Maruti-Tata-Hyundai ಬಿಡುಗಡೆ ಮಾಡಲಿವೆ ಆರು ಎಸ್ ಯುವಿ!! ಅತೀ ಅಗ್ಗದ ಬೆಲೆಯಲ್ಲಿ!
Maruti-Tata-Hyundai : ಇಂದಿನ ದಿನಗಳಲ್ಲಿ ಓಡಾಟ ನಡೆಸಲು ವಾಹನಗಳು ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರ ಮನೆಯಲ್ಲಿ ಕೂಡ ವಾಹನಗಳು ಇರೋದು ಸಾಮಾನ್ಯವಾಗಿ ಬಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಪ್ರೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹೆಚ್ಚಳ ಕಂಡುಬರುತ್ತಿರುವ ಹಿನ್ನೆಲೆ ಹೆಚ್ಚಿನವರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಆದರೂ ಕೆಲ ಕಾರು ತಯಾರಿಕಾ ಕಂಪನಿಗಳು ಆಗಾಗ ಹೊಸ ಮಾದರಿಗಳನ್ನು ಪರಿಚಯಿಸಿ ಜನರ ಗಮನ ಸೆಳೆಯುವತ್ತ ಲಕ್ಷ್ಯ ವಹಿಸಿ ಜನ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. (Maruti Cars): ಮಾರುತಿ ಸುಜುಕಿ(Maruti Suzuki) ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್‌ನಂತಹ ಟಾಪ್ ಕಂಪನಿಗಳು ಬಜೆಟ್ ಎಲೆಕ್ಟ್ರಿಕ್ ಕಾರು ಸೇರಿದಂತೆ 6 ಹೊಸ ಕಾಂಪ್ಯಾಕ್ಟ್ ಎಸ್‌ಯುವಿಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟು ಟ್ರೆಂಡ್ ಸೃಷ್ಟಿ ಮಾಡಲು ರೆಡಿಯಾಗಿದೆ.
ಕೈಗೆಟುಕುವ ದರದಲ್ಲಿ ಶಕ್ತಿಯುತ ಎಸ್‌ಯುವಿಯನ್ನು ಎದರು ನೋಡುತ್ತಿರುವ ಗ್ರಾಹಕರಿಗೆ ಸಿಹಿ ಸುದ್ದಿಯಿದೆ. ಶೀಘ್ರದಲ್ಲಿಯೇ ಹಲವು ಉತ್ತಮ ಆಯ್ಕೆಗಳು ಕೈಗೆಟಕುವ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ. ಟಾಪ್ ಕಂಪನಿಗಳಾದ ಮಾರುತಿ ಸುಜುಕಿ, ಹ್ಯುಂಡೈ(Hyundai Motor Company) ಮತ್ತು ಟಾಟಾ ಮೋಟಾರ್ಸ್‌ನಂತಹ ಕಂಪನಿಗಳು ಕೈಗೆಟಕುವ ದರದಲ್ಲಿ ಎಲೆಕ್ಟ್ರಿಕ್ ಕಾರು ಸೇರಿದಂತೆ 6 ಹೊಸ ಕಾಂಪ್ಯಾಕ್ಟ್ ಎಸ್‌ಯುವಿಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿವೆ. ಹಾಗಿದ್ರೆ, ಯಾವುದೆಲ್ಲ ಕಾರುಗಳು ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಅಣಿಯಾಗಿದೆ ಅಂತಾ ತಿಲ್ಕೋಬೇಕಾ? ಹಾಗಿದ್ರೆ, ಈ ಮಾಹಿತಿ ನಿಮಗಾಗಿ.
ಮಾರುತಿ ಮುಂಬರುವ ಕಾರು :(Maruti-Tata-Hyundai Upcoming SUV 🙂
ಮನದಲ್ಲಿ ವಿಶೇಷ ಸ್ಥಾನ ಪಡೆದಿರುವ ಮಾರುತಿ ಕಂಪನಿಯ 3 ಹೊಚ್ಚ ಹೊಸ ಮಾದರಿಯ SUV ಗಳು ಬಿಡುಗಡೆಗೆ ಪೂರ್ವ ತಯಾರಿ ನಡೆಸಿದ್ದು, ಅದರಲ್ಲಿಯೂ ಮಾರುತಿ ಸುಜುಕಿ ಬ್ರೆಜಾದ( Maruti Suzuki Brezza)ಸಿಎನ್‌ಜಿ ಮಾದರಿ ಉತ್ತಮ ಮೈಲೇಜ್‌ನೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಭಾರತದಲ್ಲಿ SUV ಖರೀದಿದಾರರಿಗೆ ಭರ್ಜರಿ ಆಯ್ಕೆಗಳು ಲಭ್ಯವಾಗಲಿದೆ.ಅಷ್ಟೇ ಅಲ್ಲದೆ, ಹೊಚ್ಚ ಹೊಸ ಮಾದರಿಯ ಕಾರುಗಳು ಕೈಗೆಟುಕುವ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಡಲು ಮುಂದಾಗಿದೆ.
