LPG Gas : ಗ್ಯಾಸ್ ಸಿಲಿಂಡರ್ ಬೆಲೆ ರೂ.350 ಏರಿಕೆ!!! ಗ್ರಾಹಕರಿಗೆ ತಟ್ಟಿತು ಬೆಲೆ ಏರಿಕೆಯ ಬಿಸಿ!!

LPG Gas : ಜನಸಾಮಾನ್ಯರು ಬಳಸುವ ವಸ್ತುಗಳ ಬೆಲೆಯಲ್ಲಿ ಪ್ರತೀದಿನ ಏರಿಳಿತ ಆಗುತ್ತಲೇ ಇರುತ್ತದೆ. ತರಕಾರಿ(vegetable), ಅಡಿಕೆಯ(arecanut) ಬೆಲೆಯಂತೂ ಒಂದು ಬಾರಿ ಗಗನಕ್ಕೇರಿದರೆ, ಮತ್ತೊಮ್ಮೆ ಭಾರೀ ಇಳಿಕೆಯಾಗುತ್ತದೆ. ಈ ಬಾರಿ ಗ್ಯಾಸ್ ಸಿಲಿಂಡರ್ (LPG Gas) ಬೆಲೆಯಲ್ಲಿ ಏರಿಕೆ ಕಂಡಿದ್ದು, ಜನಸಾಮಾನ್ಯರಿಗೆ ಬಿಗ್‌ ಶಾಕ್‌ ಬಂದೊದಗಿದೆ.

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 350.50 ರೂ. ಏರಿಕೆಯಾಗಿದ್ದು, ಗ್ರಾಹಕರಿಗೆ ಬಿಸಿ ತಟ್ಟಿದೆ. ಹಲವು ತಿಂಗಳುಗಳ ಕಾಲ ಸಿಲಿಂಡರ್‌ ದರ ಪರಿಷ್ಕರಣೆಯಾಗಿಲ್ಲ. ಆದರೆ, ಇಂದಿನಿಂದ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ದರ ಹೆಚ್ಚಾಗಲಿದೆ. ಇದು ಜನಸಾಮಾನ್ಯರ ಮೇಲೆ ತೀವ್ರ ಪರಿಣಾಮ ಬೀಳಲಿದೆ. ಜನಸಾಮಾನ್ಯರ ಹೊರೆ ಮತ್ತಷ್ಟು ಹೆಚ್ಚಾಗಲಿದೆ. ಇದರ ಜತೆಗೆ ಹೋಟೆಲ್‌ನಲ್ಲಿ ತಿನ್ನುವವರಿಗೂ ಬಿಸಿ ತಟ್ಟಲಿದೆ.

ಇಂದಿನಿಂದ, 14.2 ಕೆಜಿ ಗೃಹಬಳಕೆಯ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (Liquified Petroleum Gas) (ಎಲ್‌ಪಿಜಿ) (LPG) ಸಿಲಿಂಡರ್‌ನ (Cylinder)ಬೆಲೆ ₹ 50 ಏರಿಕೆಯಾಗಿದೆ. 19 ಕೆಜಿ ವಾಣಿಜ್ಯ (Commercial) ಎಲ್‌ಪಿಜಿ ಸಿಲಿಂಡರ್‌ನ ಬೆಲೆ ₹350.50 ಏರಿಕೆಯಾಗಿದ್ದು, ಇದರ ಜೊತೆಗೆ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ ₹2119.50 ಆಗಲಿದೆ. ಕಳೆದ 6 ತಿಂಗಳಿಂದ ಗೃಹ ಬಳಕೆಯ ಸಿಲಿಂಡರ್‌ ದರದಲ್ಲಿ ಬದಲಾವಣೆ ಆಗಿರಲಿಲ್ಲ. ಆದರೆ, ಈ ಬಾರಿ ವಾಣಿಜ್ಯ ಬಳಕೆಯ ಸಿಲಿಂಡರ್‌ ಮಾತ್ರವಲ್ಲ, ಗೃಹ ಬಳಕೆಯ ಸಿಲಿಂಡರ್‌ ದರ ಕೂಡ ಹೆಚ್ಚಾಗಿದೆ.

