Bengaluru :ಉದ್ಯಾನ ನಗರಿಯಲ್ಲಿ ತಲೆ ಎತ್ತಿದ ಸ್ಮಾರ್ಟ್ ಬಸ್ ನಿಲ್ದಾಣ! ಏನಿದರ ವಿಶೇಷತೆ ಗೊತ್ತಾ?
Smart Bus : ಉದ್ಯಾನ ನಗರಿ ಬೆಂಗಳೂರಿ(Bangalore) ನಲ್ಲಿ ಸ್ಮಾರ್ಟ್(Smart) ಯುಗಕ್ಕೆ ತಕ್ಕಂತೆ ನಗರದ ಎಲೆಕ್ಟ್ರಾನಿಕ್ ಸಿಟಿ(Electric City) ಯಲ್ಲಿ ಸ್ಮಾರ್ಟ್ ಬಸ್(Smart Bus) ನಿಲ್ದಾಣವೊಂದನ್ನ ನಿರ್ಮಿಸಲಾಗಿದೆ. ಫೆಬ್ರವರಿ 27ರಂದು ಇದರ ಉದ್ಘಾಟನೆ ಕೂಡ ನೆರವೇರಿದೆ. ಈ ಕುರಿತು ELCITA ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಉದ್ಘಾಟನೆಯ ದೃಶ್ಯಗಳನ್ನು ಹಂಚಿಕೊಂಡಿದೆ. ಇನ್ನು ಮೊನ್ನೆ ತಾನೆ ಉದ್ಘಾಟನೆಗೊಂಡ ಈ ಈ ಬಸ್ ನಿಲ್ದಾಣದ ವಿಶೇಷತೆ ಏನು ಗೊತ್ತಾ?
ಹೌದು, ಈ ಸ್ಮಾರ್ಟ್ ಬಸ್ ನಿಲ್ದಾಣ, ಜನಸ್ನೇಹಿ ಬಸ್ ನಿಲ್ದಾಣವಾಗುವತ್ತ ಪುಟ್ಟ ಹೆಜ್ಜೆಯನ್ನಿಟ್ಟಿದ್ದು, ಇದರ ವಿಶೇಷತೆಗಳು ಎಲ್ಲರೂ ಮೆಚ್ಚುವಂತದ್ದಾಗಿದೆ. ಇಲ್ಲಿ ಬಸ್ನ ನಿಖರವಾದ ಸಮಯದ ಬಗ್ಗೆ ಮಾಹಿತಿಯನ್ನ ತೋರಿಸಲಾಗುತ್ತದೆ. ಜೊತೆಗೆ ಇದು ಮಾರ್ಗ ನಕ್ಷೆಯನ್ನು ಕೂಡ ತೋರಿಸುತ್ತದೆ. ಇಲ್ಲಿ ವೆಂಡಿಂಗ್ ಮಷೀನ್ ಅಳವಡಿಸಲಾಗಿದೆ. ಜೊತೆಗೆ ಫೋನ್ ಮತ್ತು ಲ್ಯಾಪ್ಟಾಪ್ಗಳಿಗೆ ಚಾರ್ಜರ್ ವ್ಯವಸ್ಥೆ ಕೂಡ ಮಾಡಲಾಗಿದ್ದು, ಬಸ್ ಮಾರ್ಗಗಳು ಹಾಗೂ ಅವುಗಳ ನಿಖರ ಸಮಯವನ್ನ ಇಲ್ಲಿ ಪರಿಶೀಲಿಸಬಹುದಾಗಿದೆ.
ಅಲ್ಲದೆ ಈ ಸ್ಮಾರ್ಟ್ ಬಸ್ ನಿಲ್ದಾಣವು ಸ್ಮಾರ್ಟ್ ಡಸ್ಟ್‌ಬಿನ್‌ಗಳನ್ನು ಹೊಂದಿದ್ದು, ಅದು 70% ತುಂಬಿದಾಗ ಎಚ್ಚರಿಕೆಗಳನ್ನು ಕಳುಹಿಸುತ್ತದೆ. ಎಲ್ಲರ ಸುರಕ್ಷತೆಗಾಗಿ ಬಸ್ ನಿಲ್ದಾಣದಲ್ಲಿ ಎರಡು ಸಿಸಿಟಿವಿ ಕ್ಯಾಮೆರಾಗಳು ಮತ್ತು ದ್ವಿಮುಖ SOS ವ್ಯವಸ್ಥೆಯನ್ನ ಮಾಡಲಾಗಿದೆ. ‘ಸ್ಮಾರ್ಟ್’ ಜೊತೆಗೆ ಬಸ್ ನಿಲ್ದಾಣವು ‘ಹಸಿರು’ ಆಗಿದೆ. ಸ್ಮಾರ್ಟ್ ಉದ್ಯಾನವನ್ನು ಕೂಡ ಇಲ್ಲಿ ಸ್ಥಾಪಿಸಲಾಗಿದೆ.
ಈ ಕುರಿತು ಟ್ವೀಟ್ ಮಾಡಿದ ELCITA ‘ಇಂದು ನಮ್ಮ ಇ-ನಗರದಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಹೊಸ ಯುಗ ಆರಂಭವಾಗಿದೆ. ಶ್ರೀಮತಿ ಸತ್ಯವತಿ ಜಿ. IAS (ವ್ಯವಸ್ಥಾಪಕ ನಿರ್ದೇಶಕರು, BMTC), ಮತ್ತು ಡಾ ಎಂಎ ಸಲೀಂ IPS, (ಬೆಂಗಳೂರು ನಗರ ಸಂಚಾರಿ ವಿಶೇಷ ಪೊಲೀಸ್ ಆಯುಕ್ತರು), ಮೊದಲ ಸ್ಮಾರ್ಟ್ ಬಸ್ ನಿಲ್ದಾಣವನ್ನು ಉದ್ಘಾಟಿಸಿದರು. ಜೊತೆಗೆ ಮೊದಲ ಬಸ್ ಅನ್ನು ಸ್ಮಾರ್ಟ್ ಬಸ್ ನಿಲ್ದಾಣದಿಂದ ಇಬ್ಬರೂ ಗೌರವಾನ್ವಿತ ಅತಿಥಿಗಳು ಫ್ಲ್ಯಾಗ್ ಆಫ್ ಮಾಡಿದರು. ಎಂದು ಹೇಳಿದೆ.