ಹ್ಯುಂಡೈ ಮೈಕ್ರೋ ಎಸ್‌ಯುವಿ(Hyundai Micro SUV)
ಹ್ಯುಂಡೈ ಮೋಟಾರ್ ಕೂಡಾ ಕ್ಯಾಸ್ಪರ್ ಎಂಬ ಮೈಕ್ರೋ ಎಸ್‌ಯುವಿ ಮಾರುಕಟ್ಟೆಗೆ ಲಗ್ಗೆ ಇಡಲು ಅಣಿಯಾಗಿದೆ. ಕ್ಯಾಸ್ಪರ್ ಇತ್ತೀಚಿನ ವೈಶಿಷ್ಟ್ಯಗಳೊಂದಿಗೆ ರೆಡಿಯಾಗಿದ್ದು, ಅದರ ಆರಂಭಿಕ ಬೆಲೆ 6-7 ಲಕ್ಷ ರೂ ಆಗಿರಲಿದೆ.
ಮಾರುತಿ ಸುಜುಕಿ ಮುಂದಿನ ಕೆಲವೇ ತಿಂಗಳುಗಳಲ್ಲಿ 3 ಹೊಸ ಬಿಡುಗಡೆ ಮಾಡಲು ಸಿದ್ಧವಾಗಿದೆ. ಫ್ರಾಂಕ್ಸ್ ಮತ್ತು ಜಿಮ್ನಿಯನ್ನು ಆಟೋ ಎಕ್ಸ್‌ಪೋ 2023ರಲ್ಲಿ ಅನಾವರಣಈಗಾಗಲೇ, ಫ್ರಾಂಕ್ಸ್ ಮತ್ತು ಜಿಮ್ನಿ 5 ಡೋರ್‌ಗಾಗಿ ಬುಕ್ಕಿಂಗ್‌ಗಳನ್ನು ಶುರು ಮಾಡಿದೆ. ಇವುಗಳ ಬೆಲೆ ಕ್ರಮವಾಗಿ 7 ಲಕ್ಷ ಮತ್ತು 10 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಲಿದೆ.
ಟಾಟಾ ಪಂಚ್ ಸಿಎನ್‌ಜಿ( Tata Punch Cng Models)ಮತ್ತು ಇವಿ( EV)
ಪಂಚ್ ಸಿಎನ್‌ಜಿಯನ್ನು ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಲಾಗಿದೆ. ಟಾಟಾ ಮೋಟಾರ್ಸ್ ತನ್ನ ಬಹು ನಿರೀಕ್ಷಿತ ಮೈಕ್ರೋ ಎಸ್‌ಯುವಿ ಪಂಚ್ ಅನ್ನು ಎಲೆಕ್ಟ್ರಿಕ್ ಮತ್ತು ಸಿಎನ್‌ಜಿ ರೂಪಾಂತರಗಳಲ್ಲಿ ಬಿಡುಗಡೆ ಮಾಡಲು ರೆಡಿಯಾಗಿದೆ. ಪಂಚ್ ಸಿಎನ್‌ಜಿ ಮತ್ತು ಇವಿ ಎರಡನ್ನೂ 10 ಲಕ್ಷದವರೆಗಿನ ಬೆಲೆ ಶ್ರೇಣಿಯಲ್ಲಿ ಲಭ್ಯವಾಗುವ ಸಾಧ್ಯತೆ ದಟ್ಟವಾಗಿದೆ. ನೀವು ಕೂಡ ಕೈಗೆಟಕುವ ದರದಲ್ಲಿ SUV ಕಾರುಗಳ ಖರೀದಿಗೆ ಮುಂದಾಗಿದ್ದರೆ ಮೇಲೆ ತಿಳಿಸಿದ ಕಾರುಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಕೊಂಡುಕೊಳ್ಳಬಹುದು.