Stomach Pain: ತಿಂದ ಕೂಡಲೇ ಹೊಟ್ಟೆ ನೋವಾಗುತ್ತಾ? ಹಾಗಾದ್ರೆ ಈ ಮನೆ ಮದ್ದು ಫಾಲೋ ಮಾಡಿ!

Stomach Pain: ಊಟ ಮಾಡಿದ ನಂತರ ಕೆಲವರಿಗೆ ಹೊಟ್ಟೆ ನೋವು (Stomach Pain) ಶುರುವಾಗುತ್ತದೆ. ಇದಕ್ಕೆ ಕಾರಣವಿದೆ. ಈ ಸಮಸ್ಯೆ ಉಂಟಾಗುವುದು ಊಟ ಮಾಡಿದ ತಕ್ಷಣ ಮಲಗುವುದರಿಂದಲೂ ಇರಬಹುದು. ಹೆಚ್ಚು ಊಟ ಸೇವಿಸಿದ್ದರಿಂದಲೂ ಇರಬಹುದು. ಕೆಲವರಿಗೆ ಊಟ ಮಾಡಿದ ತಕ್ಷಣ ಮಲಗುವ ಅಭ್ಯಾಸವಿರುತ್ತದೆ. ಆದರೆ, ಇದು ಹೊಟ್ಟೆ ನೋವು ಮತ್ತು ಸೆಳೆತಕ್ಕೆ ಸಹ ಕಾರಣವಾಗಬಹುದು. ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀಳಬಹುದು. ಚಿಂತೆ ಬೇಡ, ಆಹಾರ ತಿಂದ ನಂತರ ಹೊಟ್ಟೆ ನೋವಾಗುವುದಕ್ಕೆ ಪರಿಹಾರ ಇಲ್ಲಿದೆ(Home Remedies For Stomach Pain). ಈ ಟಿಪ್ಸ್ ಫಾಲೋ ಮಾಡಿ!.

ಊಟವನ್ನು ಹೆಚ್ಚು ತಿನ್ನಬೇಡಿ: ಹಸಿವಾಗಿದ್ದರೆ ಎಷ್ಟು ಬೇಕು ಅಷ್ಟೇ ತಿನ್ನಿ. ಅಧಿಕವಾಗಿ ಊಟ(food) ಸೇವಿಸಿದರೆ ಹೊಟ್ಟೆನೋವು ಉಂಟಾಗಬಹುದು. ಸಾಮಾನ್ಯವಾಗಿ ಕಳಪೆ ಜೀರ್ಣಕ್ರಿಯೆಯು ಹೊಟ್ಟೆ ನೋವಿಗೆ ಕಾರಣವಾಗಿದೆ. ಹಾಗಾಗಿ, ತಿನ್ನುವಾಗ, ನಿಧಾನವಾಗಿ ಜೀರ್ಣವಾಗುವ ಆಹಾರ ಅಥವಾ ಜೀರ್ಣಿಸಿಕೊಳ್ಳಲು ಕಷ್ಟಕರವಾದ ಆಮ್ಲೀಯ ಆಹಾರ, ಬ್ರೆಡ್, ಮಸಾಲೆಯುಕ್ತ ಆಹಾರ ಇತ್ಯಾದಿಗಳನ್ನು ತಿನ್ನಬೇಡಿ. ಬದಲಾಗಿ, ನೀವು ಹೊಟ್ಟೆಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಫೈಬರ್ ಭರಿತ ಆಹಾರಗಳು ಮತ್ತು ಹಸಿರು ತರಕಾರಿ(green vegetable) ಗಳನ್ನು ತಿನ್ನುವುದು ಒಳ್ಳೆಯದು. ಇವುಗಳಲ್ಲಿ ಹೆಚ್ಚಿನ ಪೋಷಕಾಂಶವೂ ಇರುತ್ತದೆ.

ತಿಂದ ತಕ್ಷಣ ಮಲಗಬೇಡಿ: ಕೆಲವರಿಗೆ ಊಟ ಮಾಡಿದ ತಕ್ಷಣ ಮಲಗುವ ಅಭ್ಯಾಸವಿರುತ್ತದೆ. ಆದರೆ, ಇದು ಹೊಟ್ಟೆ ನೋವು ಮತ್ತು ಸೆಳೆತಕ್ಕೆ ಸಹ ಕಾರಣವಾಗಬಹುದು. ಎದೆಯುರಿ ಉಂಟಾಗುತ್ತದೆ. ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀಳಬಹುದು. ದೇಹವು ಸಮತಲ ಸ್ಥಾನದಲ್ಲಿದ್ದಾಗ, ಹೊಟ್ಟೆಯ ಆಮ್ಲವು ಹಿಂದಕ್ಕೆ ಮತ್ತು ಮೇಲಕ್ಕೆ ಚಲಿಸುತ್ತದೆ ಹಾಗಾಗಿ ತಿಂದ ತಕ್ಷಣ ಮಲಗಬೇಡಿ.

