ನಿಮಗೆ ಹಣದ ಅವಶ್ಯಕತೆ ಇದೆಯೇ? ಮಂಗಳವಾರ ಈ ದೀಪ ಹಚ್ಚಿ!
Light Lamp: ಹಣ(money) ಯಾರಿಗೆ ಬೇಡ ಹೇಳಿ. ಮನುಷ್ಯ ದುಡಿಯೋದೇ ಹಣಕ್ಕಾಗಿ, ಹಣ ಇದ್ದರೆ ಬೇಕಾದ ಎಲ್ಲಾ ವಸ್ತುಗಳನ್ನು ನಮ್ಮದಾಗಿಸಬಹುದು. ಬೆಳೆ ಬಾಳುವ ಚಿನ್ನಾಭರಣ(gold), ತಿನಿಸು, ಬಟ್ಟೆ-ಬರೆ ಇವೆಲ್ಲವನ್ನೂ ಕೈತುಂಬ ಹಣವಿದ್ದರೆ ಕ್ಷಣಮಾತ್ರದಲ್ಲಿ ಖರೀದಿಸಬಹುದು. ಆದರೆ ಹಣ ಹೇಳಿದಷ್ಟು ಸುಲಭವಾಗಿ ಸಿಗೋದಿಲ್ಲ, ಸಾಕಷ್ಟು ಕಷ್ಟ ಪಡಬೇಕು. ಆದರೆ ನೀವು ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಹಣ ಹೆಚ್ಚಾಗುತ್ತದೆ. ಏನು ಇಲ್ಲ, ಇಷ್ಟು ಮಾಡಿ, ಮಂಗಳವಾರ(Tuesday)ದಂದು ಈ ದೀಪವನ್ನು ಹಚ್ಚಿ(light lamp) ಈ ರೀತಿ ಪೂಜೆ(Puja) ಮಾಡಿ ಅಷ್ಟೇ. ಯಾವ ಪೂಜೆ? ಹೇಗೆ? ಬನ್ನಿ ತಿಳಿಯೋಣ.
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ಪೂಜೆಗಳನ್ನೂ ಮಾಡಲು ಕೆಲವು ನಿಯಮಗಳು ನಿರ್ಧಾರಗೊಂಡಿದೆ. ನಾವು ಈ ನಿಯಮಗಳನ್ನು ಪಾಲಿಸಿಕೊಂಡು ಪೂಜೆಗಳನ್ನು ಮಾಡಬೇಕು ಆಗ ಮಾತ್ರ ನಮ್ಮ ಪೂಜೆಗಳಿಗೆ ಅರ್ಥವಿರುತ್ತದೆ. ಇಲ್ಲಿ ನಮ್ಮ ಆರಾಧನೆಯ ಫಲಕೂಡ ದೊರೆಯುತ್ತದೆ. ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ. ಅಲ್ಲದೆ, ಧನವೃದ್ಧಿಯಾಗುತ್ತದೆ.
ಧನಪ್ರಾಪ್ತಿಗೆ ಲಕ್ಷ್ಮೀ ದೇವಿಯನ್ನು ಸ್ಮರಿಸುತ್ತೇವೆ. ಆದರೆ ಹಣ ಲಭಿಸಲು ಪೂಜಿಸಬೇಕಾದ ಮತ್ತೊಂದು ಪ್ರಮುಖ ದೇವರು ಎಂದರೆ, ಗಂಧ ದೇವರಾದ ಪಳನಿ ಬೆಟ್ಟದಲ್ಲಿರುವ ಮುರುಗ. ಪಳನಿ ಬೆಟ್ಟದಲ್ಲಿರುವ ಮುರುಗನನ್ನು ರಾಜವೇಷದಲ್ಲಿ ದರ್ಶನ ಮಾಡಿದರೆ ಅದೃಷ್ಟ ಒಲಿಯುತ್ತದೆ ಎಂದು ಹೇಳಲಾಗುತ್ತದೆ.