ಎಲ್‌ಪಿಜಿ ಸಿಲಿಂಡರ್‌ನ ನೂತನ ಪರಿಷ್ಕೃತ ಬೆಲೆ:
• ಹೊಸ ದರಗಳು ಇಂದಿನಿಂದಲೇ ಜಾರಿಗೆ ಬರಲಿದ್ದು, ದೆಹಲಿಯಲ್ಲಿ 14.2 ಕೆ.ಜಿ ಎಲ್‌ಪಿಜಿ ಸಿಲಿಂಡರ್‌ನ ನೂತನ ಪರಿಷ್ಕೃತ ಬೆಲೆ ಇಂದಿನಿಂದ ₹ 1053 ರ ಬದಲು ₹ 1103 ಆಗಿರುತ್ತದೆ.
• ಮುಂಬೈನಲ್ಲಿ ₹ 1052.50 ರ ಬದಲಿಗೆ ₹ 1102.5 ಆಗಲಿದೆ.
• ಕೋಲ್ಕತ್ತಾದಲ್ಲಿ ₹1079ರ ಬದಲು ₹1129 ಗೆ ಮಾರಾಟವಾಗಲಿದೆ.
• ಚೆನ್ನೈನಲ್ಲಿ ₹1068.50 ರ ಬದಲಿಗೆ ₹1118.5 ಗೆ ಏರಿಕೆ ಆಗಿದೆ.

ಇಂದಿನಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ:
• ದೆಹಲಿಯಲ್ಲಿ ರೂ. 1769 ಬದಲಿಗೆ ರೂ. 2119.5ಕ್ಕೆ ಲಭ್ಯವಿರುತ್ತದೆ.
• ಕೋಲ್ಕತ್ತಾದಲ್ಲಿ ರೂ. 1870 ಇದ್ದದ್ದು ಈಗ ರೂ. 2221.5 ಆಗಿದೆ.
• ಮುಂಬೈನಲ್ಲಿ ರೂ. 1721 ರಿಂದ ರೂ. 2071.50ಕ್ಕೆ ಏರಿಕೆಯಾಗಿದೆ.
• ಚೆನ್ನೈನಲ್ಲಿ ರೂ. 1917ಕ್ಕೆ ಬದಲಿಗೆ ರೂ. 2268ಕ್ಕೆ ಸಿಗಲಿದೆ.

ಪ್ರತಿ ಕುಟುಂಬವು ಒಂದು ವರ್ಷದಲ್ಲಿ ಸಬ್ಸಿಡಿ ದರದಲ್ಲಿ ತಲಾ 14.2 ಕೆಜಿಯ 12 ಸಿಲಿಂಡರ್‌ಗಳಿಗೆ ಅರ್ಹವಾಗಿರುತ್ತದೆ. ಅದಕ್ಕಿಂತ ಹೆಚ್ಚಾದರೆ, ಗ್ರಾಹಕರು ಎಲ್‌ಪಿಜಿ ಸಿಲಿಂಡರ್‌ಗಳ ಯಾವುದೇ ಹೆಚ್ಚುವರಿ ಖರೀದಿಗಳನ್ನು ಮಾರುಕಟ್ಟೆ ಬೆಲೆಗೆ ನೀಡಬೇಕಾಗುತ್ತದೆ. ಪಹಲ್ (ಎಲ್‌ಪಿಜಿ ನೇರ ಲಾಭ ವರ್ಗಾವಣೆ) ಯೋಜನೆಯಡಿ, ಗ್ರಾಹಕರು ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪಡೆಯಲಿದ್ದಾರೆ.

Leave A Reply

Your email address will not be published.