ಹೆಚ್ಚಾಗಿ ನೀರು ಕುಡಿಯಿರಿ: ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗಬೇಕಾದರೆ ನೀರು(water) ಕುಡಿಯುವುದು ಅತ್ಯಗತ್ಯ. ಕಡಿಮೆ ನೀರು ಕುಡಿದರೆ, ದೇಹದಲ್ಲಿ ನೀರಿನ ಕೊರತೆ ಉಂಟಾಗಿ
ಜೀರ್ಣಕ್ರಿಯೆಯು ಸರಿಯಾಗಿ ನಡೆಯುವುದಿಲ್ಲ ಮತ್ತು ಅದು ಹೊಟ್ಟೆ ನೋವು ಅಥವಾ ಸೆಳೆತವನ್ನು ಉಂಟುಮಾಡಬಹುದು. ಹಾಗಾಗಿ ಹೆಚ್ಚು ನೀರು ಕುಡಿಯಿರಿ. ಇದರಿಂದ ಎದೆಯುರಿಯನ್ನು ನಿವಾರಿಸಬಹುದು. ಜೀರ್ಣಕಾರಿ ಸಮಸ್ಯೆ ಇರುವವರು ಹೆಚ್ಚು ನೀರು ಕುಡಿಯುವುದು ಒಳ್ಳೆಯದು.

ಶುಂಠಿ (Ginger): ಊಟ ಸೇವಿಸಿದ ನಂತರ ಹೊಟ್ಟೆನೋವು ಉಂಟಾದರೆ, ಶುಂಠಿಯಿಂದ ಪರಿಹಾರ ಸಿಗಲಿದೆ. ಹೇಗೆ? ಇಲ್ಲಿದೆ ಮಾಹಿತಿ. ಶುಂಠಿಯಲ್ಲಿನ ಪೋಷಕಾಂಶ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯನ್ನು ದೂರ ಮಾಡುತ್ತದೆ. ವಾಕರಿಕೆ ಅಥವಾ ವಾಂತಿ(vomit) ಸಮಸ್ಯೆಗೂ ಶುಂಠಿ ತುಂಬಾ ಸಹಕಾರಿಯಾಗಿದೆ. ಹೊಟ್ಟೆ ನೋವು ಉಂಟಾದರೆ, ಶುಂಠಿಯನ್ನು ಆಹಾರ ಅಥವಾ ಚಹಾ(tea) ಕ್ಕೆ ಸೇರಿಸಿ, ಸೇವಿಸಿ.

ತುಳಸಿ (Basil): ತುಳಸಿ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಸಾಮಾನ್ಯವಾಗಿ ಈ ಸಸ್ಯ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ತುಳಸಿಯನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ನಿವಾರಣೆಯಾಗುತ್ತದೆ. ತುಳಸಿಯಲ್ಲಿ ಲಿನೋಲಿಯಿಕ್ ಆಮ್ಲ ಅಧಿಕವಾಗಿದ್ದು, ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಇದರ ಸೇವನೆ ಹೊಟ್ಟೆ ನೋವು ಮತ್ತು ಸೆಳೆತದಲ್ಲಿ ಪ್ರಯೋಜನಕಾರಿಯಾಗಿದೆ.

ನಿಂಬೆ ರಸ: ಹೆಚ್ಚಾಗಿ ಎಲ್ಲರಿಗೂ ತಿಳಿದಿರುವಂತದ್ದೆ, ನಿಂಬೆ(Lemon) ರಸವು ಹೊಟ್ಟೆಯ ಸಮಸ್ಯೆಗಳನ್ನು ಹೊಡೆದೊಡಿಸುತ್ತದೆ. ಹೊಟ್ಟೆನೋವು ಅಥವಾ ಸೆಳೆತದ ಸಂದರ್ಭದಲ್ಲಿ, ನಿಂಬೆ ರಸ ಮತ್ತು ಅಡಿಗೆ ಸೋಡಾದೊಂದಿಗೆ ಬೆಚ್ಚಗಿನ ನೀರನ್ನು ಕುಡಿಯಿರಿ. ಇದರಿಂದ ಹೊಟ್ಟೆನೋವು ಮಾಯವಾಗುತ್ತದೆ. ಅಲ್ಲದೆ, ಇದು ಎದೆಯುರಿ ಮತ್ತು ಅಜೀರ್ಣವನ್ನು ತೆಗೆದುಹಾಕುತ್ತದೆ.

ಧೂಮಪಾನ(smoking) ಮತ್ತು ಮದ್ಯಪಾನದಿಂದ ದೂರವಿರಿ: ಅತಿಯಾದ ಮದ್ಯಪಾನ(drinks) ಮತ್ತು ಧೂಮಪಾನವು ಅಜೀರ್ಣದಂತಹ ಸಮಸ್ಯೆಗಳನ್ನು ಪ್ರಚೋದಿಸುತ್ತದೆ. ಇದು ಇತರ ಜಠರಗರುಳಿನ ಸಮಸ್ಯೆಗಳಿಗೆ ಸಹ ಕಾರಣವಾಗಿದೆ. ಇದು ದೇಹಕ್ಕೆ ವಿವಿಧ ರೀತಿಯಲ್ಲಿ ಹಾನಿಕಾರಕವಾಗಿದೆ. ಹಾಗಾಗಿ ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ.

Leave A Reply

Your email address will not be published.