ರೋಹಿಣಿ ಸಿಂಧೂರಿ ಹಾಗೂ ಡಿ.ರೂಪಾ ಜಟಾಪಟಿ : ರೂಪಾ ವಿರುದ್ಧ 1 ಕೋಟಿ ರೂ.ಮಾನನಷ್ಟ ಕೇಸ್‌ ದಾಖಲಿಸಿದ ರೋಹಿಣಿ ಸಿಂಧೂರಿ

Rohini Sindhuri-D Roopa :ಕೆಲ ದಿನಗಳಿಂದ ಐಪಿಎಸ್ ರೂಪಾ ಮತ್ತು ಐಎಎಸ್‌ ರೋಹಿಣಿ ಸಿಂಧೂರಿ ನಡುವಿನ ವಾಗ್ಸಮರ ಜೋರಾಗಿದ್ದು, ಉಳಿದವರಿಗೆ ಮಾದರಿಯಾಗಬೇಕಾದವರೆ ಬೀದಿ ಜಗಳ ಮಾಡಿಕೊಂಡು ನೋಡುಗರ ಪಾಲಿಗೆ ಹಾಸ್ಯಾಸ್ಪದ ಸಂಗತಿ ಯಾಗಿ ಪರಿಣಮಿಸಿದ್ದಾರೆ. ಸದ್ಯ, ಸರ್ಕಾರ ನೋಟೀಸ್ ನೀಡಿದ ಹಿನ್ನೆಲೆ ಇವರಿಬ್ಬರ ಜಗಳಕ್ಕೆ ಅಲ್ಪ ವಿರಾಮ ದೊರೆತಿದ್ದು, ಇದೀಗ ರೋಹಿಣಿ ಸಿಂಧೂರಿ ಡಿ.ರೂಪಾ ಮೌದ್ಗಿಲ್ ಗೆ ಹೊಸ ಆಟೋ ಬಾಂಬ್ ಸಿಡಿಸಲು ಅಣಿಯಾಗಿದ್ದಾರೆ.

ರೋಹಿಣಿ ಸಿಂಧೂರಿ( Rohini Sindhuri)(D Roopa)ಕೆಲಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದು, ತನ್ನ ವಿರುದ್ದ ಫೇಸ್ ಬುಕ್,ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ಸುಳ್ಳು ಸುದ್ದಿ ಬಿತ್ತರಿಸುತ್ತಿರುವ ಕುರಿತು ಆರೋಪಿಸಿ ಮೂಲ ಮಾನಹಾನಿ ಮಾಡಿದ್ದಾರೆ ಎಂದು ನಗರದ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಕೇಸ್ ದಾಖಲು ಮಾಡಿದ್ದಾರೆ.ಎಂದು ತಿಳಿದು ಬಂದಿದೆ.

ಕೆಲ ದಿನಗಳಿಂದ ರೋಹಿಣಿ ಸಿಂಧೂರಿ ಹಾಗೂ ಡಿ.ರೂಪ(Rohini Sindhuri-D Roopa) ಅವರಿಬ್ಬರ ಜಗಳ ಮಾಧ್ಯಮಗಳ ಪಾಲಿಗೆ ಹಾಟ್ ಟಾಪಿಕ್ ಆಗಿ ಬಿಟ್ಟಿದ್ದು, ಇವರಿಬ್ಬರ ನಡುವಿನ ಕಿತ್ತಾಟ ದಿನೇ ದಿನೇ ಹೊಸ ರೂಪ ಪಡೆದುಕೊಳ್ಳುತ್ತಿದೆ. ಡಿ ರೂಪಾ ಅವರು ರೋಹಿಣಿ ಸಿಂಧೂರಿ ವಿರುದ್ಧ ತಮ್ಮ ಫೇಸ್ ಬುಕ್ ಖಾತೆಯಲ್ಲಿ ನಾನಾ ರೀತಿಯ ಆರೋಪ ಮಾಡಿ ತನ್ನ ವೈಯಕ್ತಿಕ ಹಾಗೂ ವೃತ್ತಿ ಜೀವನದ ಮೇಲೆ ಪ್ರಭಾವ ಬೀರುತ್ತಿರುವ ಕುರಿತು ರೋಹಿಣಿ ಸಿಂಧೂರಿ ಆರೋಪಿಸಿದ್ದಾರೆ.

ಇದಲ್ಲದೇ, ಐಎಎಸ್‌ ನಿಯಮಗಳಿಗೆ ವಿರುದ್ದವಾಗಿ ಡಿ. ರೂಪ ಅವರು ಮಾಧ್ಯಮಗಳ ಮುಂದೆ ಆರೋಪ ಮಾಡಿದ್ದು, ಈ ರೀತಿ ಇಲ್ಲ ಸಲ್ಲದ ಆರೋಪಗಳಿಂದ ತನ್ನ ಖಾಸಗಿ ಜೀವನಕ್ಕೆ ಹಾಗೂ ಸರಕಾರಕ್ಕೂ ಕೂಡ ಇರುಸು ಮುರುಸು ಉಂಟಾಗಿದೆ. ಹೀಗಾಗಿ, ತನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಕ್ಕಾಗಿ ಡಿ ರೂಪಾ ಅವರು ಮಾನನಷ್ಟಕ್ಕೆ(Defamation Case) ಒಂದು ಕೋಟಿ ರು. ಪರಿಹಾರವಾಗಿ ನೀಡಬೇಕು ಎಂದು ರೋಹಿಣಿ ಸಿಂಧೂರಿ ಆಗ್ರಹಿಸಿದ್ದು, ಇದಲ್ಲದೆ, ಡಿ.ರೂಪಾ ಅವರ ವಿರುದ್ಧ ಸೂಕ್ತ ದಂಡನೀಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿ ನಗರದ 24ನೇ ಎಸಿಎಂಎಂ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ( Defamation Case)ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಇನ್ನೂ ಐಎಎಸ್‌(IAS) ಅಧಿಕಾರಿ ರೋಹಿಣಿ ಸಿಂಧೂರಿ ಅವರ ಪರವಾಗಿ ವಕೀಲ ಸಿ.ವಿ.ನಾಗೇಶ್‌ ಅವರು ವಾದ ಮಂಡಿಸಿದ್ದಾರೆ. ಸದ್ಯ, ರೋಹಿಣಿ ಸಿಂಧೂರಿ ಅವರ ದೂರನ್ನು ಪರಿಗಣಿಸಿ ನ್ಯಾಯಾಧೀಶ ಬಿ.ಸಿ. ಚಂದ್ರಶೇಖರ ಅವರು ವಿಚಾರಣೆಯನ್ನು ಮಾ.3ಕ್ಕೆ ಮುಂದೂಡಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.