Atal Pension yojana : ಪತಿ-ಪತ್ನಿಗೆ ಈ ಯೋಜನೆಯ ಮೂಲಕ ದೊರೆಯುತ್ತೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಪಿಂಚಣಿ!
Atal Pension yojana : ಸರ್ಕಾರವು ಜನರಿಗೆ ನೆರವಾಗುವ ನಿಟ್ಟಿನಿಂದ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಲೇ ಬಂದಿದ್ದು, ಅವುಗಳಲ್ಲಿ ಅಟಲ್ ಪಿಂಚಣಿ ಯೋಜನೆ ಕೂಡ ಸೇರಿದೆ. ದೇಶದಾದ್ಯಂತ ಎಲ್ಲಾ ಸಣ್ಣ ವ್ಯಾಪಾರಿಗಳಿಗೆ ಸಾಲ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಮೋದಿ ಸರ್ಕಾರ ಜಾರಿಗೆಗೊಳಿಸಿದೆ.
ಅಟಲ್ ಪಿಂಚಣಿ ಯೋಜನೆಯು (Atal Pension yojana) ನಿವೃತ್ತಿಯ ನಂತರದ ಜೀವನಕ್ಕಾಗಿ ಸ್ವಯಂಪ್ರೇರಿತ ಉಳಿತಾಯವನ್ನುಉತ್ತೇಜಿಸುತ್ತದೆ. 18 ರಿಂದ 40 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಡಿಯಲ್ಲಿ ತಮ್ಮ ಹೆಸರನ್ನ ನೋಂದಾಯಿಸಲು ಅರ್ಹರಾಗಿರುತ್ತಾರೆ. 60 ವರ್ಷದಿಂದ ಈ ಯೋಜನೆಯಡಿ ಕನಿಷ್ಠ 1000 ರೂಪಾಯಿಂದ 5000 ಪಿಂಚಣಿಯನ್ನ ಖಾತರಿ ಪಡಿಸುತ್ತದೆ.
ಪತಿ ಮತ್ತು ಪತ್ನಿ ಇಬ್ಬರೂ ಈ ಯೋಜನೆಗೆ ಸೇರಬಹುದು. ಇಬ್ಬರಿಗೂ 60 ವರ್ಷದಿಂದ ತಿಂಗಳಿಗೆ ರೂ.5 ಸಾವಿರ ಪಿಂಚಣಿ ಸಿಗಲಿದೆ. ಅಂದರೆ ಈ ಯೋಜನೆಯ ಮೂಲಕ ಗಂಡ-ಹೆಂಡತಿ ಇಬ್ಬರೂ ತಿಂಗಳಿಗೆ ರೂ.10 ಸಾವಿರ ಪಿಂಚಣಿ ಪಡೆಯಬಹುದು. ಈ ಯೋಜನೆಗೆ ಸೇರಲು 18 ನೇ ವಯಸ್ಸಿನಲ್ಲಿ ತಿಂಗಳಿಗೆ 42 ರಿಂದ 210 ರೂಪಾಯಿ ಠೇವಣಿ ಮಾಡಬೇಕು.
ಅರ್ಜಿ ನಮೂನೆಯನ್ನ ಭರ್ತಿ ಮಾಡಿದ ನಂತ್ರ ಈ ಫಾರ್ಮ್’ನ್ನ ಬ್ಯಾಂಕಿನಲ್ಲಿ ಸಲ್ಲಿಸಬೇಕು. ಮಾನ್ಯವಾದ ಮೊಬೈಲ್ ಸಂಖ್ಯೆಯ ಜೊತೆಗೆ ಆಧಾರ್ ಕಾರ್ಡ್ನ ನಕಲು ಪ್ರತಿಯನ್ನ ಸಹ ನೀಡಬೇಕು. ಅರ್ಜಿಯನ್ನ ಅನುಮೋದಿಸಿದ ನಂತರ ನೀವು ದೃಢೀಕರಣ ಸಂದೇಶವನ್ನ ಪಡೆಯುತ್ತೀರಿ. ರೂ.1000 ಪಿಂಚಣಿ ಪಡೆಯಲು ತಿಂಗಳಿಗೆ ರೂ.42 ವಂತಿಗೆ ನೀಡಬೇಕು.
ಮಾಸಿಕ, ತ್ರೈಮಾಸಿಕ ಮತ್ತು ಅರ್ಧವಾರ್ಷಿಕ ಆಧಾರದ ಮೇಲೆ ಪಿಂಚಣಿ ಯೋಜನೆಯಲ್ಲಿ ಕೊಡುಗೆಗಳನ್ನ ನೀಡಬಹುದು. ಈ ಮೂಲಕ ಪತಿ ಪತ್ನಿಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಪಿಂಚಣಿ ದೊರೆಯಲಿದೆ. ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ಗಳು ಈ ಯೋಜನೆಯನ್ನ ನೀಡುತ್ತಿದ್ದು, ಅರ್ಜಿ ನಮೂನೆಗಳು ಆನ್ಲೈನ್ ಅಥವಾ ಬ್ಯಾಂಕ್ಗಳಲ್ಲಿ ಲಭ್ಯವಿದೆ.