವ್ (ಸ್ಟ್ಯಾಟಿಸ್ಟಿಕ್ಸ್​) ಹುದ್ದೆಗೆ CSE/IT ಯಲ್ಲಿ ಬಿ.ಟೆಕ್, ಸ್ನಾತಕೋತ್ತರ ಪದವಿ ಹೊಂದಿರಬೇಕು.

ವಯೋಮಿತಿ:
ಮ್ಯಾನೇಜರ್ (ರೀಟೈಲ್ ಪ್ರೊಡಕ್ಟ್​) ಹುದ್ದೆಗೆ ಅರ್ಹ ಅಭ್ಯರ್ಥಿಗಳ ವಯೋಮಿತಿ 28 ರಿಂದ 38 ವರ್ಷ ಗಳಾಗಿರಬೇಕು.
ಫ್ಯಾಕಲ್ಟಿ (ಎಕ್ಸಿಕ್ಯೂಟಿವ್ ಎಜುಕೇಷನ್) ಹುದ್ದೆಗೆ ಅರ್ಹ ಅಭ್ಯರ್ಥಿಗಳ ವಯೋಮಿತಿ 28 ರಿಂದ 55 ವರ್ಷ ಗಳಾಗಿರಬೇಕು.
ಸೀನಿಯರ್ ಎಕ್ಸಿಕ್ಯೂಟಿವ್ (ಸ್ಟ್ಯಾಟಿಸ್ಟಿಕ್ಸ್​)ಹುದ್ದೆಗೆ ಅರ್ಹ ಅಭ್ಯರ್ಥಿಗಳ ವಯೋಮಿತಿ 25 ರಿಂದ 35 ವರ್ಷಗಳಾಗಿರಬೇಕು.

ಆಯ್ಕೆ ಪ್ರಕ್ರಿಯೆ:
ಅರ್ಹ ಅಭ್ಯರ್ಥಿಗಳಿಗೆ ಶಾರ್ಟ್​​ಲಿಸ್ಟಿಂಗ್ (Shortlist), ಇಂಟರ್ಯಾಕ್ಷನ್( Interaction),ಲಿಖಿತ ಪರೀಕ್ಷೆ( Written exam),ಸಂದರ್ಶನ (Interview) ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.

ವೇತನ:
ಮ್ಯಾನೇಜರ್ (ರೀಟೈಲ್ ಪ್ರೊಡಕ್ಟ್​) ಹುದ್ದೆಗೆ ಮಾಸಿಕ ₹ 63,840-78,230 ವೇತನವಿರಲಿದೆ.
ಫ್ಯಾಕಲ್ಟಿ (ಎಕ್ಸಿಕ್ಯೂಟಿವ್ ಎಜುಕೇಷನ್)ಹುದ್ದೆಗೆ 25 ಲಕ್ಷ-40 ಲಕ್ಷ (ವಾರ್ಷಿಕ ಪ್ಯಾಕೇಜ್)ವೇತನವಿರಲಿದೆ.
ಸೀನಿಯರ್ ಎಕ್ಸಿಕ್ಯೂಟಿವ್ (ಸ್ಟ್ಯಾಟಿಸ್ಟಿಕ್ಸ್​) ಹುದ್ದೆಗೆ 15 ಲಕ್ಷ- 20 ಲಕ್ಷ (ವಾರ್ಷಿಕ ಪ್ಯಾಕೇಜ್) ವೇತನವಿರಲಿದೆ.

ಆಸಕ್ತ ಅಭ್ಯರ್ಥಿಗಳು ಮೇಲೆ ತಿಳಿಸಿದ ಹುದ್ದೆಗಳ ಮಾಹಿತಿ ತಿಳಿದುಕೊಂಡು ಮಾರ್ಚ್​ 15, 2023 ಕೊನೆಯ ದಿನಾಂಕದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

Leave A Reply

Your email address will not be published.