ಹಣ ತರಲು ಮುರುಗನನ್ನು ಪೂಜಿಸಲು ಮಂಗಳವಾರ ಉತ್ತಮ ದಿನವಾಗಿದೆ. ಈ ದಿನವೇ ಈ ಪೂಜೆಯನ್ನು ಆರಂಭಿಸಬೇಕು. ಈ ಪೂಜೆಗೆ ಆರು ವೀಳ್ಯದೆಲೆ (Betel)ಗಳನ್ನು ತೆಗೆದುಕೊಳ್ಳಬೇಕು. ಆರು ಅಗಲ್ ದೀಪಗಳು, ಕೆಂಪು ಬತ್ತಿ ಮತ್ತು ಹಸುವಿನ ತುಪ್ಪ (Ghee) ಬೇಕು. ಹಾಗೆಯೇ ಪಂಚಾಮೃತವನ್ನು ನೇವೇದಿಕ್ ವಿಧಾನದ ಪ್ರಕಾರ ತಯಾರಿಸಬೇಕು.
ಇನ್ನು ಈ ಪೂಜೆಯನ್ನು ಮಂಗಳವಾರ ದಿನವಿಡೀ ಯಾವ ಸಮಯದಲ್ಲಿ ಬೇಕಾದರೂ ಮಾಡಬಹುದು. ಆದರೆ ಮಂಗಳವಾರದಂದೇ ಈ ಪೂಜೆ ಮಾಡಬೇಕು. ನಿಮ್ಮ ಮನೆಯ ಪೂಜಾ ಕೋಣೆಯಲ್ಲಿ ಮುರುಗನ ಚಿತ್ರವನ್ನು ಹಾಕಿ ಅದರಲ್ಲಿ ಶ್ರೀಗಂಧ ಮತ್ತು ಕುಂಕುಮವನ್ನು ಹಾಕಿ, ಚೆವ್ವರಾಳಿ ಹೂವಿನ ಹಾರವನ್ನು ಹಾಕಿ. ನಂತರ ಚಿತ್ರದ ಮುಂದೆ 6 ವೀಳ್ಯದೆಲೆಗಳನ್ನು ಇಟ್ಟು ಅದರ ಮೇಲೆ ಹಸುವಿನ ತುಪ್ಪವನ್ನು ಸುರಿಯಿರಿ. ಬಳಿಕ ದೀಪವನ್ನು ಹಚ್ಚಿ. ನಂತರ ಅದರ ಮೇಲೆ ಆರು ಅಕಲ ದೀಪಗಳನ್ನು ಹಾಕಿ, ದೀಪವನ್ನು ಬೆಳಗಿಸಬೇಕು.
ಇಷ್ಟಾದ ಬಳಿಕ ಕಂದ ಷಷ್ಠಿ ಕವಸಂ ಪಠಿಸಬಹುದಾದರೆ, ದೀಪ (Diya)ದ ಮುಂದೆ ಕುಳಿತು ಸಂಪೂರ್ಣವಾಗಿ ಪಠಿಸಿ. ಈ ಪೂಜೆಯನ್ನು ಆರು ವಾರಗಳ ಕಾಲ ನಿರಂತರವಾಗಿ ಮಾಡಿ. ವೀಳ್ಯದೆಲೆಯ ಮೇಲೆ ಈ ದೀಪವನ್ನು ಆರು ವಾರ ಮಾತ್ರ ಹಚ್ಚಿ. ಅದರ ನಂತರ ಎಂದಿನಂತೆ ದೀಪವನ್ನು ಬೆಳಗಿಸಿ ಪ್ರಾರ್ಥನೆ ಮಾಡಬಹುದು. ಈ ರೀತಿಯ ಪೂಜೆಯಿಂದ ಮುರುಗನು ನಿಮ್ಮ ಆರ್ಥಿಕ ಸಮಸ್ಯೆ ಪರಿಹರಿಸುತ್ತಾರೆ. ಮನೆಯಲ್ಲಿ ಧನವೃದ್ಧಿ ಆಗುತ್ತದೆ, ಹಣ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.