LIC super saving scheme : ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಪಡೆಯಿರಿ ಲಕ್ಷ ರೂಪಾಯಿ!

LIC : ಉಳಿತಾಯ ಎಂಬುದು ಮನುಷ್ಯನ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ಯಾಕಂದ್ರೆ, ಇಂದಿನ ದುಬಾರಿ ದುನಿಯಾದಲ್ಲಿ ಉಳಿತಾಯ ಎಂಬುದು ಇಲ್ಲದೆ ಹೋದರೆ ಬದುಕೇ ಕಷ್ಟ ಎನ್ನುವ ಮಟ್ಟಿಗೆ ತಲುಪಿದೆ. ದುಡಿಯಲು ಶಕ್ತಿ ಇರುವಾಗ ದುಡಿದು ಸಂಪಾದಿಸಿದರಷ್ಟೇ ಮುಂದಿನ ದಿನಗಳಲ್ಲಿ ಸಂತೋಷವಾಗಿ ಜೀವನ ನಡೆಸಲು ಸಾಧ್ಯ. ಹೌದು. ಉತ್ತಮವಾದ ಸೇವಿಂಗ್ ಮೂಲಕ ನಿವೃತ್ತಿಯ ಸಮಯದಲ್ಲಿ ದೊಡ್ಡ ಪ್ರಮಾಣದ ಹಣವನ್ನು ಪಡೆಯಬಹುದು.

 

ಇಂತಹ ಹೂಡಿಕೆಗಾಗಿಯೇ ಹಲವು ಯೋಜನೆಗಳು ಕೂಡ ಜಾರಿಯಲ್ಲಿದೆ. ಅವುಗಳಲ್ಲಿ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) (LIC) ಕೂಡ ಒಂದು. ಈ ಸಂಸ್ಥೆ ಎಲ್‌ಐಸಿ ಧನ್ ರೇಖಾ ಯೋಜನೆಯನ್ನು ಪ್ರಕಟಿಸಿದ್ದು, ಈ ಪಾಲಿಸಿ ಅನೇಕ ಪ್ರಯೋಜನಗಳ ಜೊತೆಗೆ ಆಕರ್ಷಕ ಆಫರ್ ಗಳನ್ನು ಕೂಡ ಒಳಗೊಂಡಿದೆ. ಈ ಯೋಜನೆಯ ಪ್ರೀಮಿಯಂ ಪಾವತಿಗಳ ಮೇಲೆ ಪಾಲಿಸಿದಾರರು ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಲು ಆರ್ಹತೆ ಗಳಿಸಿದ್ದಾರೆ.

ಎಲ್‌ಐಸಿ ಧನ್ ರೇಖಾ ಯೋಜನೆಯಲ್ಲಿ 18 ವರ್ಷದಿಂದ 60 ವರ್ಷ ವಯಸ್ಸಿನೊಳಗಿನವರು ಹೂಡಿಕೆ ಮಾಡಬಹುದು. ಮೆಚ್ಯುರಿಟಿಗೆ ಗರಿಷ್ಠ ವಯಸ್ಸು 70 ವರ್ಷಗಳು. ಈ ಯೋಜನೆಯಡಿಯಲ್ಲಿ ಭರವಸೆ ನೀಡಿರುವ ಕನಿಷ್ಠ ಮೊತ್ತ ಒಂದು ಲಕ್ಷ ರೂ. ಆಗಿದೆ. ಧನ್ ರೇಖಾ ಯೋಜನೆ ಪ್ರೀಮಿಯಂ ಪಾವತಿಯಲ್ಲಿ ಕೂಡ ಎರಡು ಆಯ್ಕೆಗಳನ್ನು ನೀಡಲಾಗಿದ್ದು, ಒಂದೇ ಪ್ರೀಮಿಯಂನಲ್ಲಿ ಪೂರ್ತಿ ಹಣ ಪಾವತಿ ಮಾಡಬಹುದು ಇಲ್ಲವೇ ನಿಯಮಿತವಾಗಿ ಕೂಡ ಪ್ರೀಮಿಯಂ ಪಾವತಿಸಬಹುದು.

ಎಲ್ ಐಸಿ ಧನ್ ರೇಖಾ ಪಾಲಿಸಿಯಲ್ಲಿ ಹೂಡಿಕೆ ಮಾಡಲು ಬಯಸೋರು ಸಮೀಪದ ಎಲ್‌ಐಸಿ ಶಾಖೆಗೆ ತೆರಳಿ ಅರ್ಜಿ ಸಲ್ಲಿಸಬಹುದು. ಇಲ್ಲವೇ ಎಲ್‌ಐಸಿ ವೆಬ್ ಸೈಟ್ ನಲ್ಲಿ ಕೂಡ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಸಂಬಮಧಪಟ್ಟ ಅರ್ಜಿಗಳನ್ನು ಭರ್ತಿ ಮಾಡೋದು, ಅಗತ್ಯ ದಾಖಲೆಗಳ ಸಲ್ಲಿಕೆ ಹಾಗೂ ಪ್ರೀಮಿಯಂ ಪಾವತಿಯನ್ನು ಒಳಗೊಂಡಿದೆ. ಅರ್ಜಿ ಪ್ರಕ್ರಿಯೆ ಮುಂದುವರಿದು, ಎಲ್‌ಐಸಿ ಅನುಮತಿ ನೀಡಿದ ಬಳಿಕ ಪಾಲಿಸಿಯನ್ನು ನೀಡಲಾಗುತ್ತದೆ.

Leave A Reply

Your email address will not be published.